ಮಡಿಕೇರಿ, ಮಾ. ೩೧; ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ೧೨೪ನೇ ಪ್ರಕರಣದಡಿ ರಾಜ್ಯ ಚುನಾವಣಾ ಆಯೋಗವು ಕೊಡಗು ಜಿಲ್ಲೆಯ ಐದು ತಾಲೂಕು ಪಂಚಾಯ್ತಿಗಳ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶವನ್ನು ಏಕಸದಸ್ಯ ತಾಲೂಕು ಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿದೆ. ಕೆಲವೊಂದು ಮಾರ್ಪಾಡುಗಳೊಂದಿಗೆ ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಮಡಿಕೇರಿ ತಾಲೂಕುಮಡಿಕೇರಿ ತಾಲೂಕಿನ ೧೦ ತಾ.ಪಂ. ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಕಡಗದಾಳು ಹಾಗೂ ಮಕ್ಕಂದೂರು ಕ್ಷೇತ್ರವನ್ನು ಒಟ್ಟು ಸೇರಿಸಲಾಗಿದ್ದು, ಮಕ್ಕಂದೂರು, ಮುಕ್ಕೋಡ್ಲು, ಹಮ್ಮಿಯಾಲ, ಕಾಲೂರು, ಗಾಳಿಬೀಡು, ಮೊಣ್ಣಂಗೇರಿ, ಕೆ.ನಿಡುಗಣೆ, ಕರ್ಣಂಗೇರಿ, ಹೆಬ್ಬೆಟ್ಟಗೇರಿ, ಕಡಗದಾಳು, ಇಬ್ನಿವಳವಾಡಿ ಗ್ರಾಮಗಳು ಒಳಪಡಲಿವೆ. ಮೇಕೇರಿ (ಹಾಕತ್ತೂರು) ಕ್ಷೇತ್ರಕ್ಕೆ ಹಾಕತ್ತೂರು, ಕಗ್ಗೋಡ್ಲು, ಮೇಕೇರಿ, ಬೆಟ್ಟಗೇರಿ, ಕಾರುಗುಂದ, ಅರ್ವತೊಕ್ಲು, ಹೆರವನಾಡು, ಪಾಲೂರು ಗ್ರಾಮಗಳು ಒಳಪಡಲಿವೆ. ಕಾಂತೂರು ಮೂರ್ನಾಡು ಕ್ಷೇತ್ರಕ್ಕೆ ಕಾಂತೂರು, ಕಿಗ್ಗಾಲು, ಎಂ. ಬಾಡಗ, ಮುತ್ತಾರುಮುಡಿ, ಮರಗೋಡು, ಹೊಸ್ಕೇರಿ, ಅರೆಕಾಡು, ಸೊಡ್ಲೂರು, ಕಟ್ಟೆಮಾಡು ಗ್ರಾಮಗಳು ಸೇರಿವೆ. ಹೊದ್ದೂರು ಕ್ಷೇತ್ರಕ್ಕೆ ಹೊದ್ದೂರು, ಹೊದವಾಡ, ಕುಂಬಳದಾಳು, ಬೇತು ಗ್ರಾಮಗಳು ಸೇರಲಿವೆ. ಎಮ್ಮೆಮಾಡು (ನಾಪೋಕು)್ಲ ಕ್ಷೇತ್ರಕ್ಕೆ ನಾಪೋಕ್ಲು, ಕೊಳಕೇರಿ, ಎಮ್ಮೆಮಾಡು ಗ್ರಾಮಗಳು ಸೇರಿವೆ. ಎಂ.