(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮಾ. ೨೬: ಕೊಡಗು ಜಿಲ್ಲೆಯ ನೂತನ ಪೊನ್ನಂಪೇಟೆ ತಾಲೂಕಿನ ಅವಳಿ ಪಂಚಾಯಿತಿಗಳಾದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಮಾ. ೨೯ ರಂದು ಚುನಾವಣೆ ನಡೆಯಲಿದೆ. ಈ ಎರಡು ಪಂಚಾಯಿತಿಗಳು ಪ್ರತಿಷ್ಠೆಯ ಪಂಚಾಯಿತಿಗಳಾಗಿರುವುದರಿAದ ಕಣದಲ್ಲಿ ಅನುಭವಿ, ಘಟಾನುಘಟಿ ನಾಯಕರುಗಳು ಸ್ಪರ್ಧೆ ಬಯಸಿದ್ದಾರೆ. ವಿವಿಧ ಪಕ್ಷಗಳ ಆಧಾರದಲ್ಲಿ ಚುನಾವಣೆ ನಡೆಯದಿದ್ದರೂ ಅಭ್ಯರ್ಥಿಗಳು ಮತದಾರರ ಬಳಿ ಇಂತ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವುದಾಗಿ ಮತ ಕೇಳುತ್ತಿದ್ದಾರೆ. ವಿವಿಧ ಪಕ್ಷದ ಮುಖಂಡರುಗಳು ಈಗಾಗಲೇ ಎರಡು ಮೂರು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಗುಂಪು ಗುಂಪಾಗಿ ಮತ ಯಾಚಿಸುತ್ತಿದ್ದಾರೆ. ಕೆಲವು ಅಭ್ಯರ್ಥಿಗಳು ಒಬ್ಬಂಟಿಗರಾಗಿಯೇ ಮತದಾರರ ಮನೆ ಬಾಗಿಲನ್ನು ತಟ್ಟಿ ತನಗೊಂದು ಮತ ನೀಡಿ ಎಂದು ಓಲೈಸುತ್ತಿದ್ದಾರೆ.

ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಗ್ರಾಮ ಮಟ್ಟದಲ್ಲಿ ಹಿಡಿತ ಸಾಧಿಸಿ ಮುಂಬರುವ ಚುನಾವಣೆಯಲ್ಲಿ ಅಡಿಪಾಯ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಶತ ಪ್ರಯತ್ನ ನಡೆಸಿದೆ. ಎರಡು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಇನ್ನಿಲ್ಲದ ಪ್ರಯತ್ನಗಳು ಬಿರುಸಿನಿಂದ ಸಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವುದರಿಂದ ಕದನ ಕಣ ರಂಗೇರಲು ಕಾರಣವಾಗಿದೆ. ಹಗಲು ರಾತ್ರಿ ಎನ್ನದೆ ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರನ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸುತ್ತಿರುವುದು ಬಿರುಸುಗೊಂಡಿದೆ.

ಈ ಹಿಂದೆ ಆರಿಸಿ ಬಂದಿದ್ದ ಸದಸ್ಯರು ಮತ್ತೊಮ್ಮೆ ಚುನಾವಣೆಯಲ್ಲಿ ಮತ ಗೆಲ್ಲಲು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸದ ಬಗ್ಗೆ ಮತದಾರರಿಗೆ ಮಾಹಿತಿ ತಿಳಿಸುವ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರ ನಡೆಸಿ ಮತ ಯಾಚಿಸುವುದು ಕಂಡು ಬಂದಿದೆ.

