ಚೆಟ್ಟಳ್ಳಿ, ಮಾ. ೨೯: ಕಳೆದ ವರ್ಷದ ಧಾರಾಕಾರ ಮಳೆಯಿಂದಾಗಿ ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಬರೆ ಜರಿದು ಅಪಾಯದ ಅಂಚಿನಲ್ಲಿರುವ ರಸ್ತೆ ಬದಿಗೆ ರೂ. ೬ ಕೋಟಿ ವೆಚ್ಚದ ತಡೆಗೋಡೆ ನಿರ್ಮಾಣ ಕಾರ್ಯ ಪಾರಂಭಿಸಲಾಗಿದೆ.
ಮಡಿಕೇರಿಯಿAದ ಸೋಮವಾರಪೇಟೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆ ಕಳೆದ ವರ್ಷ ಸುರಿದ ಭಾರೀ ಮಳೆಗೆ ಕುಸಿದಿತ್ತು. ಮೇಲಿಂದ ಬರೆಯ ಮಣ್ಣುಗಳು ರಸ್ತೆಗೆ ಜಾರಿದ ಪರಿಣಾಮವಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮಣ್ಣುಕೊಚ್ಚಿಹೋದ ಪರಿಣಾಮ ಪಕ್ಕದ ಕಾಫಿ ತೋಟಗಳೂ ಹಾನಿಯಾದವು.
ಜಿಲ್ಲಾಧಿಕಾರಿಗಳು, ಶಾಸಕರು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ರಸ್ತೆ ಸಂಪರ್ಕವನ್ನು ಕೂಡಲೇ ಸರಿಪಡಿಸಲು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜೇಸಿಬಿ ಯಂತ್ರದ ಮೂಲಕ ಮಣ್ಣನೆಲ್ಲ ರಸ್ತೆಬದಿಗೆ ಸರಿಸಿ ರಸ್ತೆ ಸಂಪರ್ಕ ಕಲ್ಪಿಸಿಕೊಡಲಾಯಿತು. ಜರಿದ ರಸ್ತೆಗೆ ಎಂಸ್ಯಾAಡ್ ತುಂಬಿದ ಚೀಲವನ್ನು ಇರಿಸಲಾಯಿತು. ಅಪಾಯದಲ್ಲಿದ್ದ ರಸ್ತೆಯಲ್ಲಿ ಸಣ್ಣ ಪ್ರಮಾಣದ ವಾಹನಗಳ ಜೊತೆ ಲಾರಿಗಳು ಸಂಚರಿಸಿದ ಪರಿಣಾಮ ರಸ್ತೆಗಳು ಮತ್ತಷ್ಟು ಹದಗೆÀಟ್ಟವು.
ತಡೆಗೋಡೆ ಕಾಮಗಾರಿಗೆ ಆನ್ಲೈನ್ ಗುತ್ತಿಗೆ
ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆಯಲ್ಲಿ ಕಳೆದ ಬಾರಿಸುರಿದ ಧಾರಾಕಾರ ಮಳೆಗೆ ಹೆಚ್ಚಾಗಿ ನಷ್ಟ ಸಂಭಸಿದ ಸುಮಾರು ೧೨ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಆನ್ಲೈನ್ನಲ್ಲಿ ಗುತ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು ೧೨ ಗುತ್ತಿದಾರರಿಗೆ ಪ್ರತ್ಯೇಕ ರಸ್ತೆಗೆ ತಡೆಗೋಡೆ, ಕಾಂಕ್ರೀಟ್ ಚರಂಡಿ, ಬರೆಗೆ ರಕ್ಷಣಾಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ನೀಡಲಾಗಿದೆ. ಮುಂದಿನ ಮಳೆಗಾಲ ಪ್ರಾರಂಭವಾಗುವ ಮುನ್ನ ಕಾಮಗಾರಿ ಮುಗಿಯಬೇಕಿದೆ.
ಕೆಲವೆಡೆ ತಡೆಗೋಡೆ ನಿರ್ಮಾಣಕ್ಕೆ ತೋಟದ ಮಾಲೀಕರ ವಿರೋಧ
ಕಳೆದ ಮಳೆಯಿಂದಾಗಿ ಭೂಕುಸಿತಕ್ಕೆ ಕಾಫಿತೋಟಗಳಿಗೆ ಲಕ್ಷಗಟ್ಟಲೆ ನಷ್ಟÀ ಉಂಟಾಗಿ ಮತ್ತೊಮ್ಮೆ ಕಾಫಿತೋಟ ಮಾಡಲು ಸಾಧ್ಯವಿಲದ ಪರಿಸ್ಥಿತಿ ಇದೆ. ಆದರೆ ಅದೇ ಜಾಗದಲ್ಲಿ ತೋಟದ ಬರೆಯನ್ನು ಮತ್ತಷ್ಟು ಕೊರೆದು ತೋಟದೊಳಗೆ ತಡೆಗೋಡೆ ನಿರ್ಮಿಸಬೇಕಿದೆÀ. ತಡೆಗೋಡೆಗೆ ತೆಗೆದ ಮಣ್ಣನ್ನು ಅಲ್ಲೆ ಬಿಡುವುದರಿಂದ ಬರುವ ವರ್ಷದ ಮಳೆಗೆ ಮಣ್ಣು ಜಾರಿ ಮತ್ತಷ್ಟು ಕಾಫಿತೋಟಗಳು ಮುಚ್ಚಿಹೋಗು ತ್ತದೆಂದು ತೋಟದ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವರ್ಷದ ಮಳೆಗೆ ಬರೆ ಜರಿದು ಮತ್ತಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಪೂರ್ಣಕಾಮಗಾರಿಗೆ ಹಣದ ಕೊರತೆ ಇರುವುದರಿಂದ ಭೂಕುಸಿತವಾಗಿ ಅಪಾಯದಲ್ಲಿರುವ ಸ್ಥಳಗಳಿಗೆ ಮಾತ್ರ ತಡೆಗೋಡೆ ನಿರ್ಮಿಸಲು ಹಣ ಬಿಡುಗಡೆಗೊಂಡಿದೆ. ಮುಂದೆ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಗೊಂಡಾಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಪೀಟರ್ ಮಾಹಿತಿ ನೀಡಿದ್ದಾರೆ.
-ಪುತ್ತರಿರ ಕರುಣ್ಕಾಳಯ್ಯ