ಶ್ರೀಮಂಗಲ, ಏ. ೪: ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಜಿಕೇರಿ ನಾಡ್ ಕೂಟದ ಆಶ್ರಯ ದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬದ ನಾಲ್ಕನೇ ಹಂತದ ಪಂದ್ಯಾವಳಿಯಲ್ಲಿ ೩೨ ತಂಡಗಳ ನಡುವೆ ರೋಚಕ ಪೈಪೋಟಿ ನಡೆದು ೧೬ ಕುಟುಂಬಗಳು ಪ್ರೀ ಕ್ವಾರ್ಟರ್‌ಗೆ ತಲುಪಿದೆ. ಪರದಂಡ-ಕೊAಗAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರದಂಡ ತಂಡವು ೨-೧ ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಮಲ್ಚೀರ-ಕಡೇಮಾಡ ಪಂದ್ಯ ದಲ್ಲಿ ೩-೧ ಅಂತರದಲ್ಲಿ ಕಡೇಮಾಡ ತಂಡ, ಚೌರೀರ-ಸಣ್ಣುವಂಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಸಣ್ಣುವಂಡ ತಂಡ, ಬೊವ್ವೇರಿಯಂಡ-ಮುಕ್ಕಾಟೀರ (ಹರಿಹರ) ಪಂದ್ಯದಲ್ಲಿ ೨-೦ ಅಂತರದಲ್ಲಿ ಮುಕ್ಕಾಟೀರ ತಂಡ, ಪಾಲಂದಿರ-ಮAಡೇಪAಡ ಪಂದ್ಯದಲ್ಲಿ ೩-೨ ಅಂತರದಲ್ಲಿ ಮಂಡೇಪAಡ ತಂಡ, ಕೋಳೆರ-ಚಪ್ಪಂಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಚಪ್ಪಂಡ ತಂಡ, ಕುಪ್ಪಂಡ-ಮೂಕೋAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕುಪ್ಪಂಡ (ಕೈಕೇರಿ) ತಂಡ, ಬೇಪಡಿಯಂಡ-ಪೆಮ್ಮAಡ ಪಂದ್ಯದಲ್ಲಿ ೨-೧ ಅಂತರದಲ್ಲಿ ಪೆಮ್ಮಂಡ ತಂಡ, ಪಾಲೇಕಂಡ-ಬಯವAಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಪಾಲೇಕಂಡ ತಂಡ, ಐಚೆಟ್ಟೀರ-ಕರ್ತಮಾಡ (ಬಿರುನಾಣಿ) ಪಂದ್ಯದಲ್ಲಿ ೧-೦ ಅಂತರದಲ್ಲಿ ಐಚೆಟ್ಟೀರ ತಂಡ, ಅರೆಯಡ-ಪುಚ್ಚಿಮಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಪುಚ್ಚಿಮಡ ತಂಡ, ಕಳ್ಳಿಚಂಡ-ಕಲಿಯAಡ ಪಂದ್ಯದಲ್ಲಿ

೧-೦ ಅಂತರದಲ್ಲಿ ಕಲಿಯಂಡ ತಂಡ, ನೆಲ್ಲಮಕ್ಕಡ-ಚೋಯಮಾಡಂಡ ಪಂದ್ಯದಲ್ಲಿ ೫-೦ ಅಂತರದಲ್ಲಿ ನೆಲ್ಲಮಕ್ಕಡ ತಂಡ, ಇಟ್ಟೀರ-ಚೇಂದಿರ ಪಂದ್ಯದಲ್ಲಿ ೧-೦ ಅಂತರದಲ್ಲಿ ಇಟ್ಟೀರ ತಂಡ, ಚಂದೂರ-ಚೆಕ್ಕೇರ ಪಂದ್ಯದಲ್ಲಿ ೩-೨ ಅಂತರದಲ್ಲಿ ಚಂದೂರ ತಂಡ, ಮುರುವಂಡ-ಮಾಚAಗಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಮುರುವಂಡ ತಂಡ ಗೆಲುವು ಪಡೆದು ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದರು.