ಬಹುತೇಕ ಅಭ್ಯರ್ಥಿಗಳು ಹೊಸ ಮುಖಗಳಾಗಿದ್ದು ಈ ಬಾರಿಯು ಚುನಾವಣಾ ಕಣದಲ್ಲಿದ್ದಾರೆ. ದೂರದ ಊರುಗಳಲ್ಲಿ ನೆಲೆಸಿರುವ ಮತದಾರರನ್ನು ಕಂಡು ಹಿಡಿದು ಮತದಾನಕ್ಕೆ ಆಗಮಿಸುವಂತೆ ಮನವೊಲಿಸುತ್ತಿರುವುದು ವಿಶೇಷವಾಗಿದೆ. ಚುನಾವಣಾ ದಿನದಂದು ವಿವಿಧ ಪರೀಕ್ಷೆಗಳು ಇರುವದರಿಂದ ಬಹುತೇಕ ಮತದಾರರು ಮತ ಚಲಾಯಿಸಲು ಆಗಮಿಸಲಾಗುತ್ತಿಲ್ಲ ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗಿದ್ದು ಇದು ನಿರಾಶೆಯ ಕಾರಣವಾಗಿದೆ.

ರಾಷ್ಟಿçÃಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರುಗಳು ಈ ಚುನಾವಣೆಯಲ್ಲಿ ಭಾಗವಹಿಸಲು,ತಮ್ಮ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಲು ನಗರಕ್ಕೆ ಆಗಮಿಸಿದ್ದಾರೆ. ಪ್ರತಿ ವಾರ್ಡಿಗೂ ಉಸ್ತುವಾರಿಗಳನ್ನು ನೇಮಿಸಿ ಅಭ್ಯರ್ಥಿ ಗೆಲುವಿನ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.

ಬಿಜೆಪಿ ಪಕ್ಷದ ಶಾಸಕರಾದ ಕೆ.ಜಿ.ಬೋಪಯ್ಯ ಈಗಾಗಲೇ ಎರಡು ಸುತ್ತಿನಲ್ಲಿ ಮತ ಪ್ರಚಾರ ನಡೆಸಿದ್ದು ಅಭಿವೃದ್ಧಿಗಾಗಿ ಮತ ನೀಡುವಂತೆ ಮತದಾರರನ್ನು ಮನವಿ ಮಾಡುತ್ತಿದ್ದಾರೆ. ಪಕ್ಷದ ನಾಯಕರುಗಳು ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಅಭ್ಯರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದೆ. ಬಿಜೆಪಿಯ ನೆಲ್ಲೀರ ಚಲನ್, ಸಿ.ಕೆ.ಬೋಪಣ್ಣ,ಚೆಪ್ಪುಡೀರ ಮಾಚು,ಅಜ್ಜಿಕುಟ್ಟೀರ ಪ್ರವೀಣ್,ಗುಮ್ಮಟ್ಟೀರ ಕಿಲನ್,ಕೊಲ್ಲೀರ ಗೋಪಿಚಿಣ್ಣಪ್ಪ, ಸೇರಿದಂತೆ ಅನೇಕ ಮುಖಂಡರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ ಕಾಂಗ್ರೆಸ್‌ನ ಕಾನೂನು ಘಟಕದ ರಾಜ್ಯಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಣ್ಣ, ರಾಜ್ಯ ಮುಖಂಡರಾದ ಕದ್ದಣಿಯಂಡ ಹರೀಶ್, ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸುತ್ತಿದ್ದು ಕಾರ್ಯಕರ್ತರಲ್ಲಿ ಹರ್ಷ ಮೂಡಿದೆ. ಕಾಂಗ್ರೆಸ್‌ನ ಮಿದೇರಿರ ನವೀನ್,ಅ ಬ್ದುಲ್ ರೆಹಮಾನ್ ಬಾಪು, ಎ.ಜೆ. ಬಾಬು, ಅಜಿತ್ ಅಯ್ಯಪ್ಪ, ಹಾಗೂ ತೀತಿರ ಧರ್ಮಜ ,ಕೊಲ್ಲೀರ ಬೋಪಣ್ಣ, ಕಡೇಮಾಡ ಕುಸುಮಾ ಜೋಯಪ್ಪ, ಮೂಕಳೇರ ಕುಶಾಲಪ್ಪ, ಮುಕ್ಕಾಟೀರ ಶಿವು ಮಾದಪ್ಪ, ಸೇರಿದಂತೆ ಅನೇಕ ಮುಖಂಡರು ಅಭ್ಯರ್ಥಿಗಳೊಂದಿಗೆ ಮತಯಾಚನೆ ನಡೆಸುತ್ತಿದ್ದಾರೆ.

