ಸೋಮವಾರಪೇಟೆ,ಮಾ.೨೬: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಸಂಘದ ಆವರಣದಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕ್ರೀಡಾ ಸ್ಪರ್ಧೆಗೆ ಸಂಘದ ಅಧ್ಯಕ್ಷೆ ಉಷಾ ತೇಜಸ್ವಿ ಚಾಲನೆ ನೀಡಿದರು. ನಂತರ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೇವಲ ಬಹುಮಾನಕ್ಕಾಗಿ ಸ್ಪರ್ಧಿಸದೆ, ಆರೋಗ್ಯದ ದೃಷ್ಟಿಯಿಂದ ಪಾಲ್ಗೊಳ್ಳಬೇಕೆಂದರು.

ಸAಘದ ವತಿಯಿಂದ ತಾ. ೨೭ರಂದು(ಇAದು) ಬೆಳಿಗ್ಗೆ ೧೦.೩೦ಕ್ಕೆ ಸಮಾಜದ ಆವರಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಟಿ. ಚಂದ್ರಕಲಾ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಣೆ, ಸದಸ್ಯರಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ಸಂಘದ ಸದಸ್ಯರಿಗೆ ಹೌಸಿ ಹೌಸಿ, ಎಡಗೈಯಿಂದ ಬಳೆ ಜೋಡಿಸುವುದು, ಡೈಸಿ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆ ಹಾಗೂ ಬ್ಯೂಟಿಷಿಯನ್ ತರಬೇತಿ ನಡೆಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಸುಮಾ ಸುದೀಪ್, ಗೌರವ ಕಾರ್ಯದರ್ಶಿ ನಳಿನಿ ಗಣೇಶ್, ಸಹ ಕಾರ್ಯದರ್ಶಿ ಗಾಯಿತ್ರಿ ನಾಗರಾಜ್, ನಿರ್ದೇಶಕರಾದ ಜಲಜಾ ಶೇಖರ್, ಲೀಲಾ ನಿರ್ವಾಣಿ, ಶೋಭಾ ಶಿವರಾಜ್, ವಿಜಯಲಕ್ಷಿö್ಮÃ ಸುರೇಶ್, ಶೋಭಾ ಯಶವಂತ್, ಜ್ಯೋತಿ ಶುಭಾಕರ್, ಗೀತಾ ರಾಜು, ಚಂದ್ರಕಲಾ ಗಿರೀಶ್ ಉಪಸ್ಥಿತರಿದ್ದರು