ಸೋಮವಾರಪೇಟೆ, ಏ. ೩: ಸಂಬAಧಿಕರಿಲ್ಲದೇ ಕೊಡ್ಲಿಪೇಟೆಯಲ್ಲಿ ಅನಾಥವಾಗಿ ತಿರುಗುತ್ತಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಹಾಗೂ ಸ್ಥಳೀಯ ದಾನಿಗಳು ಮಾನವೀಯತೆ ಮೆರೆದಿದ್ದಾರೆ.

ಸ್ವಂತ ಮನೆಯೂ ಇಲ್ಲದೇ, ಸಂಬAಧಿಕರೂ ಇಲ್ಲದೇ ಅನಾಥವಾಗಿ ಓಡಾಡುತ್ತಿದ್ದ ವೃದ್ಧೆ ಗೌರಮ್ಮ ಅವರನ್ನು ಕೊಡ್ಲಿಪೇಟೆಯ ಶುಂಠಿ ವ್ಯಾಪಾರಿ ಆಸಿಫ್ ಅವರು ಗಮನಿಸಿ, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್ ಅವರೊಂದಿಗೆ ಚರ್ಚಿಸಿ ವೃದ್ಧೆಗೆ ಸಹಾಯ ಮಾಡಲು ಮುಂದಾದರು.

ನAತರ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರ ಸಹಕಾರದೊಂದಿಗೆ ಮಡಿಕೇರಿಯ ಶಕ್ತಿ ವೃದ್ಧಾಶ್ರಮದ ಸತೀಶ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು. ನಂತರ ವೃದ್ಧೆ ಗೌರಮ್ಮ ಅವರಿಗೆ ಕೊರೊನಾ ಪರೀಕ್ಷೆ ನಡೆಸಿ, ಶನಿವಾರಸಂತೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಲಾಯಿತು. ಕೊಡ್ಲಿಪೇಟೆ ಗ್ರಾ.ಪಂ.ನಿAದ ವಾಹನದ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆ ಗೌರಮ್ಮ ಅವರನ್ನು ವೃದ್ಧಾಶ್ರಮಕ್ಕೆ ಬಿಡಲಾಯಿತು.

ಮಾನವೀಯ ಕಾರ್ಯದಲ್ಲಿ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್, ಕೊಡ್ಲಿಪೇಟೆಯ ಆಸೀಫ್ ಸೇರಿದಂತೆ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.