ಮಡಿಕೇರಿ, ಏ. ೪: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಪಾವತಿ, ಇಎಸ್‌ಐ, ಪಿಎಫ್, ವೃತ್ತಿ ತೆರಿಗೆ ಮತ್ತು ಜಿಎಸ್‌ಟಿ ಕುರಿತು ತರಬೇತಿ ಕಾರ್ಯಾಗಾರವು ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ನಗರದ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಯಾಗಾರ ನಡೆಯಿತು.

ಕಾರ್ಯಗಾರದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಮಾತನಾಡಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆ ಮಾರ್ಗಸೂಚಿಯಂತೆ ಕನಿಷ್ಟ ವೇತನ ಪಾವತಿ ಮಾಡಬೇಕು. ಪಿಎಫ್ ಕಟಾವಣೆ ಮಾಡುತ್ತಿದ್ದಾರೆಯೇ ಎಂಬುದನ್ನು ಪ್ರತಿ ತಿಂಗಳು ಏಜೆನ್ಸಿ ಅವರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಗುತ್ತಿಗೆ ಕಾರ್ಮಿಕರ ಹೆರಿಗೆ ಭತ್ಯೆ ಹಾಗೂ ಸಮಾನ ವೇತನ ಕಾಯ್ದೆಯಡಿ ಅಗತ್ಯ ಸೌಲಭ್ಯಗಳು ತಲುಪುತ್ತಿವೆಯೇ ಎಂಬುದನ್ನು ಗಮನಿಸಬೇಕು ಎಂದರು.

ಹೊರಗುತ್ತಿಗೆಯ ಆಧಾರದಲ್ಲಿ ನೇಮಕವಾದ ಸ್ಟೆನೋಗ್ರಾಫರ್, ಸಿ ದರ್ಜೆ ನೌಕರ, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು ‘ಡಿ’ ದರ್ಜೆ ನೌಕರರಿಗೆ ನಿಗಧಿಪಡಿಸಿರುವ ಕನಿಷ್ಟ ವೇತನ, ಇಎಸ್‌ಐ, ಪಿಎಫ್, ಮತ್ತಿತರ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಅವರು ವಿವರಿಸಿದರು.

ಪಿಎಫ್, ಇಸಿಆರ್ ಕಾಫಿಯಲ್ಲಿ ಇರುವ ವೇತನವನ್ನು ಪರಿಶೀಲಿಸಬೇಕು. ಪ್ರತಿ ತಿಂಗಳು ಸಿಬ್ಬಂದಿ ಬ್ಯಾಂಕ್ ಖಾತೆಗೆ ವೇತನ ಜಮಾ ಆಗಿರುವ ಕುರಿತು ಪರಿಶೀಲನೆ ಮಾಡಬೇಕು. ಪಿಎಫ್ ಕಡಿತವಾದ ಕುರಿತು ಆನ್‌ಲೈನ್ ಮುಖಾಂತರ ವೈಯಕ್ತಿಕ ಚಲನ್ ಪ್ರತಿಯನ್ನು ಪರಿಶೀಲನೆ ಮಾಡಬೇಕು ಎಂದರು.

ಮೂಲ ಮಾಲೀಕರು, ಗುತ್ತಿಗೆದಾರರು ಸರ್ಕಾರ ನೀಡಿರುವ ಅಧಿಸೂಚನೆಯ ಅನುಸೂಚಿತ ಉದ್ದಿಮೆಗೆ ಸಂಬAಧಿಸಿದAತೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನದ ಅಧಿಸೂಚನೆಯಂತೆ ಕನಿಷ್ಟ ವೇತನದ ದರಗಳಲ್ಲಿ ವೇತನ ಪಾವತಿಸಬೇಕು. ಮೂಲ ಮಾಲೀಕರು ತಮ್ಮ ಕಾರ್ಮಿಕರಿಗೆ, ನೌಕರರಿಗೆ ಗುತ್ತಿಗೆದಾರರು ಪಾವತಿಸಿರುವ ವೇತನದ ಕನಿಷ್ಟ ವೇತನದ ದರಕ್ಕಿಂತ ಕಡಿಮೆ ಇಲ್ಲದಂತೆ ಪಾವತಿಸಿರುತ್ತಾರೆಯೇ ಎಂದು ದಾಖಲೆಗಳನ್ನು ನಿರ್ವಹಿಸಿ, ಇರಿಸಿಕೊಳ್ಳಬೇಕು. ಅಲ್ಲದೇ ಪ್ರತೀ ವರ್ಷ ಏಪ್ರಿಲ್‌ನಿಂದ ಸರ್ಕಾರ ಹೆಚ್ಚುವರಿ ಮಾಡುವ ತುಟ್ಟಿಭತ್ಯೆಯನ್ನು ಸಂಬAಧಪಟ್ಟ ತಿಂಗಳಿನಿAದ ಅನ್ವಯವಾಗುವಂತೆ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವ್ಯತ್ಯಾಸದ ಮೊತ್ತಕ್ಕೆ ಕ್ಲೆöÊಂ ಅರ್ಜಿ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅನಿಲ್ ಬಗಡಿ ಅವರು ವಿವರಿಸಿದರು.

ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಇಲಾಖೆಗೆ ಕಾರ್ಮಿಕ ಇಲಾಖೆಯು ಹೊರಡಿಸಿದ ಸುತ್ತೋಲೆಯಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಹಾಸ್ಪಿಟಲ್ ಮತ್ತು ನರ್ಸಿಂಗ್ ಹೋಂ, ಹಾಸ್ಟೇಲ್‌ಗಳು, ಸೆಕ್ಯುರಿಟಿ ಏಜೆನ್ಸಿ, ಖಾಸಗಿ ಸಫಾಯಿ ಕರ್ಮಚಾರಿಗಳಿಗೆ ವೇತನ ಪಾವತಿಸಬೇಕು ಎಂದರು.

ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ ಹೊರಗುತ್ತಿಗೆಯಡಿ ನಿಯೋಜಿಸಿಕೊಳ್ಳುವ ಸಿಬ್ಬಂದಿಗಳ ವೇತನ ಪಾವತಿ, ಪಿಎಫ್ ಕಟಾವಣೆ ಹಾಗೂ ಇಎಸ್‌ಐ ಸಂಬAಧ ಕಾರ್ಮಿಕ ಇಲಾಖೆ ಕಾಯ್ದೆಯಂತೆ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಪಾವತಿಸಬೇಕು ಎಂದರು.

ನೌಕರರ ರಾಜ್ಯ ವಿಮೆ (ಇಎಸ್‌ಐ) ಇಲಾಖೆಯ ಅಧಿಕಾರಿ ರಘುನಂದನ್ ಅವರು ಇಎಸ್‌ಐ ಕಟಾವಣೆ ಕುರಿತು ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಎಂ.ಎA. ಯತ್ನಟ್ಟಿ ಇತರರು ಇದ್ದರು.