ಸೋಮವಾರಪೇಟೆ, ಏ. ೨: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೊಟ್ಲಪ್ಪ ಈಶ್ವರ ನೆಲೆಯಾಗಿರುವ ಕೋಟೆಬೆಟ್ಟದಲ್ಲಿ ಕಾಡ್ಗಿಚ್ಚು ಕಂಡುಬAದಿದ್ದು, ನೂರಾರು ಎಕರೆ ಭಸ್ಮವಾಗಿದೆ.

ನಿನ್ನೆಯೇ ಈ ಪ್ರದೇಶದಲ್ಲಿ ಬೆಂಕಿ ಕಂಡುಬAದಿದ್ದು, ಸಂಜೆ ಹಾಗೂ ರಾತ್ರಿಯ ವೇಳೆಯಲ್ಲಿ ಬೆಂಕಿಯ ರಭಸ ಹೆಚ್ಚಾಗುತ್ತಿರುವುದರಿಂದ ಸಮೀಪದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಕೋಟೆಬೆಟ್ಟದ ತಳಭಾಗದಲ್ಲಿರುವ ಪ್ರದೇಶದಿಂದ ಹರಡಿರುವ ಬೆಂಕಿ ಈಗಾಗಲೇ ನೂರಾರು ಎಕರೆ ಪ್ರದೇಶವನ್ನು ಸುಟ್ಟು ಭಸ್ಮ ಮಾಡಿದ್ದು, ಬೆಂಕಿಯ ಕೆನ್ನಾಲಗೆಗೆ ಮರಗಳು, ಕುರುಚಲು ಕಾಡು, ಸಸ್ಯ ಪ್ರಬೇಧಗಳು ಸುಟ್ಟು ಹೋಗಿದೆ.

ಬೆಂಕಿಯನ್ನು ನಂದಿಸುವುದೇ ಸಾಹಸದ ಕಾರ್ಯವಾಗಿದ್ದು, ಅಗ್ನಿಶಾಮಕ ದಳಕ್ಕೆ ಸವಾಲಾಗಿದೆ.

ದೇವನೆಲೆಯಾಗಿದ್ದರೂ ಸಹ ಕೋಟೆಬೆಟ್ಟ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ತಾಣ, ಮೋಜು ಮಸ್ತಿಯ ಪ್ರದೇಶವಾಗಿ ಪರಿಣಮಿಸಿದ್ದು, ದಿನಂಪ್ರತಿ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಇವರಲ್ಲಿ ಹೆಚ್ಚಿನ ಮಂದಿ ಮೋಜು ಮಸ್ತಿಗೆ ಆಗಮಿಸುತ್ತಿದ್ದು, ಸಿಗರೇಟ್ ಸೇವನೆ, ಮದ್ಯಪಾನ ಸೇವನೆ ಎಗ್ಗಿಲ್ಲದಂತೆ ನಡೆಯುತ್ತಿರುತ್ತದೆ. ಇಂತಹ ಮಂದಿಯಿAದಲೇ ಬೆಂಕಿ ಉಂಟಾಗಿರಬಹುದು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಆದಷ್ಟು ಬೇಗ ಬೆಂಕಿ ನಂದಿಸಬೇಕು. ಬಿರು ಬೇಸಿಗೆಯ ಸಮಯದಲ್ಲಿ ಕೋಟೆಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.