ಮಡಿಕೇರಿ, ಏ. ೬: ವೀರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ ೨೫ನೇ ವರ್ಷದ ಉತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾ. ೫ರ ಸಂಜೆ ೬ ಗಂಟೆಗೆ ಮುತ್ತಪ್ಪನ ವೆಳ್ಳಾಟಂನೊAದಿಗೆ ಆರಂಭವಾದ ಉತ್ಸವ, ಮುತ್ತಪ್ಪ, ತಿರುವಪ್ಪ, ಸಾಸ್ತಪ್ಪನ್, ಕುಟ್ಟಿಚಾತನ್, ಬಸುರಿಮಲೆ, ಭಗವತಿ, ಗುಳಿಗ, ಕಂಡಕರ್ಣ, ಹೀಗೆ ೮ ರೀತಿಯ ತೆರೆಗಳೊಂದಿಗೆ ಸಂಪನ್ನವಾಯಿತು. ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಬಿ. ರವಿ, ಕಾರ್ಯದರ್ಶಿ ಪಿ.ಆರ್. ರಾಜೇಶ್, ಕೆ.ಎಂ. ವಿಜಯ್, ಪ್ರಶಾಂತ್, ಎಂಜಿ. ಸುನಿ, ಎಂ.ವಿ. ಅನಿ, ಅನಿಸ್, ನಾರಾಯಣ, ಹರೀಶ್, ರಘು, ಪಾಪು, ಕೀರ್ತಿ, ಕಾರ್ತಿಕ್, ಮಾಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್, ಸಮಿತಿ ಸದಸ್ಯರು ಇದ್ದರು.