ಮಡಿಕೇರಿ, ಏ. ೩: ಜಿಲ್ಲಾ ಅಂಗವಿಕಲರ ಕಲ್ಯಾಣ ಕಚೇರಿ ಹಾಗೂ ಜಿಲ್ಲೆಯ ೩ ತಾಲೂಕಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರಿಂದ (ಎಂಆರ್‌ಡಬ್ಲೂö್ಯ) ಈಗಾಗಲೇ ವಿಶೇಷಚೇತನರ ಮಾಹಿತಿಯನ್ನು ತಂತ್ರಾAಶದಲ್ಲಿ ನಮೂದಿಸುವ ಕಾರ್ಯ ಪ್ರಾರಂಭವಾಗಿದ್ದು, ಫಲಾನುಭವಿಗಳು ತುರ್ತಾಗಿ ಅವಶ್ಯಕ ದಾಖಲಾತಿ ಗಳೊಂದಿಗೆ ಬಂದು ತಂತ್ರಾAಶದಲ್ಲಿ ತಮ್ಮ ಮಾಹಿತಿಯನ್ನು ನಮೂದಿಸಿ ಕೊಳ್ಳಬೇಕಿದೆ.

ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಶೇಷಚೇತನರ ಗುರುತಿನ ಚೀಟಿ ಅಥವಾ ಯುಡಿಐಡಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲುö್ಯ) ತಾಲೂಕು ಪಂಚಾಯಿತಿ ಮಡಿಕೇರಿ (ಮೊ.ಸಂ. ೮೦೭೩೧೯೨೯೧೪), ತಾಲೂಕು ಪಂಚಾಯಿತಿ ಸೋಮವಾರಪೇಟೆ (ಮೊ.ಸಂ. ೮೩೧೦೦೫೮೫೪೩) ತಾಲೂಕು ಪಂಚಾಯಿತಿ ವೀರಾಜಪೇಟೆ (ಮೊ.ಸಂ. ೯೯೦೦೮೮೩೬೫೪) ಇವರನ್ನು ಜಿಲ್ಲೆಯ ವಿಶೇಷಚೇತನರು ಸಂಪರ್ಕಿಸಿ ದಾಖಲಾತಿಗಳನ್ನು ನೀಡಿ ಮಾಹಿತಿ ಯನ್ನು ತಂತ್ರಾAಶದಲ್ಲಿ ಜರೂರಾಗಿ ದಾಖಲಿಸಿಕೊಳ್ಳುವಂತೆ ಕೋರಿದೆ.

೨೦೧೧ ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ೭೩೬೯ ವಿಶೇಷಚೇತನರಿದ್ದು, ಜಿಲ್ಲೆಯ ಇನ್ನೂ ಹಲವಾರು ವಿಶೇಷಚೇತನರು ಈ ತಂತ್ರಾAಶದಲ್ಲಿ ಮಾಹಿತಿ ಅಳವಡಿಸದೆ ಇರುವ ಹಿನ್ನೆಲೆ ಅವರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಅಡಚಣೆ ಆಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಯೋಜನೆಗಳ ಸೌಲಭ್ಯ ಗಳನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಮಾಹಿತಿಗೆ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯ ದೂ. ೦೮೨೭೨-೨೯೫೮೨೯ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಸಂಪತ್‌ಕುಮಾರ್ ತಿಳಿಸಿದ್ದಾರೆ.