ಸುಂಟಿಕೊಪ್ಪ, ಏ. ೪: ಯೇಸು ಕ್ರಿಸ್ತರು ಮಾನವರ ಪಾಪಕ್ಕಾಗಿ ಶಿಲುಬೆಯಲ್ಲಿ ಸಾವನ್ನಪ್ಪಿ ೩ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡು ಬರುವುದನ್ನು ಕ್ರೆöÊಸ್ತರು ಸಂಭ್ರಮಿಸುವ ಕ್ರಿಸ್ತರ ಪುನರುತ್ಥಾನದ (ಈಸ್ಟರ್) ಹಬ್ಬವನ್ನು ಕ್ರೆöÊಸ್ತ ಬಾಂಧವರು ಸಡಗರ ಸಂಭ್ರಮದಿAದ ಆಚರಿಸಿದರು.

ಶನಿವಾರ ಮಧ್ಯರಾತ್ರಿ ನಡೆಯ ಬೇಕಿದ್ದ ಪ್ರಾರ್ಥನೆಯನ್ನು ಕೋವಿಡ್ ಹಿನ್ನೆಲೆ ಸರಕಾರದ ಆದೇಶದ ಅನುಸಾರ ಸಾಮಾಜಿಕ ಅಂತರದೊAದಿಗೆ ರಾತ್ರಿ ೮.೩೦ ಗಂಟೆಗೆ ಸಂತ ಅಂತೋಣಿ ದೇವಾಲಯದಲ್ಲಿ ಧರ್ಮಗುರುಗಳಾದ ಪಾಧರ್ ಅರುಳ್ ಸೆಲ್ವಕುಮಾರ್ ಅವರು ಆರ್ಶೀವಚಿಸಿ, ಜೇನುಮೇಣದಿಂದ ತಯಾರಿಸಲಾದ ಮೊಂಬತ್ತಿ ಹಿಡಿದು ಆರ್ಶೀವಚಿಸಿ ಅದನ್ನು ಬೆಳಗಿಸಿಕೊಂಡು ಭಕ್ತಾದಿಗಳೊಂದಿಗೆ ಮೆರವಣಿಗೆ ಯೊಂದಿಗೆ ದೇವಾಲಯದಲ್ಲಿ ಪ್ರಾರ್ಥನೆ ಹಾಗೂ ಗಾಯನದೊಂದಿಗೆ ಒಳ ತಂದು ಪ್ರತಿಷ್ಠಾಪಿಸಿ ಆಚರಣೆಗೆ ಮುನ್ನುಡಿ ಇಡಲಾಯಿತು. ನಂತರ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆ, ಸಮಾಧಿಯಿಂದ ಪುನರುತ್ಥಾನಗೊಂಡ ಯೇಸುವಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆಯನ್ನು ಅರ್ಪಿಸಿದರು.