ಕೊಡ್ಲಿಪೇಟೆ, ಮಾ. ೨೬: ಸಮೀಪದ ಊರುಗುತ್ತಿ ಗ್ರಾಮದ ಯು.ಸಿ. ವಾರಿಯರ್ಸ್ ವತಿಯಿಂದ ಆಯೋಜಿಸಿದ್ದ ಅಂತರ್‌ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಸಕಲೇಶಪುರದ ಪ್ಲಸ್ ಎಸ್‌ಕೆಪಿ ತಂಡ ಪ್ರಥಮ ಹಾಗೂ ಕೊಡ್ಲಿಪೇಟೆಯ ಕೂರ್ಗ್ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದವು.
ಪಂದ್ಯಾವಳಿಯಲ್ಲಿ ವಿವಿಧ ಭಾಗದಿಂದ ೨೦ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಉತ್ತಮ ಬೌಲರ್ ಪ್ರಶಸ್ತಿಯನ್ನು ಕೂರ್ಗ್ ಬಾಯ್ಸ್ನ ವಸಂತ್, ಬ್ಯಾಟ್ಸ್ಮೆನ್ ಎಸ್‌ಕೆಪಿ ತಂಡದ ರಫೀಕ್, ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಶರೀಫ್ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಮಹೇಶ್ ಊರುಗುತ್ತಿ ವಹಿಸಿದ್ದರು. ರೋಟರಿ ಅಧ್ಯಕ್ಷ ಹೆಚ್.ಎಂ. ದಿವಾಕರ್, ತೇಜಸ್ ಅವರುಗಳು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಿಡಿಓ ಹೂವಯ್ಯ, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್, ಪ್ರಮುಖರಾದ ದಯಾನಂದ್, ಸಂದೀಪ್ ಹೊನ್ನರಾಜ್, ನಟರಾಜ್, ಸಿದ್ದೇಶ್, ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.