ಸೋಮವಾರಪೇಟೆ, ಏ. ೩: ಇಲ್ಲಿನ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಪ್ರಣವ್ ಕಶ್ಯಪ್ ಅವರ ಅಧ್ಯಕ್ಷತೆಯಲ್ಲಿ ಸಮೀಪದ ಚೌಡ್ಲು ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಜೇಸೀ ಅಧ್ಯಕ್ಷೆ ಮಾಯಾ ಗಿರೀಶ್, ಮಾಜೀ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಕಾರ್ಯಕ್ರಮ ಉಪಾಧ್ಯಕ್ಷೆ ರುಬೀನಾ, ಪದಾಧಿಕಾರಿಗಳಾದ ಕೆ.ಎ. ಪ್ರಕಾಶ್, ವಿದ್ಯಾ ಸೋಮೇಶ್, ಗಿರೀಶ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲ ಅವರುಗಳು ಭಾಗವಹಿಸಿದ್ದರು.