ಮಡಿಕೇರಿ, ಮಾ. ೨೫: ಕಳೆದ ಎರಡು ವರ್ಷಗಳಿಂದ ಮಡಿಕೇರಿ ನಗರಸಭೆಗೆ ಚುನಾವಣೆ ನಡೆದಿಲ್ಲ. ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವದಿ ಪೂರ್ಣಗೊಂಡಿದ್ದು ವರ್ಷಗಳೇ ಕಳೆದರೂ ಕೆಲವು ಆಕ್ಷೇಪಣೆಗಳು ನ್ಯಾಯಾಲಯದ ಮೊರೆಯಂತಹ ಕಾರಣಾಂತರಗಳಿAದ ನಗರಸಭೆಯಲ್ಲಿ ಹೊಸ ಆಡಳಿತ ಮಂಡಳಿ ಇಲ್ಲ. ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದು ಅಧಿಕಾರ ವರ್ಗದಿಂದಲೇ ಚಟುವಟಿಕೆಗಳು ಪ್ರಸ್ತುತ ನಡೆಯುತ್ತಿವೆ.

ಈ ನಡುವೆ ದಿಢೀರನೆ ಕೆಲವು ದಿನಗಳಿಂದ ನಗರದಾದ್ಯಂತ ಚುನಾವಣಾ ಕಸರತ್ತು ಆರಂಭಗೊAಡAತಿದೆ. ಇದಕ್ಕೆ ಕಾರಣ ನಗರದ ೨೩ ವಾರ್ಡ್ಗಳಿಗೆ ಮೀಸಲಾತಿ ಮತ್ತೆ ಪ್ರಕಟವಾಗಿರುವುದು. ಈ ಹಿಂದೆ ಮೀಸಲಾತಿ ನಿಗದಿ ಕುರಿತಾಗಿಯೇ ಹಲವರು ನ್ಯಾಯಾಲಯದ ಕದ ತಟ್ಟಿದ್ದ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗಿತ್ತು. ಇದೀಗ ಮತ್ತೊಮ್ಮೆ ಮೀಸಲಾತಿ ವಿವರ ಹೊರಬಿದ್ದಿದ್ದು ಬಹುಶಃ ಇದೇ ಅಂತಿಮವೆನ್ನಲಾಗಿದೆ.

ಇದರ ವಿರುದ್ಧ ಯಾರೂ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿಲ್ಲ. ಏಕೆಂದರೆ ಈಗಾಗಲೇ ಚುನಾವಣೆ ಎರಡು ವರ್ಷಗಳ ಕಾಲ ತಡವಾಗಿದೆ. ಇದನ್ನು ಮರು ಪ್ರಶ್ನಿಸಿ ಯಾರಾದರೂ ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾದರೆ ಲಕ್ಷಾಂತರ ಹಣ ಪಾವತಿಸಬೇಕಾಗಿದೆ ಎಂದು ಹೇಳಲಾಗಿದ್ದು, ಯಾರೂ ಈ ಸಾಹಸಕ್ಕೆ ಮುಂದಾಗುವ ಸಾಧ್ಯತೆ ಇಲ್ಲ. ಇದರಿಂದಾಗಿ ಪ್ರಸ್ತುತ ಘೋಷಿಸಲ್ಪಟ್ಟಿರುವ ಮೀಸಲಾತಿಯೇ ಅಂತಿವಾಗಲಿದೆ.

(ಮೊದಲ ಪುಟದಿಂದ) ಈ ಕಾರಣದಿಂದಾಗಿಯೇ ಇದೀಗ ಚುನಾವಣೆ ಕಾವು ಏರತೊಡಗಿದೆ. ಇನ್ನೂ ಅಧಿಕೃತವಾಗಿ ಚುನಾವಣೆ ಪ್ರಕಟಗೊಳ್ಳದಿದ್ದರೂ ಈಗಾಗಲೇ ಆಸಕ್ತ ಅಭ್ಯರ್ಥಿಗಳು ತಾವೇ ಅಭ್ಯರ್ಥಿಗಳೆಂದು ವಿವಿಧ ವಾರ್ಡ್ಗಳಲ್ಲಿ ಪ್ರಚಾರವನ್ನೇ ಆರಂಭಿಸಿಬಿಟ್ಟಿದ್ದಾರೆ. ಇದು ರಾಜಕೀಯ ಪಕ್ಷದ ಚಿಹ್ನೆಯಡಿ ನಡೆಯುವ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಸಿಲ್ಲವಾದರು, ಇದಕ್ಕಾಗಿ ಈಗಾಗಲೇ ಪೂರ್ವ ತಯಾರಿ ಮಾಡಿ ಕೊಂಡಿರುವವರು ರಂಗಕ್ಕೆ ದುಮುಕಿದ್ದಾರೆ. ಜನತೆ ಅಚ್ಚರಿಪಡುವಂತೆ ಕೆಲವಾರು ವಾರ್ಡ್ಗಳಲ್ಲಿ ವಿವಿಧ ಕೆಲಸ - ಕಾರ್ಯಗಳು ಬಿರುಸು ಕಾಣುತ್ತಿವೆ. ಅಭ್ಯರ್ಥಿಗಳು ಎಂದು ಹೇಳಲಾಗುತ್ತಿರುವವರು ತಾವೇ ಖುದ್ದಾಗಿ ನಿಂತು ಇದರ ಉಸ್ತುವಾರಿ ಗಮನಿಸುತ್ತಿರುವುದು ಕಂಡುಬAದಿದೆ. ಈ ಹಿಂದೆ ಇದ್ದ ವಾರ್ಡ್ಗಳ ಮೀಸಲಾತಿ ಬದಲಾವಣೆಯಿಂದಾಗಿ ಅವಕಾಶ ಇರುವಲ್ಲಿ ಸ್ಪರ್ಧೆಗೆ ಇಳಿಯವ ನಿಟ್ಟಿನಲ್ಲಿ ಈ ಆಸಕ್ತ ಅಭ್ಯರ್ಥಿಗಳ ಕಸರತ್ತು ಆರಂಭಗೊAಡಿದ್ದು, ವ್ಯಾಪ್ತಿಯ ಪ್ರಮುಖರ, ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಿಂತ ನೀರಂತಾಗಿದ್ದ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಇದೀಗ ಚುನಾವಣೆಯ ಪೂರ್ವ ತಯಾರಿಯ ಸಂಚಲನ ಆರಂಭಗೊAಡಿದ್ದು, ಸದ್ಯದಲ್ಲೇ ಚುನಾವಣೆ ಎದುರಾಗುವ ಸಾಧ್ಯತೆ ಇದೆ.