ಮಡಿಕೇರಿ, ಏ. ೩: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ ೨೦೨೦-೨೧ ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ಪಡೆಯಲು ನವೀಕರಣ/ ಹೊಸ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ ೩೧ ಕೊನಯ ದಿನಾಂಕವೆAದು ಸೂಚಿಸಲಾಗಿತ್ತು, ಇದೀಗ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ ೩೦ ರವರೆಗೆ ವಿಸ್ತರಿಸಲಾಗಿದೆ. ಮೆಟ್ರಕ್ ಪೂರ್ವ /ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು. (hಣಣಠಿ://ತಿತಿತಿ.ssಠಿ.ಞಚಿಡಿಟಿಚಿಣಚಿಞಚಿ.gov.iಟಿ)

ವಿದ್ಯಾರ್ಥಿ ವೇತನದ ಕುಂದುಕೊರತೆಗೆ ಸಹಾಯವಾಣಿ ರಾಜ್ಯ ಮಟ್ಟದ ಸಹಾಯವಾಣಿ ೦೮೦-೨೨೫೩೫೯೩೧, ಮಡಿಕೇರಿ ೦೮೨೭೨-೨೨೫೫೨೮/ ೨೨೦೨೧೪, ಸೋಮವಾರಪೇಟೆ ೮೫೪೮೦೬೮೫೧೯ ಮತ್ತು ವೀರಾಜಪೇಟೆ ೯೭೪೨೩೭೮೬೮೮/೯೯೦೦೭೩೧೦೩೭ನ್ನು ಹಾಗೂ ಇಲಾಖಾ ವೆಬ್‌ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.ಟಿiಛಿ.iಟಿನಿಂದ ಅಲ್ಪಸಂಖ್ಯಾತರ ಎಲ್ಲಾ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮತ್ತು ಇತರ ಸೌಲಭ್ಯಗಳ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಿಂಗರಾಜಪ್ಪ ತಿಳಿಸಿದ್ದಾರೆ.