ಕಡಂಗ, ಏ. ೩: ಕುಂಜಿಲ ವಯಕೋಲ್ ಫುಟ್ಬಾಲ್ ಪ್ರೀಮಿಯರ್ ಲೀಗ್‌ನ ಎರಡನೇ ವರ್ಷದ ಫುಟ್ಬಾಲ್ ಪಂದ್ಯಾಟ ವಯಕೋಲಿನ ಕ್ರೀಡಾಂಗಣದಲ್ಲಿ ನಡೆಯಿತು. ರಿಂಷಾ ಫ್ರೆಂಡ್ಸ್ ಮತ್ತು ಶಾಜ್ ಫ್ರೆಂಡ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮುಹಮ್ಮದ್ ಫಾಹಾದ್ ಅವರ ೬ನೇ ನಿಮಿಷದ ಗೋಲಿನಿಂದಾಗಿ ರಿಂಷಾ ಫ್ರೆಂಡ್ಸ್ ತಂಡವು ಶಾಜ್ ಫ್ರೆಂಡ್ಸ್ ತಂಡವನ್ನು ಮಣಿಸಲು ಸಾಧ್ಯವಾಯಿತು. ಈ ಮೂಲಕ ಎರಡನೇ ಬಾರಿಯೂ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತು. ರನ್ನರ್ ಅಪ್ ಟ್ರೋಫಿ ಶಾಜ್ ಫ್ರೆಂಡ್ಸ್ ಪಡೆದುಕೊಂಡಿತು. ಅತ್ಯುತ್ತಮ ಆಟಗಾರನಾಗಿ ಮುಹಮ್ಮದ್ ಫಾಹಾದ್ ಮತ್ತು ಆಕರ್ಷಕ ಆಟಗಾರ ಪ್ರಶಸ್ತಿಯನ್ನು ಫಾಯಿಜ್ ಅವರು ಪಡೆದು ಕೊಂಡರು. ವಿಜೇತ ತಂಡಗಳು ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡರು. ಈ ಸಂದರ್ಭ ಊರಿನ ಹಿರಿಯರಾದ ಅಹ್ಮದ್, ಅಬು, ಹಫೀಜ್, ಮಿಲನ್, ಹುಸೈನಾರ್, ಸಂದೇಶ, ಮುಸ್ತಫಾ, ಮೊಯ್ದು ಉಸ್ಮಾನ್ ಮುಂತಾದವರು ಹಾಜರಿದ್ದು, ಪಂದ್ಯಾಟ ವೀಕ್ಷಿಸಿದರು.