ಗೋಣಿಕೊಪ್ಪಲು, ಮಾ. ೩೧: ಭಾರೀ ಕುತೂಹಲ ಸೃಷ್ಟಿಸಿದ್ದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಅವಳಿ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.

ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಹುರಿ ಬಿಸಿಲಿನ ನಡುವೆಯೇ ಫಲಿತಾಂಶಕ್ಕಾಗಿ ಕಾದು ನಿಂತಿದ್ದರು. ಪೊನ್ನಂಪೇಟೆ ಐಟಿಐ ಕಾಲೇಜು ಮತ ಎಣಿಕೆ ಕೇಂದ್ರದ ೫ ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಗೋಣಿಕೊಪ್ಪ ೩, ಪೊನ್ನಂಪೇಟೆ ೨ ಟೇಬಲ್‌ಗಳಲ್ಲಿ ಬೆಳಿಗ್ಗೆ ೮ ರಿಂದ ಮತ ಎಣಿಕೆ ಕಾರ್ಯ ಆರಂಭವಾಯಿತು.ವಿವಿಧ ಇಲಾಖೆಗಳಿಂದ ಚುನಾವಣಾ ಅಧಿಕಾರಿಗಳು ಸೇರಿದಂತೆ ೫೦ ಸಿಬ್ಬಂದಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಏಜೆಂಟ್ ಹಾಗೂ ಅಭ್ಯರ್ಥಿಗೆ ಮತ ಎಣಿಕೆ ಕೊಠಡಿಗೆ ಪ್ರವೇಶ ನೀಡಲಾಗಿತ್ತು. ಕೋವಿಡ್-೧೯ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಲಾಯಿತು.

ಗೋಣಿಕೊಪ್ಪ ಗ್ರಾಮ ಪಂಚಾಯಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ೧೨ ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಪಂಚಾಯಿತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ೯ ಸ್ಥಾನಗಳಲ್ಲಿ ಜಯಗಳಿಸಿದೆ. ಪೊನ್ನಂಪೇಟೆ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ೯ ಹಾಗೂ ಬಿಜೆಪಿ ಬೆಂಬಲಿಗರು ೧೦ ಸ್ಥಾನ ಪಡೆದುಕೊಂಡಿದ್ದು. ೧ ಸ್ಥಾನ ಅದೃಷ್ಟದ ಮೂಲಕ ೩ನೇ ವಿಭಾಗದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ವಿಜಯ ಕುಮಾರ್ ಪಾಲಾಗಿದೆ.

ಗೋಣಿಕೊಪ್ಪ ಗ್ರಾ.ಪಂ.ಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ, ರಾಮ್‌ದಾಸ್ ಹೆಚ್.ಡಿ. ಕೆ.ಜಿ. ರಾಮಕೃಷ್ಣ, ಜಿ.ಕೆ. ಗೀತಾ, ರಾಜೇಶ್ ಕೆ., ಹಕೀಮ್ ಪಿ.ಎಂ.,

ರತಿ ಅಚ್ಚಪ್ಪ, ಸೌಮ್ಯ ಸಿ.ಎ.,

ವಿವೇಕ್ ಬಿ.ಎನ್.,

(ಮೊದಲ ಪುಟದಿಂದ) ಪುಷ್ಪ ಎಂ.ಎಸ್., ಚೈತ್ರ ಬಿ. ಚೇತನ್ ಗೆಲುವು ಸಾಧಿಸಿದರು. ಕಾಂಗ್ರೆಸ್ ಬೆಂಬಲಿತರಾದ ಮಂಜುಳ ಎಂ., ಸವಿತಾ ವೈ.ಎಂ., ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಸುಲೇಖ, ಆರ್.ಧನಲಕ್ಷಿö್ಮ, ಅಫ್ಜಲ್, ಕುಲ್ಲಚಂಡ ಪ್ರಮೋದ್ ಗಣಪತಿ, ಶಾಹಿನ್, ಶರತ್‌ಕಾಂತ್ ಗೆಲುವು ದಾಖಲಿಸಿದ್ದಾರೆ.

ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ್ ಈ ಬಾರಿ ೭ನೇ ವಾರ್ಡಿನಲ್ಲಿ ಸ್ಪರ್ಧೆ ಬಯಸಿದ್ದರು. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ತರುಣ ವಿವೇಕ್ ಬಿ.ಎನ್. ಗೆಲುವು ಸಾಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ೮ನೇ ವಿಭಾಗದಿಂದ ಸ್ಪರ್ಧಿಸಿದ್ದ ಮಾಜಿ ಸದಸ್ಯ ಅಬ್ದುಲ್ ಜಲೀಲ್ ಕೆ.ಪಿ. ಸೋಲನ್ನು ಅನುಭವಿಸಿದ್ದು ಇವರ ಎದುರಾಳಿ ಕಾಂಗ್ರೆಸ್‌ನ ಬೆಂಬಲಿತ ಅಭ್ಯರ್ಥಿ ಶರತ್‌ಕಾಂತ್ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರಾಗಿದ್ದ ಬಿ.ಎನ್.ಪ್ರಕಾಶ್ ಬಿಜೆಪಿ ಸೇರ್ಪಡೆಯೊಂದಿಗೆ ೧ನೇ ವಿಭಾಗದಿಂದ ಸ್ಪರ್ಧಿಸಿ ಅಭೂತ ಪೂರ್ವ ಜಯಗಳಿಸಿದ್ದಾರೆ. ೪ನೇ ಸಾಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ್ ಈ ಬಾರಿ ೭ನೇ ವಾರ್ಡಿನಲ್ಲಿ ಸ್ಪರ್ಧೆ ಬಯಸಿದ್ದರು. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ತರುಣ ವಿವೇಕ್ ಬಿ.ಎನ್. ಗೆಲುವು ಸಾಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ೮ನೇ ವಿಭಾಗದಿಂದ ಸ್ಪರ್ಧಿಸಿದ್ದ ಮಾಜಿ ಸದಸ್ಯ ಅಬ್ದುಲ್ ಜಲೀಲ್ ಕೆ.ಪಿ. ಸೋಲನ್ನು ಅನುಭವಿಸಿದ್ದು ಇವರ ಎದುರಾಳಿ ಕಾಂಗ್ರೆಸ್‌ನ ಬೆಂಬಲಿತ ಅಭ್ಯರ್ಥಿ ಶರತ್‌ಕಾಂತ್ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರಾಗಿದ್ದ ಬಿ.ಎನ್.ಪ್ರಕಾಶ್ ಬಿಜೆಪಿ ಸೇರ್ಪಡೆಯೊಂದಿಗೆ ೧ನೇ ವಿಭಾಗದಿಂದ ಸ್ಪರ್ಧಿಸಿ ಅಭೂತ ಪೂರ್ವ ಜಯಗಳಿಸಿದ್ದಾರೆ. ೪ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ರತಿ ಅಚ್ಚಪ್ಪ ೨ನೇ ಅವಧಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಮರೆಡ್ಡಿ, ಶ್ರೀಧರ್, ಪರಶಿವ ಮೂರ್ತಿ, ಸಬ್‌ಇನ್ಸ್ಪೆಕ್ಟರ್ ಗಳಾದ ಸುಬ್ಬಯ್ಯ, ಕುಮಾರ್, ಚಂದ್ರಪ್ಪ ಸೇರಿದಂತೆ ಇತರ ಸಿಬ್ಬಂದಿಗಳು ಬಂದೋಬಸ್ತ್ ನೀಡಿದರು.

ಮತ ವಿವರ: ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ೧ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಬಿ.ಎನ್. ಪ್ರಕಾಶ್ ೪೧೧, ಕೊಣಿಯಂಡ ಬೋಜಮ್ಮ ೩೮೨, ರಾಮ್‌ದಾಸ್ ಹೆಚ್.ಡಿ. ೨೭೮ ಮತ ಪಡೆದುಕೊಂಡು ಗೆಲುವು ದಾಖಲಿಸಿದರೆ. ಕಾಂಗ್ರೆಸ್ ಬೆಂಬಲಿತರಾದ ಕುಮಾರ ಹೆಚ್.ಎಸ್, ೨೩೦, ಶಕೀಲ್ ಅಹಮದ್ ಎಂ.ಎನ್. ೨೭೧, ಶರೀಫ ಕೆ.ಇ. ೧೬೪, ಸ್ವತಂತ್ರ ಅಭ್ಯರ್ಥಿ ಕುಮಾರಪ್ಪ ಹೆಚ್.ಎಲ್. ೭೫ ಮತ ಪಡೆದು ಸೋಲಿನ ರುಚಿ ಅನುಭವಿಸಿದ್ದಾರೆ. ಈ ಕ್ಷೇತ್ರದ ೮ ಮತÀಗಳು ತಿರಸ್ಕೃತವಾಗಿದೆ.

೨ನೇ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತರಾದ ಕೆ.ಜಿ. ರಾಮಕೃಷ್ಣ ೨೬೪ ಮತ, ಜಿ.ಕೆ. ಗೀತಾ ೨೨೨ ಮತ ಪಡೆದುಕೊಂಡು ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ರಾದ ಕುಪ್ಪಂಡ ಗಣೇಶ್ ತಿಮ್ಮಯ್ಯ ೧೪೨ ಮತ, ಪ್ರಿಯ ಡಿ. ೧೫೯ ಮತ ಪಡೆದು ಸೋತಿದ್ದಾರೆ. ಈ ಕ್ಷೇತ್ರದಲ್ಲಿ ೧೯ ಮತ ತಿರಸ್ಕೃತವಾಗಿವೆ.

