ನಾಪೋಕ್ಲು, ಏ. ೪: ಇಂದಿರಾ ನಗರದಲ್ಲಿ ಕೂಲಿ ಕಾರ್ಮಿಕ ರವಿ ಎಂಬವನನ್ನು ಕ್ಷÄಲಕ ಕಾರಣಕ್ಕೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ. ಆರ್.ಡಿ. ಬಾಲಕೃಷ್ಣ ಎಂಬಾತನನ್ನು ನಾಪೋಕ್ಲು ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆ.
ರವಿ ಮತ್ತು ಬಾಲಕೃಷ್ಣ ಎಂಬವರು ಕೂಲಿ ಕೆಲಸಕ್ಕಾಗಿ ನಾಪೆೆÇÃಕ್ಲುವಿಗೆ ಬಂದು ಇಂದಿರಾ ನಗರದಲ್ಲಿ ವಾಸವಾಗಿದ್ದು ತಾ, ೩೧ ರಂದು ಇವರು ಹೊಟೇಲ್‌ನಲ್ಲಿ ಊಟ ಮುಗಿಸಿ ಮಲಗಲು ರೂಂ ಗೆ ಬಂದು ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಬಾಲಕೃಷ್ಣ ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈತನ ಬಂಧನಕ್ಕೆ ಬಲೆ ಬೀಸಿದ ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್‌ರವರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರಾರವರ ಆದೇಶದಂತೆ ಮಡಿಕೇರಿ ಡಿವೈಎಸ್ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ
(ಮೊದಲ ಪುಟದಿಂದ) ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಬಾಲಕೃಷ್ಣನನ್ನು ಸುಳ್ಯದಲ್ಲಿ ಬಂಧಿಸಿ ಆತನನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಿದ್ದಾರೆ, ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನವೀನ್, ಸಜನ್, ಮಧು, ರವಿ ಮತ್ತಿತರರು ಇದ್ದರು.