ಚೆAಬು (ಸಂಪಾಜೆ) ಕ್ಷೇತ್ರಕ್ಕೆ ಸಂಪಾಜೆ, ಎಂ.ಚೆAಬು, ಕೆ.ಪೆರಾಜೆ, ಬೆಟ್ಟತ್ತೂರು, ಮದೆ, ಕಾಟಕೇರಿ ಗ್ರಾಮಗಳು ಸೇರಲಿವೆ. ಕೊಳಗದಾಳು (ಬೇಂಗೂರು, ಚೇರಂಬಾಣೆ) ಕ್ಷೇತ್ರಕ್ಕೆ ಬೇಂಗೂರು, ಸಿಂಗತ್ತೂರು, ಕುಂದಚೇರಿ, ಕೋಪಟ್ಟಿ, ಬಿ.ಬಾಡಗ, ಕೊಳಗದಾಳು ಗ್ರಾಮಗಳು ಒಳಪಡಲಿವೆ. ಕರಿಕೆ (ಭಾಗಮಂಡಲ) ಕ್ಷೇತ್ರಕ್ಕೆ ಭಾಗಮಂಡಲ, ತಣ್ಣಿಮಾನಿ, ಚೇರಂಗಾಲ, ಕರಿಕೆ, ಅಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮಗಳು ಸೇರಲಿವೆ. ಕುಂಜಿಲ (ಕಕ್ಕಬೆ) ಕ್ಷೇತ್ರಕ್ಕೆ ಯವಕಪಾಡಿ, ಕುಂಜಿಲ, ನಾಲಡಿ, ನೆಲಜಿ, ಪೇರೂರು, ಬಲ್ಲಮಾವಟಿ ಗ್ರಾಮಗಳು ಒಳಪಡಲಿವೆ. ಅರಪಟ್ಟು (ನರಿಯಂದಡ) ಕ್ಷೇತ್ರಕ್ಕೆ ನರಿಯಂದಡ, ಚೇಲಾವರ, ಕರಡ, ಅರಪಟ್ಟು, ಕೊಣಂಜಗೇರಿ, ಕಿರುಂದಾಡು, ಬಲಮುರಿ, ಕೋಕೇರಿ ಗ್ರಾಮಗಳು ಸೇರಲಿವೆ.

(ಮೊದಲ ಪುಟದಿಂದ)

ಸೋಮವಾರಪೇಟೆ ತಾಲೂಕು

ಸೊಮವಾರಪೇಟೆ ತಾಲೂಕಿನಲ್ಲಿ ೧೧ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ದೊಡ್ಡಕೊಡ್ಲಿ (ಕೊಡ್ಲಿಪೇಟೆ) ಕ್ಷೇತ್ರಕ್ಕೆ ಕಸೂರು, ಕೆಲಕೊಡ್ಲಿ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ನಿಲುವಾಗಿಲು, ೧ನೇ ಕೂಡ್ಲೂರು, ಕೆರೆಕೇರಿ, ನೀರುಗುಂದ, ಜನಾರ್ದನಹಳ್ಳಿ, ಕಟ್ಟೆಪುರ, ಕಟ್ಟೆಪುರ ಅರಣ್ಯ, ಅಗಳಿ, ಹೊನ್ನೆಕೋಡಿ, ದೊಡ್ಡಭಂಡಾರ, ಕೋರಗಲ್ಲು ಗ್ರಾಮಗಳು ಒಳಪಡಲಿವೆ. ಹುಲುಸೆ (ಬ್ಯಾಡಗೊಟ್ಟ) ಕ್ಷೇತ್ರಕ್ಕೆ ಬ್ಯಾಡಗೊಟ್ಟ, ಶಿವಾರಳ್ಳಿ, ಬೆಂಬಳೂರು, ಊರುಗುತ್ತಿ, ಮಣಗಲಿ, ಕಿತ್ತೂರು, ಹೆಬ್ಬುಲುಸೆ, ಬೆಳ್ಳಾರಳ್ಳಿ, ಹುಲುಸೆ, ಮೂದ್ರವಳ್ಳಿ, ನಾಕಲಗೋಡು, ಅವರೆದಾಳು