ಚೆಟ್ಟಳ್ಳಿ, ಮಾ. ೩೧: ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯ ೨೦೦೧ನೇ ಸಾಲಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪಾಲಿಬೆಟ್ಟ ಪ್ರೌಢಶಾಲೆಯಲ್ಲಿ ನಡೆಯಿತು.

ದಶಕಗಳ ನಂತರ ವಿದ್ಯೆ ಕಲಿಸಿದ್ದ ಗುರುಗಳು ಹಾಗೂ ಬಾಲ್ಯದ ಗೆಳೆಯ, ಗೆಳತಿಯರೊಂದಿಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮುಖಾಮುಖಿ ಯಾದರು. ಬಾಲ್ಯದ ಖುಷಿಯ ಕ್ಷಣಗಳನ್ನು ಸ್ಮರಿಸುವುದಕ್ಕೆ ಹಾಗೂ ಸದ್ಯದ ಬದುಕಿನ ಕುರಿತು ಪರಸ್ಪರ ಕುಶಲೋಪರಿಗೆ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ ಅವರು ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳನ್ನು ಎಲ್ಲರೂ ಕಡೆಗಣಿ ಸುತ್ತಿರುವ ಇಂತಹ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ವಿದ್ಯೆ ಕಲಿತ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟಿರುವುದು ಮೆಚ್ಚತಕ್ಕದ್ದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜೆ. ಸೊಮ್ಮಣ್ಣ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಹಳೆ ವಿದ್ಯಾರ್ಥಿ ಸಂಘಗಳ ಪಾತ್ರ ಕೂಡ ಬಹುಮುಖ್ಯ, ಇಂತಹ ಕಾರ್ಯದಲ್ಲಿ ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿ ಸಂಘ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ದಲ್ಲಿ ಕೂತಂಡ ಬೋಜಮ್ಮ, ಪುಲಿಯಂಡ ಬೋಪಣ್ಣ ಅವರು ಭಾಗವಹಿಸಿದ್ದರು. ಈ ಸಂದರ್ಭ ೨೦೦೧ನೇ ಅವಧಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ, ಪ್ರಭಾಕರ್ ಹಾಗೂ ಅಧ್ಯಾಪಕರಾಗಿದ್ದ ಶಂಭು, ಜಯೇಂದ್ರ, ಬಾಲಕೃಷ್ಣ, ಜ್ಯೋತಿ ಪ್ರಸಾದ್, ನಳಿನಿ, ಕಾವೇರಮ್ಮ ಕೆ.ಯು., ಉತ್ತಯ್ಯ, ಕಾವೇರಮ್ಮ, ಗಾಯತ್ರಿ ಇವರುಗಳನ್ನು ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಶಾಲೆಯಿಂದ ಹೊರಹೋದ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಗೂಗಲ್ ಫಾರಂನ್ನು ಪೂರ್ವ ವಿದ್ಯಾರ್ಥಿ

Àಂಘದ ಅಧ್ಯಕ್ಷ ಶಶಿಕುಮಾರ್ ಅವರು ಬಿಡುಗಡೆ ಮಾಡಿದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ, ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕರು ಹಾಗೂ ಕುಟುಂಬಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಸಯ್ಯದ್ ಶಿಹಾಬ್ ಅವರು ನಿರೂಪಿಸಿದರೆ, ಪೂರ್ವ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಭವಾನಿ ಸ್ವಾಗತಿಸಿ, ಸಮೀರ್ ವಂದಿಸಿದರು.