೩ನೇ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತ ರಾಜೇಶ್ ಕೆ. ೪೩೯, ಕಾಂಗ್ರೆಸ್ ಬೆಂಬಲಿತರಾದ ಮಂಜುಳ ಎಂ. ೪೭೬, ಸವಿತಾ ವೈ.ಎಂ. ೨೬೫ ಮತ ಪಡೆದು ಗೆಲುವು ಕಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾದ ಕರ್ಣರಾಜ್ ತಂಬಿ ೧೧೧, ಮುರುಗ ಹೆಚ್.ಬಿ ೨೩೩, ಬಿ.ಎಸ್. ಶಕುಂತಲ ೧೦, ಶೀಭಾ ಟಿ.ಎಂ. ೧೫೯, ಬಿಜೆಪಿ ಬೆಂಬಲಿತರಾದ ಕವಿತಾ ಕೆ.ಎಸ್. ೨೬೩, ಶಶಿಕಲಾ ಬಿ.ಡಿ. ೨೫೭ ಮತ ಪಡೆದು ಸೋತಿದ್ದಾರೆ.

೪ನೇ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತರಾದ ಹಕೀಂ ಪಿ.ಎಂ. ೪೩೨, ರತಿ ಅಚ್ಚಪ್ಪ ೩೮೮, ಸೌಮ್ಯ ಸಿ.ಎ. ೩೮೨ ಮತ ಪಡೆದು ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಎಂ.ಎA. ಥಾಮಸ್ ೩೭೧, ಕೆ.ಎಂ.ಮಮಿತಾ ೨೭೨, ಪಿ.ವಿ.ಸುನಿತಾ ೩೩೫ ಮತ, ಸ್ವತಂತ್ರ ಅಭ್ಯರ್ಥಿಗಳಾದ ಹರಿದಾಸ್ ಎ.ಕೆ. ೩೯, ಡಿ.ಆರ್. ಮಂಜುಳ ೪೯ ಮತದಿಂದ ಸೋಲಿಗೆ ಶರಣಾದರು.

೫ನೇ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ ೪೧೩, ಸುಲೇಖ ೩೬೭, ಆರ್. ಧನಲಕ್ಷಿö್ಮ ೩೬೫ ಮತದೊಂದಿಗೆ ಜಯ ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತರಾದ ಮಂಜು ಸುರೇಶ್ ರೈ ೩೮೯ ಮತ, ವಿ.ಸಂದ್ಯಾ ೩೪೨, ಜ್ಯೋತಿ ಹೆಚ್.ಆರ್. ೩೦೬ ಮತ ತನ್ನದಾಗಿಸಿಕೊಂಡಿದ್ದಾರೆ.

೬ನೇ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಫ್ಜಲ್ ೪೦೯, ಕುಲ್ಲಚಂಡ ಪ್ರಮೋದ್ ಗಣಪತಿ ೪೭೦, ಶಾಹಿನ್ ೪೪೭ ಮತದಿಂದ ಜಯ ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತರಾದ ವಿನೋದ್ ೨೩೧, ಲಲಿತ ೧೮೬, ಎಸ್.ಎ. ತಸ್ಲಿಂ ೨೦೦, ಸ್ವತಂತ್ರ ಅಭ್ಯರ್ಥಿ ರಿಯಾಜ್ ೬೫ ಮತ ಗಳಿಸಿ ಸೋಲೊಪ್ಪಿಕೊಂಡರು.

೭ನೇ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತರಾದ ವಿವೇಕ್ ಬಿ.ಎನ್ ೨೨೦, ಪುಷ್ಪ ಎಂ.ಎಸ್. ೧೯೭ ಮತದಿಂದ ವಿಜಯ ಸಾಧಿಸಿದರು. ಕಾಂಗ್ರೆಸ್ ಬೆಂಬಲಿತರಾದ ರಾಜಶೇಖರ್ ೧೯೨, ಸವಿತಾ ೧೬೦ ಮತ ಗಳಿಸಿ ಸೋತರು.

೮ನೇ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶರತ್‌ಕಾಂತ್ ೧೨೭, ಚೈತ್ರ ಬಿ. ಚೇತನ್ ೧೨೬ ಮತದಿಂದ ಗೆದ್ದರು. ಬಿಜೆಪಿ ಬೆಂಬಲಿತರಾದ ಅಬ್ದುಲ್ ಜಲೀಲ್ ೧೦೩, ಯಾಸ್ಮೀನ್ ೧೦೪, ಸ್ವತಂತ್ರ ಅಭ್ಯರ್ಥಿ ಎ.ಎಂ. ದಿನೇಶ್ ೬೭ ಮತ ಪಡೆದು ಹಿನ್ನಡೆ ಅನುಭವಿಸಿದರು.