ಅಪರಾಹ್ನ ನಡೆದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ-ಕಡೇಮಾಡ ತಂಡಗಳ ನಡುವೆ ನಡೆದ ಪ್ರೀ ಕ್ವಾರ್ಟರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಪರದಂಡ ತಂಡ ಗೆಲುವು ಸಾಧಿಸಿತು, ಸಣ್ಣುವಂಡ-ಮುಕ್ಕಾಟೀರ (ಹರಿಹರ) ಪಂದ್ಯದಲ್ಲಿ ೧-೦ ಅಂತರದಲ್ಲಿ ಮುಕ್ಕಾಟೀರ ತಂಡ, ಮಂಡೇಪAಡ-ಚಪ್ಪAಡ ಪಂದ್ಯದಲ್ಲಿ ೫-೦ ಅಂತರದಲ್ಲಿ ಮಂಡೇಪAಡ ತಂಡ, ಕುಪ್ಪಂಡ (ಕೈಕೇರಿ)-ಪೆಮ್ಮಂಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕುಪ್ಪಂಡ ತಂಡ, ಪಾಲೇಕಂಡ-ಐಚೆಟ್ಟೀರ ಪಂದ್ಯದಲ್ಲಿ ೧-೦ ಅಂತರದಲ್ಲಿ ಐಚೆಟ್ಟೀರ ತಂಡ, ಪುಚ್ಚಿಮಡ-ಕಲಿಯಂಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕಲಿಯಂಡ ತಂಡ, ನೆಲ್ಲಮಕ್ಕಡ-ಇಟ್ಟೀರ ಪಂದ್ಯದಲ್ಲಿ ೧-೦ ಅಂತರದಲ್ಲಿ ನೆಲ್ಲಮಕ್ಕಡ ತಂಡ, ಚಂದೂರ-ಮುರುವAಡ ಪಂದ್ಯದಲ್ಲಿ ೨-೧ ಅಂತರದಲ್ಲಿ ಚಂದೂರ ತಂಡವು ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿತು.

ಇಂದು ಕ್ವಾಟರ್ ಫೈನಲ್ : ಇಂದು ಪೂರ್ವಾಹ್ನ ೧೦ ಗಂಟೆಗೆ ನಡೆಯುವ ಫ್ರಥಮ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಪರದಂಡ-ಮುಕ್ಕಾಟೀರ (ಬೆಳ್ಳೂರು-ಹರಿಹರ) ನಡುವೆ ಪೈಪೋಟಿ ನಡೆಯಲಿದೆ, ೧೦.೨೦ ನಿಮಿಷಕ್ಕೆ ಮಂಡೇಪAಡ-ಕುಪ್ಪAಡ (ಕೈಕೇರಿ)ಗಳ ನಡುವೆ, ೧೦.೪೦ ಗಂಟೆಗೆ ಐಚೆಟ್ಟೀರ-ಕಲಿಯಂಡ ತಂಡಗಳ ನಡುವೆ, ೧೧ ಗಂಟೆಗೆ ನೆಲ್ಲಮಕ್ಕಡ-ಚಂದೂರ ತಂಡಗಳ ಮಧ್ಯೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.

ಸೆಮಿಫೈನಲ್ : ಪರದಂಡ-ಮುಕ್ಕಾಟೀರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಗೆದ್ದ ತಂಡವು ಮಂಡೇಪAಡ-ಕುಪ್ಪAಡ ತಂಡಗಳ ನಡುವೆ ಗೆದ್ದ ತಂಡದೊAದಿಗೆ ಅಪರಾಹ್ನ ೧೨.೩೦ ಗಂಟೆಗೆ ಸೆಮಿಫೈನಲ್ ಆಡಲಿದೆ. ಐಚೆಟ್ಟೀರ-ಕಲಿಯಂಡ ತಂಡಗಳ ನಡುವೆ ಗೆದ್ದ ತಂಡವು ನೆಲ್ಲಮಕ್ಕಡ-ಚಂದೂರ ತಂಡಗಳ ನಡುವೆ ನಡೆದ ಪೈಪೋಟಿಯಲ್ಲಿ ಗೆದ್ದ ತಂಡದೊAದಿಗೆ ಅಪರಾಹ್ನ ೧ ಗಂಟೆಗೆ ಸೆಮಿಫೈನಲ್ ಆಡಲಿದೆ. ಸೆಮಿಫೈನಲ್‌ನಲ್ಲಿ ಗೆದ್ದ ತಂಡಗಳು ಅಪರಾಹ್ನ ೩ ಗಂಟೆಗೆ ಫೈನಲ್ ಪಂದ್ಯದಲ್ಲಿ ಆಡಲಿದೆ.