ಗೋಣಿಕೊಪ್ಪ ಕಣದಲ್ಲಿ ೫೧ ಅಭ್ಯರ್ಥಿಗಳು.!

ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ೨೧ ಅಭ್ಯರ್ಥಿಗಳು ಆಯ್ಕೆಯಾಗ ಬೇಕಾಗಿದ್ದು ಇದೀಗ ಕಣ ದಲ್ಲಿ ಪಕ್ಷೇತರರು ಸೇರಿದಂತೆ ಒಟ್ಟು ೫೧ ಅಭ್ಯ ರ್ಥಿಗಳು ಕಣದಲ್ಲಿದ್ದು ಜಯಶೀಲ ರಾಗಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಗೋಣಿಕೊಪ್ಪ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಕೆ.ಬೋಪಣ್ಣ ಮುಂದಾಳತ್ವದಲ್ಲಿ ೨೧ ಸದಸ್ಯರು ಕಣದಲ್ಲಿದ್ದಾರೆ. ಅಜಿತ್ ಅಯ್ಯಪ್ಪ, ಮೀದೇರಿರ ನವೀನ್ ಹಾಗೂ ತಿತೀರ ಧರ್ಮಜರವರ ಮುಂದಾಳತ್ವದಲ್ಲಿ ೨೧ ಅಭ್ಯರ್ಥಿ ಗಳು ಕಣದಲ್ಲಿ ದ್ದಾರೆ. ಇನ್ನುಳಿ ದಂತೆ ೯ ಅಭ್ಯರ್ಥಿಗಳು ಪಕ್ಷೇತರರಾಗಿ ವಿವಿಧ ವಾರ್ಡ್ ಗಳಲ್ಲಿ ಕಣದಲ್ಲಿ ದ್ದಾರೆ. ಈ ಹಿಂದೆ ಇದ್ದ ಕಾವೇರಿ ಹಿಲ್ಸ್ ಬಡಾವಣೆಯು ನಾಲ್ಕನೇ ವಾರ್ಡ್ ಆಗಿ ಮಾರ್ಪಟ್ಟಿದೆ. ಹರಿಶ್ಚಂದ್ರಪುರದ ವಾರ್ಡ್ ಸಂಖ್ಯೆ ೬ ಎಂದು ಗುರುತಿಸಲಾಗಿದೆ. ಪಟೇಲ್ ನಗರದ ವಾರ್ಡ್ನ್ನು ೫ನೇ ವಾರ್ಡ್ ಆಗಿ ಪರಿವರ್ತಿಸಲಾಗಿದೆ.

ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಪಂಚಾಯಿತಿಯಲ್ಲಿ ಅಧಿಕಾರ ನಡೆಸಿದ್ದ ಕೆಲವು ಮಂದಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ೧ನೇ ವಿಭಾಗದಿಂದ ಬಿ.ಎನ್. ಪ್ರಕಾಶ್, ೨ನೇ ವಿಭಾಗದಿಂದ ಕೆ.ಜಿ.ರಾಮಕೃಷ್ಣ, ೩ನೇ ವಾರ್ಡ್ನಿಂದ ಎಂ.ಮAಜುಳ, ಮುರುಗ ಹೆಚ್.ಬಿ. ೪ನೇ ವಾರ್ಡ್ನಿಂದ ರತಿ ಅಚ್ಚಪ್ಪ,ಕೆ.ಎಂ.ಮಮಿತ,೫ನೇ ವಾರ್ಡ್ನಿಂದ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ. ಸುಲೇಖ, ಆರ್, ಧನಲಕ್ಷಿö್ಮ, ಹಾಗೂ ಮಂಜುಸುರೇಶ್ ರೈ, ೬ನೇ ವಾರ್ಡ್ನಿಂದ ಕುಲ್ಲಚಂಡ ಪ್ರಮೋದ ಗಣಪತಿ, ಶಾಹೀನ್, ೭ನೇ ವಾರ್ಡ್ನಿಂದ ರಾಜಶೇಖರನ್ ಹಾಗೂ ೮ನೇ ವಾರ್ಡಿನಿಂದ ಯಾಸ್ಮೀನ್ ಎಸ್. ಕಣದಲ್ಲಿದ್ದಾರೆ.