ಗ್ರಾಮಗಳು ಸೇರಲಿವೆ. ಶನಿವಾರಸಂತೆ ಕ್ಷೇತ್ರಕ್ಕೆ ಶನಿವಾರಸಂತೆ, ಚೀಕನಹಳ್ಳಿ, ದುಂಡಳ್ಳಿ, ಕಾಜೂರು, ದೊಡ್ಡಕೊಳತ್ತೂರು, ಮಾದ್ರೆ, ದೊಡ್ಡಬಿಳಹ, ಬಿದರೂರು ಗ್ರಾಮಗಳು ಸೇರಿವೆ. ಗೋಪಾಲಪುರ ಕ್ಷೇತ್ರಕ್ಕೆ ನಿಡ್ತ, ಚೌಡೇನಹಳ್ಳಿ, ಹಿತ್ಲುಕೇರಿ, ಮುಳ್ಳೂರು, ಸಿಡಿಗಳಲೆ, ಗೋಪಾಲಪುರ, ಗೌಡಳ್ಳಿ, ಶುಂಠಿ, ಚೆನ್ನಾಪುರ, ಹೆಗ್ಗಲ, ನಂದಿಗುAದ ಗ್ರಾಮಗಳು ಸೇರಿವೆ. ಗೋಣಿಮರೂರು ಕ್ಷೇತ್ರಕ್ಕೆ ಅಂಕನಹಳ್ಳಿ, ಮೆಣಸ, ಮೈಲಾತ್‌ಪುರ, ಹಾರೋಹಳ್ಳಿ, ಮಾಲಂಬಿ, ಆಲೂರು, ದೊಡ್ಡಕಣಗಾಲು, ಮಾಲಂಬಿ ಅರಣ್ಯ, ಗಣಗೂರು, ನಿಡ್ತ ಅರಣ್ಯ, ಗೋಣಿಮರೂರು ಗ್ರಾಮಗಳು ಒಳಪಡಲಿವೆ. ತಾಕೇರಿ ಕ್ಷೇತ್ರಕ್ಕೆ ಬೆಟ್ಟದಳ್ಳಿ, ಕೊತ್ತನಳ್ಳಿ, ಕುಮಾರಳ್ಳಿ, ಕುಂದಳ್ಳಿ, ತಾಕೇರಿ, ಶಾಂತಳ್ಳಿ, ಅಭಿಮಠ, ತಲ್ತಾರೆ ಶೆಟ್ಟಳ್ಳಿ, ಹರಗ, ಹೊನ್ನಹಣಕೋಡು ಕ್ಷೇತ್ರಕ್ಕೆ ದೊಡ್ಡಮಳ್ತೆ, ಹೊನ್ನಹಣಕೋಡು, ನೇರುಗಳಲೆ, ಯಲಕನೂರು, ನೇಗಳ್ಳಿ, ಕರ್ಕಳ್ಳಿ, ಮಸಗೋಡು, ಬಳಗುಂದ (ಬೇಳೂರು ಬಸವನಹಳ್ಳಿ) ಕ್ಷೇತ್ರಕ್ಕೆ ಬೇಳೂರು ಬಸವನಹಳ್ಳಿ, ಬಳಗುಂದ, ಕುಸುಬೂರು, ಕಿರಗಂದೂರು, ಬಿಳಿಗೇರಿ, ಗರಗಂದೂರು ಕ್ಷೇತ್ರಕ್ಕೆ ಅಂಜನಗೇರಿ ಬೆಟ್ಟಗೇರಿ, ಗರಗಂದೂರು, ಐಗೂರು, ಯಡವನಾಡು ಅರಣ್ಯ, ಗಡಿನಾಡು ಅರಣ್ಯ, ಚೌಡ್ಲು ಕ್ಷೇತ್ರಕ್ಕೆ ಚೌಡ್ಲು, ಹಾನಗಲ್ಲು, ಯಡೂರು, ಕಲ್ಕಂದೂರು, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕೂತಿ, ಕುಂಬೂರು (ಮಾದಾಪುರ) ಕ್ಷೇತ್ರಕ್ಕೆ ಕುಂಬೂರು, ಮೂವತ್ತೋಕ್ಲು, ಕಾಂಡನಕೊಲ್ಲಿ, ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ ಗ್ರಾಮಗಳು ಒಳಪಡಲಿವೆ.

