ಪ್ರಜ್ವಲ್ ಜಿ.ಆರ್.

ಮಡಿಕೇರಿ, ಏ. ೪: ಕೇಂದ್ರ ಸರಕಾರದ ರಾಷ್ಟಿçÃಯ ಬಿದಿರು ಯೋಜನೆಯಡಿಯಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ವೀರಾಜಪೇಟೆ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ೨೫,೦೦೦ ಬಿದಿರು ಸಸಿಗಳನ್ನು ರೈತರಿಗೆ ವಿತರಿಸಲಾಗಿದ್ದು, ಒಟ್ಟು ೩೪ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ೨೦೦೬-೦೭ ರಂದು ಕೇಂದ್ರ ಪ್ರಜ್ವಲ್ ಜಿ.ಆರ್.

ಮಡಿಕೇರಿ, ಏ. ೪: ಕೇಂದ್ರ ಸರಕಾರದ ರಾಷ್ಟಿçÃಯ ಬಿದಿರು ಯೋಜನೆಯಡಿಯಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ವೀರಾಜಪೇಟೆ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ೨೫,೦೦೦ ಬಿದಿರು ಸಸಿಗಳನ್ನು ರೈತರಿಗೆ ವಿತರಿಸಲಾಗಿದ್ದು, ಒಟ್ಟು ೩೪ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ೨೦೦೬-೦೭ ರಂದು ಕೇಂದ್ರ ನೀಡಲಾಗುತ್ತದೆ. ೧ ಹೆಕ್ಟೇರ್ ಪ್ರದೇಶದಲ್ಲಿ ೪೦೦ ಸಸಿಗಳನ್ನು ಬೆಳೆಸಬಹುದಾಗಿದೆ. ಬೆಳೆಸಿದ ಬಿದಿರನ್ನು ೪ ವರ್ಷಗಳ ಕಾಲ ಪೋಷಿಸಿದ ನಂತರ ಕಡಿದು ಉತ್ಪನ್ನ ತಯಾರಿಗೆ ಬಳಸಬಹುದಾಗಿದೆ, ನಂತರದಲ್ಲಿ ಪ್ರತೀ ವರ್ಷದಂತೆ ಬಿದಿರನ್ನು ಕಡಿಯಬಹುದಾಗಿದೆ. ಬಿದಿರಿನಿಂದ ಹಲವಷ್ಟು ಪರಿಸರ ಪ್ರೇಮಿ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದು, ಮಹಾವಿದ್ಯಾಲಯವು ರೈತರಿಗೆ ಪ್ರತೀ ಹಂತದಲ್ಲಿಯೂ ಸಹಕಾರ ನೀಡುತ್ತಿದೆ.

ರೈತರಿಗೆ ತರಬೇತಿ

ಬಿದಿರು ಬೆಳಿಸಿ, ಪೋಷಿಸಿದ ನಂತರ ಅದನ್ನು ಕಡಿದು ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಬAಧ ಮಹಾವಿದ್ಯಾಲಯದಲ್ಲಿಯೇ ರೈತರಿಗೆ ತರಬೇತಿ ನೀಡಲಾಗುತ್ತದೆ. ಬಿದಿರಿಗೆ ವಿವಿಧ ರೀತಿಯ ಆಕೃತಿಗಳನ್ನು ನೀಡಿ ಸೌಂದರ್ಯ ಹೆಚ್ಚಿಸಿ ಉತ್ಪನ್ನಗಳನ್ನಾಗಿ ಮಾರ್ಪಡಿಸಲು ಹಲವಷ್ಟು ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಯಂತ್ರಗಳ ಮೂಲಕ ಪೆನ್‌ಸ್ಟಾö್ಯಂಡ್, ಅಗರಬತ್ತಿ, ಟೂತ್‌ಪಿಕ್‌ಗಳಂತಹ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

