ವೀರಾಜಪೇಟೆ, ಮಾ. ೩೧: ನದಿಯ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಬಂಧನವಾದ ಘಟನೆ ಮೈತಾಡಿ ಚಾಮಿಯಾಲ್ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಮೈತಾಡಿ ಚಾಮಿಯಾಲ ಗ್ರಾಮದ ನಿವಾಸಿಗಳಾದ ಕೆ.ಯು. ಜಾಫರ್ (೩೫) ಮತ್ತು ಕೆ.ಎಸ್. ಜಮಾಲ್ (೩೫) ಬಂಧಿತ ವ್ಯಕ್ತಿಗಳು.

ಜಾಫರ್ ಮತ್ತು ಜಮಾಲ್ ತಮ್ಮ ಮಹೀಂದ್ರ ಪಿಕ್‌ಅಪ್ ವಾಹನ (ಕೆಎ ೧೨ ಎ ೪೭೨೪)ರಲ್ಲಿ ಮರಳು ತುಂಬಿಸಿಕೊAಡು ಸಾಗಿಸುತ್ತಿದ್ದ ವೇಳೆ ಮುಂಜಾನೆ ೫ ಗಂಟೆಯ ಸಮಯದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ವಾಹನದ ಮೇಲೆ ದಾಳಿ ನಡೆಸಿ ವಾಹನದಲ್ಲಿದ್ದ ಮರಳು ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿತರ ಮೇಲೆ ಅಕ್ರಮ ಮರಳು ಮಾರಾಟ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಾಣಸೆ ಮತ್ತು ಸಿಬ್ಬಂದಿಗಳಾದ ರಾಮಪ್ಪ ಮತ್ತು ಪ್ರದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕೆ.ಕೆ.ಎಸ್.