ಉಳಿದಂತೆ ರಾಜಕೀಯದಲ್ಲಿ ಗುರುತಿಸಿಕೊಂಡು ಹಲವು ಬಾರಿ ಪಂಚಾಯಿತಿಗೆ ಆಯ್ಕೆಯಾಗಿ ನಂತರ ವಿಶ್ರಾಂತಿ ಪಡೆದಿದ್ದ ಕೆಲವು ಮಂದಿ ಈ ಬಾರಿ ಮತ್ತೆ ಅವಕಾಶಕ್ಕಾಗಿ ಮತದಾರರ ಬಳಿ ತೆರಳಿದ್ದಾರೆ. ಇದರಲ್ಲಿ ೧ನೇ ವಾರ್ಡ್ನಿಂದ ಕೊಣಿಯಂಡ ಬೋಜಮ್ಮ, ೨ನೇ ವಾರ್ಡ್ನಿಂದ ಕುಪ್ಪಂಡ ಗಣೇಶ್ ತಿಮ್ಮಯ್ಯ, ೩ನೇ ವಾರ್ಡ್ನಿಂದ ಕೆ.ರಾಜೇಶ್, ೫ನೇ ವಾರ್ಡ್ನಿಂದ ಸೌಮ್ಯ ಸಿ.ಎ.,೮ನೇ ವಾರ್ಡ್ನಿಂದ ಅಬ್ದುಲ್ ಜಲೀಲ್ ಕೆ.ಪಿ. ಕಣದಲ್ಲಿದ್ದಾರೆ.

ಹೊಸ ಮುಖಗಳು

ಪಂಚಾಯಿತಿ ಚುನಾವಣೆಗೆ ಈ ಬಾರಿ ಹಲವು ಹೊಸ ಮುಖಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗಿದೆ. ೨ ರಾಜಕೀಯ ಪಕ್ಷಗಳು ಹೊಸಬರಿಗೆ ಅವಕಾಶ ನೀಡಿದೆ. ಇವುಗಳಲ್ಲಿ ೧ನೇ ವಿಭಾಗದಿಂದ ಕುಮಾರ ಹೆಚ್.ಎನ್., ರಾಮ್‌ದಾಸ್ ಹೆಚ್.ಡಿ., ಶಕೀಲ್ ಅಹಮ್ಮದ್ ಎಂ.ಎನ್., ಶರೀಫ ಕೆ.ಇ., ೨ನೇ ವಿಭಾಗದಿಂದ ಗೀತಾ ಜಿ.ಕೆ., ಪ್ರಿಯಾ ಡಿ. ೩ನೇ ವಿಭಾಗದಿಂದ ಕವಿತ ಕೆ.ಎಸ್., ಶಮ್ಮು ಶಮೀಲ್, ಶಶಿಕಲ ಬಿ.ಡಿ., ಸವಿತಾ ವೈ.ಎಂ., ೪ನೇ ವಾರ್ಡಿನಿಂದ ಎಂ.ಎA. ಥಾಮಸ್, ಪಿ.ವಿ. ಸುನೀತಾ, ಹಕೀಂ ಪಿ.ಎಂ., ಸೌಮ್ಯ ಸಿ.ಎ., ೫ನೇ ವಾರ್ಡಿನಿಂದ ಜ್ಯೋತಿ ಹೆಚ್.ಆರ್., ವಿ.ಸಂಧ್ಯಾ, ೬ನೇ ವಾರ್ಡಿನಿಂದ ಅಪ್ಜಲ್, ಎಸ್.ಎ. ತಸ್ಲೀಂ ಆರೀಫ್, ಲಲಿತ, ವಿನೋದ್, ೭ನೇ ವಾರ್ಡಿನಿಂದ ಎಂ.ಎಸ್.ಪುಷ್ಪ, ವಿವೇಕೆ ಬಿ.ಎನ್. ಸವಿತಾ, ೮ನೇ ವಾರ್ಡಿನಿಂದ ಅಬ್ದುಲ್ ಜಲೀಲ್, ಚೈತ್ರ,ಶರತ್‌ಕಾಂತ್ ವಿವಿಧ ಪಕ್ಷಗಳು ಇವರನ್ನು ಪರಿಚಯಿಸಿದೆ.