(ಮೊದಲ ಪುಟದಿಂದ) ಉತ್ಪನ್ನಗಳನ್ನು ರೈತರೇ ತಯಾರಿಸಲು ಇಚ್ಚಿಸಿದರೆ, ಅವರಿಗೆ ಈ ಸಂಬAಧ ಮಹಾವಿದ್ಯಾಲಯದಲ್ಲಿನ ಸೌಲಭ್ಯಗಳನ್ನು ಬಳಸಿ ತರಬೇತಿ ನೀಡಲಾಗುತ್ತದೆ. ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮಹಾವಿದ್ಯಾಲಯ ಸಹಾಯ ಮಾಡುತ್ತದೆ. ಈ ಮೂಲಕ ರೈತರು ತಯಾರಿಸಿರುವ ಬಿದಿರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಒಂದು ವೇಳೆ ಬಿದಿರನ್ನು ರೈತರು ನೇರವಾಗಿ ಮಹಾವಿದ್ಯಾಲಯಕ್ಕೆ ನೀಡಲು ಇಚ್ಚಿಸಿದರೆ, ಅದಕ್ಕೂ ಕೂಡ ಅವಕಾಶವಿದೆ. ಈ ರೀತಿಯ ಕಚ್ಚಾ ಬಿದಿರನ್ನು ರೈತರಿಂದ ಖರೀದಿಸಿ ಮೌಲ್ಯವರ್ಧನೆಯ ಬಳಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಿವ ಕೆಲಸ ಮಹಾವಿದ್ಯಾಲಯವೇ ಮಾಡುತ್ತದೆ.

ಸಸ್ಯಪಾಲನಾ ಕ್ಷೇತ್ರ

ಬಿದಿರು ಸಸಿಗಳ ಪೋಷಣೆಗೆಂದು ವಿವಿಧ ತಳಿಯ ಬಿದಿರುಗಳನ್ನು ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿನ ಸಸ್ಯಪಾಲನಾ ಕ್ಷೇತ್ರದಲ್ಲಿಯೇ ಬೆಳೆಸಲಾಗುತ್ತಿದೆ. ಬರ್ಮಾ, ಯ್ಯಾಸ್ಪರ್, ಟುಲ್ಡಾ ಹಾಗೂ ಸ್ಟಾಕ್‌ಸಾಯ್ ಎಂಬ ೪ ತಳಿಗಳ ಬಿದಿರುಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಇದೇ ಸಸಿಗಳನ್ನು ರಾಷ್ಟಿçÃಯ ಬಿದಿರು ಯೋಜನೆಯ ಮೂಲಕ ರೈತರಿಗೆ ವಿತರಿಸಲಾಗುತ್ತದೆ.

ಮಹಾವಿದ್ಯಾಲಯದ ಡೀನ್ ಸಿ.ಜಿ ಕುಶಾಲಪ್ಪ, ಬಿದಿರು ಯೋಜನೆಯ ನಿದೇರ್ಶಕರೂ ಆದ ಮಹಾವಿದ್ಯಾಲಯದ ಮುಖ್ಯ ಪ್ರಾಧ್ಯಾಪಕ ರಾಮಕೃಷ್ಣ ಹೆಗ್ಡೆ, ಸಹಾಯಕ ಪ್ರಾಧ್ಯಾಪಕರಾದÀ ಸತೀಶ್ ಬಿ.ಎನ್, ಹರೀಶ್, ಮಹೇಶ್ವರಪ್ಪ ಅವರುಗಳ ಮಾರ್ಗದರ್ಶನದಲ್ಲಿ ಬಿದಿರು ಯೋಜನೆಯ ಪ್ರಯೋಜನವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ. ಏಪ್ರಿಲ್ ೧ ರಿಂದ ರೈತರಿಗೆ ೩ ತಿಂಗಳುಗಳ ಕಾಲ ಬಿದಿರು ಸಸ್ಯಪಾಲನೆ ಹಾಗೂ ಮೌಲ್ಯವರ್ಧನೆ ಸಂಬAಧ ತರಬೇತಿ ನೀಡಲಾಗುತ್ತಿದ್ದು, ಒಟ್ಟು ೨೦ ರೈತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.