ಕುಶಾಲನಗರ ತಾಲೂಕು

ನೂತನವಾಗಿ ರಚನೆಯಾಗಿರುವ ಕುಶಾಲನಗರ ತಾಲೂಕು ಪಂಚಾಯ್ತಿಯ ೧೧ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ನೆಲ್ಲಿಹುದಿಕೇರಿ ಕ್ಷೇತ್ರಕ್ಕೆ ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ (ವಾಲ್ನೂರು ತ್ಯಾಗತ್ತೂರು) ಕ್ಷೇತ್ರಕ್ಕೆ ವಾಲ್ನೂರು ತ್ಯಾಗತ್ತೂರು, ಅಭ್ಯತ್‌ಮಂಗಲ, ನಂಜರಾಯಪಟ್ಟಣ, ರಂಗಸಮುದ್ರ, ೭ನೇ ಹೊಸಕೋಟೆ (ಗುಡ್ಡೆಹೊಸೂರು) ಕ್ಷೇತ್ರಕ್ಕೆ ಬಸವನಹಳ್ಳಿ, ರಸಲ್‌ಪುರ, ಅತ್ತೂರು ಅರಣ್ಯ, ಆನೆಕಾಡು ಅರಣ್ಯ, ಬೈಚನಹಳ್ಳಿ, ೭ನೇ ಹೊಸಕೋಟೆ, ಕೂಡಿಗೆ ಕ್ಷೇತ್ರಕ್ಕೆ ಕೂಡಿಗೆ, ಬೆಂಡೆಬೆಟ್ಟ ಅರಣ್ಯ, ಮಾವಿನಹಳ್ಳ ಅರಣ್ಯ, ಜೇನುಕಲ್ಲು ಬೆಟ್ಟ, ಹೆಬ್ಬಾಲೆ ಕ್ಷೇತ್ರಕ್ಕೆ ಹೆಬ್ಬಾಲೆ, ಮರೂರು, ಹುಲಸೆ, ಕೂಡುಮಂಗಳೂರು ಕ್ಷೇತ್ರಕ್ಕೆ ಕೂಡುಮಂಗಳೂರು, ಮುಳ್ಳುಸೋಗೆ ಕ್ಷೇತ್ರಕ್ಕೆ ಮುಳ್ಳುಸೊಗೆ, ತೊರೆನೂರು ಕ್ಷೇತ್ರಕ್ಕೆ ತೊರೆನೂರು, ಶಿರಂಗಾಲ, ಮಣಜೂರು, ಚೇರಳ ಶ್ರೀಮಂಗಲ ಕ್ಷೇತ್ರಕ್ಕೆ ಚೇರಳ ಶ್ರೀಮಂಗಲ, ಈರಳೆವಳಮುಡಿ, ಕೂಡ್ಲೂರು ಚೆಟ್ಟಳ್ಳಿ, ಕೆದಕಲ್, ನಾಗದಾಳ್, ಹೊರೂರು, ಅಂದಗೋವೆ ಕ್ಷೇತ್ರಕ್ಕೆ ಅಂದಗೋವೆ, ಅತ್ತೂರು ನಲ್ಲೂರು, ನಾಕೂರು ಶಿರಂಗಾಲ, ಕಾನ್‌ಬೈಲ್, ಬೈಚನಹಳ್ಳಿ, ಹೆರೂರು, ಉಲುಗುಲಿ(ಸುಂಟಿಕೊಪ್ಪ) ಕ್ಷೇತ್ರಕ್ಕೆ ಉಲುಗುಲಿ ಗ್ರಾಮಗಳು ಒಳಪಡಲಿವೆ.

