ಮಡಿಕೇರಿ, ಮಾ. ೨೯: ದೇವಾಟ್‌ಪರಂಬು ಕೊಡವ ನರಮೇಧ ಸ್ಮಾರಕದಲ್ಲಿ ಸಿ.ಎನ್.ಸಿ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ೧೭೮೫ ರ ಡಿಸೆಂಬರ್ ೧೨ ರಂದು ಟಿಪ್ಪು ದಾಳಿಗೆ ಹುತಾತ್ಮರಾದ ಸಹಸ್ರಾರು ಕೊಡವ ಹಿರಿಯರಿಗೆ ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರ ಮುಂದಾಳತ್ವದಲ್ಲಿ ಪುಷ್ಪನಮನ ಸಲ್ಲಿಸಲಾಯಿತು. ಅಂತರರಾಷ್ಟಿçÃಯ ಜನಾಂಗೀಯ ನಿಂಧನೆ ನಿರ್ಮೂಲನೆ ದಿನದ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಗಲಿದ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿ ಬುಡಕಟ್ಟು ಸ್ಥಾನಮಾನ ದೊರಕುವ ಸಂಬAಧ ನಡೆಯುತ್ತಿರುವ ಹೋರಾಟದ ಯಶಸ್ಸಿಗೆ ಆರ್ಶೀವಾದ ಪಡೆಯಲಾಯಿತು. ಈ ಸಂದರ್ಭ ಸಿ.ಎನ್.ಸಿ ಯ ಕಲಿಯಂಡ ಪ್ರಕಾಶ್, ಮಂಡೇಪAಡ ಮನೋಜ್, ಚೀಯಬೇರ ಸತೀಶ್ ಸೋಮಣ್ಣ ಹಾಗೂ ಲೆಪ್ಟಿನೆಂಟ್ ಕರ್ನಲ್ ಬಿ.ಎಮ್ ಪಾರ್ವತಿ ಅವರುಗಳು ಹಾಜರಿದ್ದರು.