ಪೊನ್ನಂಪೇಟೆ ಗ್ರಾ.ಪಂ.ಗೆ ಕಾಂಗ್ರೆಸ್ ಬೆಂಬಲದೊAದಿಗೆ ಸ್ಪರ್ಧಿಸಿದ್ದ ೧ನೇ ವಿಭಾಗದ ಆಲಿರ ರಶೀದ್ (೩೦೦ ಮತ), ಪಿ.ಡಿ. ನೇತ್ರಾವತಿ (೨೦೪), ಮೂಕಳೇರ ಸುಮಿತ ಗಣೇಶ್ (೨೦೮), ೩ನೇ ವಿಭಾಗದ ಪಣಿಯರವರ ಯಮುನಾ (೨೦೧) ಕೋಳೇರ ಭಾರತಿ (೨೨೯), ೪ನೇ ವಿಭಾಗದ ಅಣ್ಣೀರ ಹರೀಶ್ (೪೯೭), ಜುನೈದ್ (೩೬೨), ರಸಿಕ ಕೆ.ಎ. (೩೮೮), ೫ನೇ ವಿಭಾಗದ ಮಂಜುಳ ಮಣಿಕಂಠ (೨೩೩) ಗೆಲುವು ಸಾಧಿಸಿದರು.

ಬಿಜೆಪಿ ಬೆಂಬಲದೊAದಿಗೆ ಸ್ಪರ್ಧಿಸಿದ ೧ನೇ ವಿಭಾಗದ ರಾಮಕೃಷ್ಣ (೨೮೭ ಮತ), ೨ನೇ ವಿಭಾಗದ ಮಧು ಕುಮಾರ್ (೨೭೭), ಅಮ್ಮತ್ತಿರ ಆರತಿ ಸುರೇಶ್ ಅವಿರೋಧ ಆಯ್ಕೆಯಾದರು. ೪ನೇ ವಿಭಾಗದ ರವಿ (೩೭೦), ೫ನೇ ವಿಭಾಗದ ಅಬ್ದುಲ್ ಅಜೀಜ್ (೩೧೨), ದಶಮಿ ಡಿ.ವಿ. (೩೯೪), ೬ನೇ ವಿಭಾಗದ ಗಿರಿಜಾ ಹೆಚ್.ವಿ. (೪೭೪) ನಿಲನ್ (೪೬೨) ಮಚ್ಚಮಾಡ ವಿಲ್ಮ (೪೯೨) ರಮೇಶ್ (೪೧೨) ಗೆಲುವು ಸಾಧಿಸಿದರು.

ಮತ ಎಣಿಕಾ ಕೇಂದ್ರದಲ್ಲಿ ಬಿಜೆಪಿ ಮುಖಂಡರಾದ ನೆಲ್ಲೀರ ಚಲನ್, ಸಿ.ಕೆ. ಬೋಪಣ್ಣ, ಗುಮ್ಮಟೀರ ಗಣಪತಿ, ದರ್ಶನ್, ಕಾಡ್ಯಮಾಡ ಗಿರೀಶ್, ಕುಪ್ಪಂಡ ಗಿರೀಶ್ ಪೂವಣ್ಣ, ಮಲ್ಲಂಡ ಮಧು, ಅಜಿತ್ ಕರುಂಬಯ್ಯ, ಕೊಲ್ಲೀರ ಗೋಪಿ ಚಿಣ್ಣಪ್ಪ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ಕಾಂಗ್ರೆಸ್ ಮುಖಂಡರಾದ ಮೀದೇರಿರ ನವೀನ್, ತೀತಿರ ಧರ್ಮಜ, ಕೊಲ್ಲಿರ ಧರ್ಮಜ, ಬಿ.ಎನ್ .ಪ್ರಥ್ವಿ, ಮುಕ್ಕಾಟೀರ ಶಿವು ಮಾದಪ್ಪ, ಮೂಕಳೇರ ಕುಶಾಲಪ್ಪ, ಸರಚಂಗಪ್ಪ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಅಬ್ದುಲ್ ರೆಹಮಾನ್ ಬಾಪು, ಅಬ್ದುಲ್ ಸಮ್ಮದ್ ಸೇರಿದಂತೆ ವಿವಿಧ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

-ಹೆಚ್.ಕೆ.ಜಗದೀಶ್/ಚನ್ನನಾಯಕ