ಮಡಿಕೇರಿ, ಮಾ. ೩೧: ಮಂಗಳೂರು ವಿಶ್ವವಿದ್ಯಾನಿಲಯವು ಈ ಬಾರಿ ಹೊಸ ವಿಧಾನ ಅಳವಡಿಸಿ ಕೊಂಡು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದ್ದು ಎಲ್ಲಾ ಪರೀಕ್ಷೆಗಳು ಅಂತಿಮ ವೇಳಾಪಟ್ಟಿಯಲ್ಲಿ ನಿಗದಿ ಪಡಿಸಿದಂತೆ ತಾ. ೧ ರಿಂದ (ಇಂದಿನಿAದ) ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಯಾವುದೇ ಅತಂಕಕ್ಕೆ ಒಳಗಾಗುವ ಆವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾನಿಲಯದ ಜೊತೆಗೂಡಿ ನಿಗದಿಪಡಿಸಿದಂತೆ ಪರೀಕ್ಷೆಯನ್ನು ನಡೆಸಿಕೊಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಗೆ ಒಳಗಾಗದೆ ಪರೀಕ್ಷೆ ಬರೆಯುವಂತೆ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.