ಮಡಿಕೇರಿ, ಮಾ. ೩೦: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಕಪ್ನ ವಿಜೇತ ತಂಡವಾಗಿ ಸಿದ್ದಾಪುರ ತಂಡ ಹೊರಹೊಮ್ಮಿತು. ವೀರಾಜಪೇಟೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಉಳಿದಂತೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಪ್ರಥಮ, ಟೀಮ್ ಬಲ್ಯದ ಕಗ್ಗೋಡ್ಲು ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು. ಮಹಿಳೆಯರ ವಿಭಾಗದಲ್ಲಿ ಕಲಾವತಿ ಮತ್ತು ತಂಡ ಪ್ರಥಮ, ಅಶ್ವಿನಿ ಮತ್ತು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಥ್ರೋಬಾಲ್ನಲ್ಲಿ ಮಡಿಕೇರಿ ಸವಿತಾ ಮಹಿಳಾ ಸಮಾಜ ಬಿ ಪ್ರಥಮ, ಸವಿತಾ ಮಹಿಳಾ ಸಮಾಜ ಎ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್, ತಾಲೂಕು ಅಧ್ಯಕ್ಷ ಮಧು ಎಂ.ಟಿ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪೌರಾಯುಕ್ತ ರಾಮದಾಸ್, ಸುಳ್ಯ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಗೌರವ ಸಲಹೆಗಾರ ಹರೀಶ್ ಬಂಟ್ವಾಳ್, ಕೊಡಗು ಜಿಲ್ಲಾ ಸವಿತಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸುಂದರಮ್ಮ, ಕ್ರೀಡಾ ಸಂಚಾಲಕ ಮಧು ಚೆಟ್ಟಿಮಾನಿ ಸೇರಿದಂತೆ ಇನ್ನಿತರರು ಇದ್ದರು.