ಪಕ್ಷೇತರರು

ಕೆಲವು ವಾರ್ಡ್ಗಳಲ್ಲಿ ತಮಗೆ ವಿವಿಧ ಪಕ್ಷಗಳಿಂದ ಬೆಂಬಲ ಸಿಗದ ಹಿನ್ನಲೆಯಲ್ಲಿ ಕೆಲವು ಮಂದಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ೧ನೇ ವಾರ್ಡ್ನಲ್ಲಿ ಕುಮಾರಪ್ಪ ಹೆಚ್.ಎಲ್. ೩ನೇ ವಾರ್ಡ್ನಲ್ಲಿ ತಂಬಿ ಕರ್ಣರಾಜ್, ಮುರುಗ ಹೆಚ್.ಬಿ., ಬಿಎಸ್. ಶಕುಂತಲ, ಟಿ.ಎಂ. ಶೀಭಾ, ೪ನೇ ವಾರ್ಡಿನಲ್ಲಿ ಡಿ.ಆರ್. ಮಂಜುಳ, ಹರಿದಾಸ್ ಎ.ಕೆ., ೬ನೇ ವಾರ್ಡಿನಲ್ಲಿ ರಿಯಾಸ್ ಎಂ.ಬಿ. ೮ನೇ ವಾರ್ಡಿನಲ್ಲಿ ಎ.ಎಂ.ದಿನೇಶ್ ಸ್ಪರ್ಧಾ ಕಣದಲ್ಲಿದ್ದಾರೆ.

೩ನೇ ಹಾಗೂ ೮ನೇ ವಾರ್ಡಿನಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ಉಳಿದ ಅಭ್ಯರ್ಥಿಗೆ ಪ್ರಭಲ ಫೈಪೋಟಿ ನೀಡಿದ್ದು ಎರಡು ವಾರ್ಡ್ಗಳಲ್ಲಿ ಗೆಲುವಿನ ನಗೆ ಬೀರಲು ಪ್ರಯತ್ನಿಸಿದ್ದಾರೆ. ೩ನೇ ವಾರ್ಡಿನಲ್ಲಿ ಕಳೆದ ಬಾರಿಯ ಸದಸ್ಯರಾಗಿದ್ದ ಮುರುಗ ಹೆಚ್.ಬಿ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದು ಎದುರಾಳಿ ಶಮ್ಮು ಹಾಗೂ ರಾಜೇಶ್ ಕೆ. ಇವರಿಗೆ ಪೈಪೋಟಿ ನೀಡಿದ್ದಾರೆ. ಅಲ್ಲದೆ ಕರ್ಣರಾಜ್ ತಂಬಿ ಕೂಡ ಇಲ್ಲಿ ಮತ ವಿಭಜಿಸಿ ತನಗೆ ಸಿಗಬಹುದಾದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ವಾರ್ಡಿನಲ್ಲಿ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳೆದ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಮಂಜುಳ ಎಂ. ಇವರಿಗೆ ಪಕ್ಷೇತರ ಅಭ್ಯರ್ಥಿ ಟಿ.ಎಂ.ಶಿಭಾ ಪ್ರಭಲ ಫೈಪೋಟಿ ನೀಡಿದ್ದಾರೆ.

ಹಲವೆಡೆ ನೇರಸ್ಪರ್ಧೆ ಇದ್ದರೆ ಕೆಲವು ವಾರ್ಡ್ನಲ್ಲಿ ತ್ರಿಕೋನ ಸ್ಪರ್ಧೆ ಎದುರಾಗಿದೆ.