*ಗೋಣಿಕೊಪ್ಪಲು, ಏ. ೩: ಅಕ್ಷರ ದಾಸೋಹ ಅಡಿಗೆ ಸಿಬ್ಬಂದಿಗಳಿಗೆ ಒಂದು ದಿನದ ಅಡುಗೆ ತರಬೇತಿ ಕಾರ್ಯಾಗಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಚಾಲನೆ ನೀಡಿದರು.
ಗೋಣಿಕೊಪ್ಪಲು ಅನುದಾನಿತ ಪೌಢಶಾಲೆಯಲ್ಲಿ ಗೋಣಿಕೊಪ್ಪಲು, ಪೊನ್ನಂಪೇಟೆ, ಮಾಯಮುಡಿ, ತಿತಿಮತಿ, ಬಾಳೆಲೆ, ಕುಟ್ಟ ಕ್ಲಸ್ಟರಿನ ೧೭೦ಕ್ಕೂ ಅಧಿಕ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿಯಾದ ಹಸೀನ ಬಾನು, ಕ್ಷೀರ ಭಾಗ್ಯ ಶಿಕ್ಷಣಾಧಿಕಾರಿಯಾದ ಕೃಷ್ಣಪ್ಪ, ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ತಾಲೂಕು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಂಘದ ಅಧ್ಯಕ್ಷ ಗಿಡ್ಡಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್, ತಾಲೂಕು ಅನುದಾನಿತ ಪೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತ್ ಮತ್ತಿತರರು ಇದ್ದರು.
ಈ ಸಂದರ್ಭ ವಿಶಾಲ್ ಗ್ಯಾಸ್ ಏಜೆನ್ಸಿ ವತಿಯಿಂದ ಅಡುಗೆ ಅನಿಲದ ಬಳಕೆ ಮತ್ತು ಸೋರಿಕೆ ನಿಗ್ರಹದ ಬಗ್ಗೆ ಮಾಹಿತಿ ನೀಡಿದರು.