ವೀರಾಜಪೇಟೆ ತಾಲೂಕು

ವಿರಾಜಪೇಟೆ ತಾಲೂಕಿನಲ್ಲಿ ೧೧ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಹೆಗ್ಗಳ ಕ್ಷೇತ್ರಕ್ಕೆ ಹೆಗ್ಗಳ, ಬೇಟೋಳಿ, ಕೊಟ್ಟೋಳಿ, ನಾಲ್ಕೇರಿ ಕ್ಷೇತ್ರಕ್ಕೆ ಮೈತಾಡಿ, ಕುಂಜಿಲಗೇರಿ, ನಾಲ್ಕೇರಿ, ಬೆಳ್ಳುಮಾಡು, ಅರಮೇರಿ, ಕೆದಮುಳ್ಳೂರು ಕ್ಷೇತ್ರಕ್ಕೆ ಕಡಂಗಮರೂರು, ಪಾಲಂಗಾಲ, ಕೆದಮುಳ್ಳೂರು, ಕದನೂರು, ಆರ್ಜಿ ಕ್ಷೇತ್ರಕ್ಕೆ ಆರ್ಜಿ, ನಾಂಗಾಲ, ೧ನೇ ರುದ್ರಗುಪ್ಪೆ, ವಿ.ಬಾಡಗ, ಬಾಳುಗೋಡು ಕ್ಷೇತ್ರಕ್ಕೆ ಬಿಟ್ಟಂಗಾಲ, ಬಾಳುಗೋಡು, ಚೆಂಬೆಬೆಳ್ಳೂರು, ಕುಕ್ಲೂರು, ದೇವಣಗೇರಿ, ಐಮಂಗಲ, ಮಗ್ಗುಲ, ಹಾಲುಗುಂದ ಕ್ಷೇತ್ರಕ್ಕೆ ಹಾಲುಗುಂದ, ಬೈರಂಬಾಡ, ಕಣ್ಣಂಗಾಲ, ಹಚ್ಚಿನಾಡು, ಯಡೂರು, ಕರಡಿಗೋಡು ಕ್ಷೇತ್ರಕ್ಕೆ ಗುಯ್ಯ, ಕರಡಿಗೋಡು, ಸಿದ್ದಾಪುರ, ಕಾರ್ಮಾಡು ಕ್ಷೇತ್ರಕ್ಕೆ ಅಮ್ಮತ್ತಿ, ಪುಲಿಯೇರಿ, ಕಾರ್ಮಾಡು, ಕಾವಾಡಿ, ಬಾಡಗ ಬಾಣಂಗಾಲ ಕ್ಷೇತ್ರಕ್ಕೆ ಬಾಡಗ ಬಾಣಂಗಾಲ, ಮೇಕೂರು, ಹೊಸ್ಕೇರಿ, ಚೆನ್ನಯ್ಯನಕೋಟೆ ಕ್ಷೇತ್ರಕ್ಕೆ ಮಾಲ್ದಾರೆ, ಚೆನ್ನಯ್ಯನಕೋಟೆ, ಹೊಸೂರು ಕ್ಷೇತ್ರಕ್ಕೆ ಹೊಸೂರು, ಬೆಟ್ಟಗೇರಿ, ಬಿಳುಗುಂದ, ನಲ್ವತೊಕ್ಲು, ಕಳತ್ಮಾಡು, ಹೊಸಕೋಟೆ, ಕೊಳತೋಡು ಬೈಗೋಡು ಗ್ರಾಮಗಳು ಸೇರ್ಪಡೆಗೊಳ್ಳಲಿವೆ.

