ಮಡಿಕೇರಿ, ಏ. ೬: ನಗರಸಭೆ ಚುನಾವಣೆ ಹಿನ್ನೆಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪ್ರಥಮ ಹಂತದಲ್ಲಿ ೮ ವಾರ್ಡ್ನಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ನಗರದ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದರು.

ವಾರ್ಡ್ ನಂಬರ್ ೩ ತ್ಯಾಗರಾಜ ಕಾಲೋನಿಯಿಂದ ಮೇರಿ ವೇಗಸ್, ವಾರ್ಡ್ ೪ ಅಜಾದ್ ನಗರದಿಂದ ಮನ್ಸೂರ್ ಅಲಿ, ವಾರ್ಡ್ ನಂಬರ್ ೭ ಗಣಪತಿ ಬೀದಿಯಿಂದ ಅಮೀನ್ ಮೊಹ್ಸಿನ್, ೮ನೇ ವಾರ್ಡ್ ಮಹದೇವಪೇಟೆಯಿಂದ ನಬೀಸ ಅಕ್ಬರ್, ೯ನೇ ವಾರ್ಡ್ ಮಲ್ಲಿಕಾರ್ಜುನ ನಗರದಿಂದ ರಜಿಯಾ ರಫೀಕ್, ೧೦ನೇ ವಾರ್ಡ್ ಪ್ರಗತಿ ಲೇಔಟ್‌ನಿಂದ ಅಬ್ದುಲ್ ಅಡ್ಕರ್, ೧೧ನೇ ವಾರ್ಡ್ ಮಕನ್‌ಗಲ್ಲಿ, ಹಿಲ್ ರೋಡ್‌ನಿಂದ ನೀಮ ಹರ್ಷದ್, ೧೨ನೇ ವಾರ್ಡ್ ದಾಸವಾಳ ರಸ್ತೆಯಿಂದ ಬಷೀರ್ ಸ್ಪರ್ಧಿಸಲಿದ್ದಾರೆ.

ಸ್ಪರ್ಧಿಗಳ ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ, ಎಸ್.ಡಿ.ಪಿ.ಐ. ಪಕ್ಷದ ಅಭ್ಯರ್ಥಿಗಳ ಘೋಷಣೆಯನ್ನು ಬೇರೆ ಪಕ್ಷಗಳು ಕಾಯುತ್ತಿದೆ. ಇದು ಪಕ್ಷದ ಗೆಲುವಿಗೆ ಸಾಕ್ಷಿಯಾಗಿದೆ. ಈ ಹಿಂದಿನ ಸಾಲಿನಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿಗಳು ನಗರಸಭೆ ಸದಸ್ಯರಾದ ಮಹದೇವಪೇಟೆಯಿಂದ ನಬೀಸ ಅಕ್ಬರ್, ೯ನೇ ವಾರ್ಡ್ ಮಲ್ಲಿಕಾರ್ಜುನ ನಗರದಿಂದ ರಜಿಯಾ ರಫೀಕ್, ೧೦ನೇ ವಾರ್ಡ್ ಪ್ರಗತಿ ಲೇಔಟ್‌ನಿಂದ ಅಬ್ದುಲ್ ಅಡ್ಕರ್, ೧೧ನೇ ವಾರ್ಡ್ ಮಕನ್‌ಗಲ್ಲಿ, ಹಿಲ್ ರೋಡ್‌ನಿಂದ ನೀಮ ಹರ್ಷದ್, ೧೨ನೇ ವಾರ್ಡ್ ದಾಸವಾಳ ರಸ್ತೆಯಿಂದ ಬಷೀರ್ ಸ್ಪರ್ಧಿಸಲಿದ್ದಾರೆ.

ಸ್ಪರ್ಧಿಗಳ ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ, ಎಸ್.ಡಿ.ಪಿ.ಐ. ಪಕ್ಷದ ಅಭ್ಯರ್ಥಿಗಳ ಘೋಷಣೆಯನ್ನು ಬೇರೆ ಪಕ್ಷಗಳು ಕಾಯುತ್ತಿದೆ. ಇದು ಪಕ್ಷದ ಗೆಲುವಿಗೆ ಸಾಕ್ಷಿಯಾಗಿದೆ. ಈ ಹಿಂದಿನ ಸಾಲಿನಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿಗಳು ನಗರಸಭೆ ಸದಸ್ಯರಾದ ಇನ್ನುಳಿದ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ತಿಳಿಸಿದರು.

ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಮಾತನಾಡಿ, ಬಡವರ, ಶೋಷಿತರ ಧ್ವನಿಯಾಗಿ ೨೦೦೯ ರಲ್ಲಿ ಪಕ್ಷ ಸ್ಥಾಪನೆಯಾಯಿತು. ತನ್ನ ಧ್ಯೇಯ, ಉದ್ದೇಶದಂತೆ ಕಾರ್ಯೋನ್ಮುಖಗೊಂಡಿದೆ. ಕಳೆದ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ೮ ಅಭ್ಯರ್ಥಿಗಳ ಪೈಕಿ ೪ ಅಭ್ಯರ್ಥಿಗಳು ಗೆಲುವು ಸಾಧಿಸಿ ಸಾಮಾಜಿಕವಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಜೊತೆಗೆ ಸಮಾನತೆಗೆ ಹೋರಾಡಿದ್ದೇವೆ. ವಿಪತ್ತು, ಕೋವಿಡ್ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ಸಮಾಜಮುಖಿಯಾಗಿ ಸ್ಪಂದಿಸಿದ್ದಾರೆ ಎಂದರು. ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಮಹಮ್ಮದ್ ಶಫಿ, ನಗರಾಧ್ಯಕ್ಷ ಕಲೀಲ್ ಪಾಶ, ಉಪಾಧ್ಯಕ್ಷ ಮೈಕಲ್ ವೇಗಸ್, ನಗರಸಭಾ ಚುನಾವಣಾ ಉಸ್ತುವಾರಿ ಮುಸ್ತಾಫ ಸೇರಿದಂತೆ ಇನ್ನಿತರರು ಇದ್ದರು.