ಮಡಿಕೇರಿ, ಮಾ. ೩೦: ಶನಿವಾರಸಂತೆ ನಿವಾಸಿ ಶಫಿಯಾ (೨೩) ಕಾಣೆಯಾಗಿರುವುದಾಗಿ, ಆಕೆಯ ತಂದೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ ೧೯ ರಂದು ಬೆಳಿಗ್ಗೆ ೯ ಗಂಟೆಗೆ ಜೆರಾಕ್ಸ್ ಮಾಡಿಸಿಕೊಂಡು ಬರುವುದಾಗಿ ಮನೆಯಿಂದ ತೆರಳಿದವರು ಇನ್ನೂ ಕೂಡ ಮನೆಗೆ ಬಂದಿರುವುದಿಲ್ಲ ಎಂಬುದಾಗಿ ಶಫಿಯಾಳ ತಂದೆ ದೂರು ನೀಡಿದ್ದಾರೆ. ಶಫಿಯಾಳಿಗೆ ಕನ್ನಡ, ಮಲಯಾಳಂ ಭಾಷೆಗಳು ತಿಳಿದಿದ್ದು, ಪತ್ತೆಯಾದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ, ದೂ: ೦೮೨೭೬-೨೮೩೩೩೩ ಅನ್ನು ಸಂಪರ್ಕಿಸಲು ಕೋರಿದೆ.