ಪೊನ್ನಂಪೇಟೆ ತಾಲೂಕು

ಹೊಸದಾಗಿ ರಚನೆಗೊಂಡಿರುವ ಪೊನ್ನಂಪೇಟೆ ತಾಲೂಕಿನಲ್ಲಿ ೯ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ. ಹೆಬ್ಬಾಲೆ (ತಿತಿಮತಿ) ಕ್ಷೇತ್ರಕ್ಕೆ ದೇವಮಾಚಿ ಅರಣ್ಯ, ಅರಕೇರಿ ಅರಣ್ಯ, ಅರಕೇರಿ ಅರಣ್ಯ ೨, ಅರಕೇರಿ ಅರಣ್ಯ ೩, ಹೆಬ್ಬಾಲೆ, ಮಾಯಮುಡಿ ಕ್ಷೇತ್ರಕ್ಕೆ ನೋಕ್ಯ, ಮಾಯಮುಡಿ, ಧನುಗಾಲ, ಬಾಳೆಲೆ ಕ್ಷೇತ್ರಕ್ಕೆ ಬಾಳೆಲೆ, ದೇವನೂರು, ನಿಟ್ಟೂರು, ಹತ್ತುಗಟ್ಟು ಅರಣ್ಯ ೧, ಕೊಟ್ಟಗೇರಿ, ಬಿಳೂರು, ಬೆಸಗೂರು, ನಲ್ಲೂರು, ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಗೊಣಿಕೊಪ್ಪಲು ಕ್ಷೇತ್ರಕ್ಕೆ ಗೋಣಿಕೊಪ್ಪಲು, ಕೈಕೇರಿ, ಕುಂದ, ಹಾತೂರು, ಹಳ್ಳಿಗಟ್ಟು(ಪೊನ್ನಂಪೇಟೆ) ಕ್ಷೇತ್ರಕ್ಕೆ ಹಳ್ಳಿಗಟ್ಟು (ಭಾಗ), ಅರುವತೊಕ್ಲು (ಭಾಗ), ಮತ್ತೂರು (ಭಾಗಶಃ), ಮುಗುಟಗೇರಿ (ಭಾಗಶಃ), ಹಳ್ಳಿಗಟ್ಟು (ಭಾಗಶಃ), ಅರುವತೊಕ್ಲು ಕ್ಷೇತ್ರಕ್ಕೆ ಅರುವತೊಕ್ಲು (ಭಾಗ), ಕಿರುಗೂರು, ಬಲ್ಯಮುಂಡೂರು, ಚಿಕ್ಕಮುಂಡೂರು, ಮತ್ತೂರು ಭಾಗಶಃ), ಕುಟ್ಟ ಕ್ಷೇತ್ರಕ್ಕೆ ಕುಮಟೂರು, ಕುರ್ಚಿ, ಕುಟ್ಟ, ಮಂಚಳ್ಳಿ ಮತ್ತು ಅರಣ್ಯ, ನಾಲ್ಕೇರಿ ಅರಣ್ಯ, ಕೆ.ಬಾಡಗ, ಟಿ.ಶೆಟ್ಟಿಗೇರಿ ಕ್ಷೇತ್ರಕ್ಕೆ ಪರಕಟಗೇರಿ, ತೆರಾಲು, ಬಾಡಗರಕೇರಿ, ಟಿ.ಶೆಟ್ಟಿಗೇರಿ, ನೆಮ್ಮಲೆ ಪೂರ್ವ ಮತ್ತು ಪಶ್ಚಿಮ, ಹರಿಹರ, ಹುದಿಕೇರಿ ಕ್ಷೇತ್ರಕ್ಕೆ ಹುದಿಕೇರಿ, ಹೈಸೊಡ್ಲೂರು, ಬೇಗೂರು, ಬೆಳ್ಳೂರು, ಬಿ.ಶೆಟ್ಟಿಗೇರಿ, ಕುಟ್ಟಂದಿ ಗ್ರಾಮಗಳು ಒಳಪಡಲಿವೆ.