ಮಡಿಕೇರಿ, ಮಾ. ೨೮; ಸವಿತಾ ಸಮಾಜದವರು ಸಂಘಟನೆ ಯಾಗುವದರ ಮೂಲಕ ಸರಕಾರದ ಸೌಲಭ್ಯಗಳನ್ನು ಹೊಂದಿಕೊಳ್ಳುವAತೆ ವಿಧಾನಪರಿಷತ್ತು ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದರು.
ಮಡಿಕೇರಿ ನಗರ ಸವಿತಾ ಸಮಾಜದ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಸವಿತಾ ಸಮಾಜದ ಕ್ರೀಡೊತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಅಳುವ ಮಕ್ಕಳಿಗೆ ಮಾತ್ರ ಹಾಲು ಎಂಬAತಾಗಿದ್ದು, ಸಂಘಟನೆ ಮೂ¯ಕ ಹೋರಾಡಿ ಸವಲತ್ತುಗಳನ್ನು ಪಡೆದುಕೊಳ್ಳಬೇಕಾಗಿದೆ. ಸವಿತಾ ಸಮಾಜದವರು ನಿವೇಶನಕ್ಕಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ, ನಿವೇಶನ ಗುರುತಿಸಿಕೊಟ್ಟಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ಕುಟ್ಟಪ್ಪ; ಜನಪ್ರತಿನಿಧಿಗಳು ಧ್ವನಿ ಇಲ್ಲದವರಿಗೆ ದನಿಯಾಗಬೇಕು, ಸವಿತಾ ಸಮಾಜಕ್ಕೆ ನಿವೇಶನ ಒದಗಿಸಿಕೊಡುವಂತೆ ವಿಧಾನ ಪರಿಷತ್ತು ಸದಸ್ಯರಲ್ಲಿ ಮನವಿ ಮಾಡಿದರು. ವಿರಳ ಸಂಖ್ಯೆಯಲ್ಲಿರುವ ಸವಿತಾ ಸಮಾಜದವರು ಸಂಘಟನೆಯಲ್ಲಿ ತೊಡಗಿಸಿಕೊಂಡು ಬಲಿಷ್ಠರಾಗಬೇಕಿದೆ. ವೃತ್ತಿಗೆ ಗೌರವ ಕೊಡುವದರೊಂದಿಗೆ ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿ ಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್ ಮಾತನಾಡಿ, ಸಂಘಟನೆ ಹಾಗೂ ಸಮಾಜ ಬಾಂಧವರಲ್ಲಿ ಕ್ರೀಡಾಸಕ್ತಿ ಮೂಡಿಸುವ ಉದ್ದೇಶದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ, ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಕೋರಿದರು. ನಮ್ಮದು ಚಿಕ್ಕ ಸಮಾಜವಾಗಿದ್ದು, ಸಂಘಟನೆಯೊAದಿಗೆ ಮುಂಚೂಣಿಗೆ ಬರಬೇಕಿದೆ. ಯಾವದೇ ಮನಸ್ಥಾಪಗಳಿದ್ದರೂ ಪರಸ್ಪರ ಚರ್ಚಿಸಿ ಸಮಾಜದ ಗೌರವ ಕಾಪಾಡುವಂತೆ ಕೋರಿದರು.
ಸಮಾಜದ ಹಿರಿಯ ಸದಸ್ಯ ತಮ್ಮಯ್ಯ ಸವಿತಾ ಮಹರ್ಷಿ ಅವರ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಶಾಂತೆಯAಡ ವಿಕಾಸ್, ಸವಿತಾ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು, ಕ್ರೀಡಾಧ್ಯಕ್ಷ ಮಧು ಚೆಟ್ಟಿಮಾನಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಂದರಮ್ಮ, ಮಡಿಕೇರಿ ನಗರಾಧ್ಯಕ್ಷ ಗಣೇಶ್ ಇದ್ದರು. ಸಮಾಜದ ಪುಟಾಣಿ ಮಕ್ಕಳು ಪ್ರಾರ್ಥಿಸಿದರೆ, ಬಲ್ಯದ ಚರಣ್ ಸ್ವಾಗತಿಸಿದರು. ಅವಿನಾಶ್ ಬೊಟ್ಲಪ್ಪ ನಿರೂಪಿಸಿ, ಸಾವಿತ್ರಿ ವಂದಿಸಿದರು. ಕ್ರೀಡೋತ್ಸವದ ಸಮಾರೋಪ ತಾ. ೩೦ ರಂದು (ಇಂದು) ನಡೆಯಲಿದೆ.