ವೀರಾಜಪೇಟೆ, ಮಾ. ೩೧: ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ತಡೆದು ದರೋಡೆ ವೀರಾಜಪೇಟೆ, ಮಾ. ೩೧: ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ತಡೆದು ದರೋಡೆ ಘಟನೆ ಆರ್ಜಿ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ನಿವಾಸಿ ಯೂಸಫ್ ಅವರ ಘಟನೆ ಆರ್ಜಿ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ನಿವಾಸಿ ಯೂಸಫ್ ಅವರ ಪುತ್ರ ಯೂನಿಸ್ (೨೧) ಮತ್ತು ಕೊಂಡAಗೇರಿ ನಿವಾಸಿ ಮೊಹಮ್ಮದ್ ಅವರ ಪುತ್ರ ಸಿದ್ದಿಕ್ ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿತರು.

ಘಟನೆಯ ವಿವರ: ಮಾ. ೨೩ ರಂದು ಮರದ ವ್ಯಾಪಾರಿಯಾಗಿದ್ದ ಕೊಟ್ಟಮುಡಿ ಗ್ರಾಮದ ಕೆ.ಎ. ಶಂಷುದ್ದೀನ್ ಎಂಬವರಿಗೆ ಸೇರಿದ ಮರದ ನಾಟಾಗಳನ್ನು ತಮಿಳುನಾಡು ರಾಜ್ಯ ನೊಂದಣಿಯಾದ ಲಾರಿ ಸಂಖ್ಯೆ (ಟಿಎನ್ ೩೮ ಬಿಟಿ ೫೭೧೧)ರಲ್ಲಿ ತುಂಬಿಕೊAಡು ಸಾಗುತ್ತಿದ್ದರು. ಈ ವೇಳೆ ರಾತ್ರಿ

(ಮೊದಲ ಪುಟದಿಂದ) ಸುಮಾರು ೧೨ರ ಸಮಯದಲ್ಲಿ ಬೇತ್ರಿ ಸೇತುವೆಯ ಬಳಿ ಮರ ತುಂಬಿದ ಲಾರಿಯನ್ನು ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ತಡೆದು ದರೋಡೆಗೆ ಮುಂದಾಗುತ್ತಾರೆ. ನಂತರ ಲಾರಿ ಚಾಲಕನಾಗಿದ್ದ ತಮಿಳುನಾಡಿನ ಮೇಟುಪಾಳ್ಯಂನ ನಿವಾಸಿಯಾದ ಲಿಂಗರಾಜು ಅವರಿಗೆ ಪ್ರಾಣ ಬೆದರಿಕೆಯೊಡ್ಡಿ ಕಬ್ಬಿಣದ ಸಲಾಕೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಚಾಲಕನ ಬಳಿಯಿಂದ ೧೧,೦೦೦ ರೂ. ನಗದು ಅಪಹರಿಸಿ ಸ್ಥಳದಿಂದ ಪರಾರಿಯಾಗುತ್ತಾರೆ.

ಚಾಲಕ ಲಿಂಗರಾಜು ನಡೆದ ಘಟನೆಯನ್ನು ಮರದ ವ್ಯಾಪಾರಿ ಶಂಷುದ್ದೀನ್ ಅವರಿಗೆ ಮಾಹಿತಿ ನೀಡಿ ಶಂಷುದ್ದೀನ್ ಮತ್ತು ಸಂತ್ರಸ್ತ ಚಾಲಕ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರ್ಜಿಗ್ರಾಮದಲ್ಲಿ ಪ್ರಕರಣದ ಆರೋಪಿಗಳು ಇರುವುದಾಗಿ ಮಾಹಿತಿ ಪಡೆದರು. ನಿನ್ನೆ ಸಂಜೆ ಆರೋಪಿತರನ್ನು ಬಂಧಿಸಿದ್ದಾರೆ.

ಆರೋಪಿತರು ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು (ಕೆಎಲ್ ೪೦ ಹೆಚ್ ೮೦೧೪) ಮತ್ತು ರೂ ೫,೦೦೦ ನಗದು ವಶಕ್ಕೆ ಪಡೆದಿದ್ದಾರೆ. ಆರೋಪಿತರಾದ ಯೂನಿಸ್ ಮತ್ತು ಸಿದ್ದಿಕ್ ಎಂಬುವವರ ಮೇಲೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ೩೯೨ ಐ.ಪಿ.ಸಿ ಕಾಯ್ದೆಯ ಅನ್ವಯ ದರೋಡೆ ಪ್ರಕರಣ ದಾಖಲಿಸಲಾಗಿದ್ದು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನದಲ್ಲಿಡುವAತೆ ಆದೇಶ ವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮತ್ತು ವೃತ್ತ ನಿರೀಕ್ಷಕ ಶ್ರೀಧರ್ ಅವರ ನಿರ್ದೇಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಬಾಣಸೆ, ಸಿಬ್ಬಂದಿಗಳಾದ ನೆಹರು ಕುಮಾರ್, ರಾಮಪ್ಪ, ತೀರ್ಥ ಕುಮಾರ್, ರವಿ, ಮುಸ್ತಾಫ, ಗಿರೀಶ್, ಪ್ರದೀಪ್, ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಅವರುಗಳು ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.

-ಕೆ.ಕೆ.ಎಸ್.