ಕುಶಾಲನಗರ, ಮಾ.೨೬: ಕುಶಾಲನಗರ ಪಟ್ಟಣ ಪಂಚಾಯಿತಿ ಮಾಂಸ ಮಾರುಕಟ್ಟೆ ಹರಾಜಿನಲ್ಲಿ ಈ ಸಾಲಿನಲ್ಲಿ ಲಕ್ಷಾಂತರ ರೂ. ನಷ್ಟ ಕಂಡುಬAದಿದೆ.

ವಾರ್ಷಿಕ ರೂ.೪೦ ರಿಂದ ೫೦ ಲಕ್ಷ ಆದಾಯ ಬರುತ್ತಿದ್ದ ಮಾರುಕಟ್ಟೆ ಹರಾಜಿನಲ್ಲಿ ಈ ಬಾರಿ ಕೇವಲ ರೂ.೫ ಲಕ್ಷ ಆದಾಯ ಮಾತ್ರ ಲಭಿಸಿದೆ. ಕೋಳಿ, ಕುರಿ, ಮಾಂಸ ಮಳಿಗೆಗಳು ಕಡಿಮೆ ದರದಲ್ಲಿ ಬಿಡ್ ಆಗಿದ್ದು, ಮೀನು ಮಾರಾಟ ಮಳಿಗೆಗಳ ಹರಾಜಿನಲ್ಲಿ ಯಾರೂ ಪಾಲ್ಗೊಂಡಿಲ್ಲ.

ಬಿಡ್ಡು ದಾರರಾದ ಮುಜಾಹಿದ್ ಮತ್ತು ರಫೀಕ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೊರೊನಾದಂತಹ ಸಂಕಷ್ಟದಲ್ಲಿ ವ್ಯಾಪಾರವೇ ಇಲ್ಲದೆ ನಾವುಗಳು ಸಂಕಷ್ಟ ಎದುರಿಸುತ್ತಿದ್ದೇವೆ. ಸಂತೆ ದಿನವಾದ ಮಂಗಳವಾರ ವ್ಯಾಪಾರವಾಗುತ್ತಿತ್ತು; ಆದರೆ ಸಂತೆಯನ್ನು ಕೃಷಿ ಮಾರುಕಟ್ಟೆ ಸ್ಥಳಕ್ಕೆ ಸ್ಥಳಾಂತರಿಸಿರುವುದರಿAದ ಮಂಗಳವಾರದ ವ್ಯಾಪಾರವೂ ಇಲ್ಲದಂತಾಗಿದೆ ಸರಕಾರಿ ಸವಾಲಿನ ದರವನ್ನು ಕಡಿಮೆ ಮಾಡಿದರೆ ಬಿಡ್ಡುದಾರರು ಸುಲಭವಾಗಿ ಮಾರಾಟ ಮಳಿಗೆಗಳನ್ನು ಪಡೆದು ವ್ಯಾಪಾರ ಮಾಡಲು ಅನುಕೂಲವಾಗುತ್ತದೆ ಎಂದಿದ್ದಾರೆ.

ಪಟ್ಟಣದ ಇಪ್ಪತ್ತು ಮಾರಾಟ ಮಳಿಗೆಗಳಲ್ಲಿ ಕೇವಲ ಐದು ಮಳಿಗೆಗಳು ಬಿಡ್ಡ್ ಆಗಿದ್ದು ಬಹುತೇಕ ಮಳಿಗೆಗಳನ್ನು ಬಿಡ್ ಕರೆಯದೆ ಬೀಗ ಜಡಿಯಲಾಗಿದೆ. ಪ್ರತಿ ವರ್ಷ ಮೀನು ಮಾರಾಟ ಮಳಿಗೆಗೆ ಭಾರೀ ಬೇಡಿಕೆ ಇತ್ತು ಆದರೆ ಈ ಬಾರಿ ಮೀನಿನ ಮಳಿಗೆಯನ್ನು ಬಿಡ್ ಮಾಡಲು ಯಾರೂ ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆ ಸ್ಥಳಾಂತರ ಆಗಿರುವ ಹಿನ್ನೆಲೆಯಲ್ಲಿ ಸುಂಕ ಸಂಗ್ರಹ ಕೂಡ ಇಲ್ಲದೆ ಆದಾಯ ಕುಂಠಿತವಾಗಲು ಕಾರಣವಾಗಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಜಯವರ್ಧನ, ಉಪಾಧ್ಯಕ್ಷೆ ಸುರಯ್ಯಬಾನು ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ, ಸದಸ್ಯರುಗಳು, ಬಿಡ್ಡುದಾರರು ಇದ್ದರು.