ಮಡಿಕೇರಿ, ಏ. ೪: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಜನತೆಯ ನಿದ್ದೆಗೆಡಿಸಿದ್ದ ಹುಲಿ ದಾಳಿ ಪ್ರಕರಣ ಇನ್ನೇನು ದೂರಾಯಿತು ಎಂಬ ಭಾವನೆಯಲ್ಲಿರುವಂತೆಯೇ ಇಂದು ಕುಮುಟೂರು ಗ್ರಾಮದಲ್ಲಿ ಹುಲಿಯೊಂದು ಕಾಣಿಸಿಕೊಂಡು ಮತ್ತೆ ಆತಂಕ ಸೃಷ್ಟಿಸಿದೆ. ಅಲ್ಲಿನ ಮಚ್ಚಾ ಮಾಡ ನವೀನ್ ಅವರ ತೋಟದಲ್ಲಿ ಅಪರಾಹ್ನ ಹುಲಿ ತಿರುಗಾಡಿದ್ದನ್ನು ತೋಟದ ಮಾಲೀಕರು ಹಾಗೂ ಕಾರ್ಮಿಕರು ಗಮನಿಸಿದ್ದಾರೆ.
ಈ ಬಗ್ಗೆ ಜನರು ಎಚ್ಚರದಿಂದಿರು ವಂತೆ ಅಲ್ಲಿನ ಪ್ರಮುಖ ರಾದ ಕೋಟ್ರಂಗಡ ತಿಮ್ಮಯ್ಯ ಅವರು ತಿಳಿಸಿದ್ದಾರೆ. ಕುಮಟೂರು ಗ್ರಾಮದಲ್ಲಿ ಮಡಿಕೇರಿ, ಏ. ೪: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಜನತೆಯ ನಿದ್ದೆಗೆಡಿಸಿದ್ದ ಹುಲಿ ದಾಳಿ ಪ್ರಕರಣ ಇನ್ನೇನು ದೂರಾಯಿತು ಎಂಬ ಭಾವನೆಯಲ್ಲಿರುವಂತೆಯೇ ಇಂದು ಕುಮುಟೂರು ಗ್ರಾಮದಲ್ಲಿ ಹುಲಿಯೊಂದು ಕಾಣಿಸಿಕೊಂಡು ಮತ್ತೆ ಆತಂಕ ಸೃಷ್ಟಿಸಿದೆ. ಅಲ್ಲಿನ ಮಚ್ಚಾ ಮಾಡ ನವೀನ್ ಅವರ ತೋಟದಲ್ಲಿ ಅಪರಾಹ್ನ ಹುಲಿ ತಿರುಗಾಡಿದ್ದನ್ನು ತೋಟದ ಮಾಲೀಕರು ಹಾಗೂ ಕಾರ್ಮಿಕರು ಗಮನಿಸಿದ್ದಾರೆ.
ಈ ಬಗ್ಗೆ ಜನರು ಎಚ್ಚರದಿಂದಿರು ವಂತೆ ಅಲ್ಲಿನ ಪ್ರಮುಖ ರಾದ ಕೋಟ್ರಂಗಡ ತಿಮ್ಮಯ್ಯ ಅವರು ತಿಳಿಸಿದ್ದಾರೆ. ಕುಮಟೂರು ಗ್ರಾಮದಲ್ಲಿ ವದು ಜನತೆಯಲ್ಲಿ ಆತಂಕ ಮರುಕಳಿಸವಂತಾಗಿದೆ.
ಬೆಳೆಗಾರರ ಸಂಕಷ್ಟ
ಕುಮಟೂರು ವ್ಯಾಪ್ತಿಯಲ್ಲಿ ಪ್ರಸ್ತಕ ಸಾಲಿನಲ್ಲಿ ಅಗತ್ಯ ಮಳೆಯೂ ಆಗಿಲ್ಲ. ಜಿಲ್ಲೆಯ ಹಲವೆಡೆ ಮಳೆಯಾಗಿದ್ದರೂ ಇಲ್ಲಿ ಕೇವಲ ೩೦ ರಿಂದ ೪೦ ಸೆಂಟ್‌ನಷ್ಟು ಮಾತ್ರ ಮಳೆಯಾಗಿದ್ದು, ತೋಟ ಮಾಲೀಕರು ಅನಿವಾರ್ಯ ವಾಗಿ ತೋಟಕ್ಕೆ ನೀರು ಹಾಯಿಸಲೇ ಬೇಕಾಗಿದೆ. ಸಂಕಷ್ಟದ ನಡುವೆ ಈ ಕೆಲಸ ನಿರ್ವಹಿಸ ಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಹುಲಿಯ ದರ್ಶನ ವಾಗಿರುವದು ಮತ್ತೊಂದು ಸಮಸ್ಯೆ ತಂದೊಡ್ಡಿದೆ ಎಂದು ತಿಮ್ಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಳಕಿಗೆ ಬಾರದ ಪ್ರಕರಣ
ಈ ನಡುವೆ ಕೆಲ ದಿನಗಳ ಹಿಂದೆ ಇದೇ ಗ್ರಾಮದ ಸನಿಹದಲ್ಲಿ ಕಾಡೆಮ್ಮೆಯೊಂದನ್ನು ಹುಲಿ ತಿಂದು ಹಾಕಿದೆ ಎನ್ನಲಾಗಿದೆ. ಆದರೆ ಈ ಪ್ರಕರಣ ಬೆಳಕಿಗೆ ಬಂದಿಲ್ಲ. ಅರಣ್ಯ ಇಲಾಖೆಗೆ ಮಾಹಿತಿಯಿದ್ದರೂ ಇದು ಪ್ರಚಾರವಾಗಿಲ್ಲವೆನ್ನಲಾಗಿದೆ.