ಕೊಡ್ಲಿಪೇಟೆ, ಮಾ. ೩೧: ಸಮೀಪದ ಹೇಮಾವತಿ ನದಿ ತೀರದಲ್ಲಿ ಪ್ರಥಮ ಹುಣ್ಣಿಮೆ ಆರತಿಯನ್ನು ಹೇಮಾವತಿ ನದಿ ಹುಣ್ಣಿಮೆ ಆರತಿ ಬಳಗದಿಂದ ಆಯೋಜಿಸಲಾಗಿತ್ತು,

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಆರತಿಯ ಕುರಿತು ಮಾತನಾಡಿ, ನದಿ ಜಲಮೂಲ ಇಲ್ಲದೆ ಮನುಷ್ಯ ಪ್ರಾಣಿ ಪಕ್ಷಿಗಳು ಬದುಕಲು ಸಾಧ್ಯವಿಲ್ಲ. ನಾವುಗಳು ನದಿ ಮೂಲದಿಂದ ಬದುಕನ್ನು ಕಟ್ಟಿಕೊಂಡಿರುವ ಸಂದರ್ಭದಲ್ಲಿ ಅದಕ್ಕೊಂದು ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ಎಲ್ಲಾ ಹುಣ್ಣಿಮೆಯಂದು ಆರತಿ ಕಾರ್ಯಕ್ರಮ ನಡೆಯಲಿದೆ ಎಂದರು,

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕಲ್ಲುಮಠದ ಶ್ರೀ ಮಹಾಂತ ಸ್ವಾಮಿಗಳು ಉಪಸ್ಥಿತರಿದ್ದರು. ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ. ಯತೀಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಕಾಂತರಾಜು, ಸೋಮಪ್ಪ ಮಾಸ್ಟರ್, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ ಸತೀಶ್, ಪ್ರಮುಖರಾದ ಭಗವಾನ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಹಾಲಪ್ಪ, ಕೊಡಗು ಜಿಲ್ಲಾ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದ ಕಾರ್ಯದರ್ಶಿಗಳು ಮತ್ತು ಅಖಿಲ ಕರ್ನಾಟಕ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕರಾದ ಸೋಮಶೇಖರ ಶಾಸ್ತಿç ಮತ್ತು ಜಿಲ್ಲಾ ಘಟಕದ ನಿರ್ದೇಶಕ ಕಲ್ಲುಮೃತ್ಯುಂಜಯ, ಹಿರೇಮಠ ಮತ್ತು ಶಂಕ್ರಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯೆ ಲಾವಣ್ಯ ಪ್ರಕಾಶ್ ಸೇರಿದಂತೆ ಹೇಮಾವತಿ ನದಿ ಹುಣ್ಣಿಮೆ ಆರತಿ ಬಳಗದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.