ಹೊದ್ದೂರು, ಮಾ. ೨೬: ಮೂರ್ನಾಡು ಸನಿಹದ ಹೊದ್ದೂರುವಿನಲ್ಲಿ ವಿವಿಧ ದೇವರುಗಳ ವಾರ್ಷಿಕ ಉತ್ಸವ ತಾ. ೨೮ ರಿಂದ (ನಾಳೆ) ಏಪ್ರಿಲ್ ೨ ರವರೆಗೆ ನಡೆಯಲಿದೆ.

ಈ ಪ್ರಯುಕ್ತ ನಾಳೆ (ತಾ. ೨೮ ರ) ಸಂಜೆ ದೀಪಾರಾಧನೆ (ಅಂದಿಬೊಳಕ್) ತಾ. ೨೯ ರಂದು ಬೆಳಿಗ್ಗೆ ಬೋಡ್ ಆಟ, ಪಟ್ಟಣಿ ಹಬ್ಬ, ಭಗವತಿ ದೇವಿಯ ವಾರ್ಷಿಕೋತ್ಸವದ ಪ್ರಯುಕ್ತ ಸಂಜೆ ೭ ಗÀಂಟೆಗೆ ಮಹಾಪೂಜೆ, ಅಲಂಕಾರ ಪೂಜೆ ನಡೆಯಲಿದೆ. ತಾ. ೩೦ ರಂದು ಭದ್ರಕಾಳಿ ಉತ್ಸವ, ತಾ. ೩೧ ರಂದು ಬೆಳಿಗ್ಗೆ ೧೦ ಗಂಟೆಗೆ ಊರಿನ ಸಭೆ, ಚಾಮುಂಡಿ ದೇವಳದ ನಡೆ ತೆರೆಯುವುದು, ಅಂದಿ ತೋಯತ, ಏಪ್ರಿಲ್ ೧ ರಂದು ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಕೋಲಗಳ ಉತ್ಸವ ನಡೆಯಲಿದೆ.

ಏಪ್ರಿಲ್ ೨ ರಂದು ಬೆಳಿಗ್ಗೆ ೧೦ಕ್ಕೆ ಅಜ್ಜಪ್ಪ, ೧೨ಕ್ಕೆ ವಿಷ್ಣು ಮೂರ್ತಿ ಉತ್ಸವ, ಭಾರಣಿ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಭಗವತಿ ದೇವಾಲಯದ ಪುನಃ ನಿರ್ಮಾಣದ ಕಾರ್ಯದ ಪ್ರಯುಕ್ತ ಈ ಬಾರಿ ದೇವಿಯ ನೃತ್ಯಬಲಿ (ತಡಂಬು ಉತ್ಸವ) ನಡೆಸಲಾಗುವುದಿಲ್ಲ ಎಂದು ದೇಗುಲಗಳ ತಕ್ಕಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