ಮಡಿಕೇರಿ, ಮಾ. ೨೫: ವೀರಾಜಪೇಟೆಯ ಬಿಳುಗುಂದ, ಹೊಸ್ಕೋಟೆ ಗ್ರಾಮಗಳಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಹಲವು ವರ್ಷಗಳಿಂದ ೨ ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಗಳನ್ನೊಳಗೊಂಡ ಗುಂಪು ಇಲ್ಲಿನ ತೋಟಗಳ ಪಕ್ಕ ಇರುವ ದೇವರಕಾಡಿನಲ್ಲಿ ಮೊಕ್ಕಾಂ ಹೂಡಿವೆ. ಕಾಡಿಗೆ ಅಂಟಿಕೊAಡAತಿರುವ ತೋಟಗಳಿಗೆ ಪ್ರತೀ ದಿನ ಲಗ್ಗೆ ಇಟ್ಟು ಕಾಫಿ, ಅರೆಕಾ, ತಾಳೆ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸುತ್ತಿವೆ. ನೋಟರಿ ಅಬ್ದುಲ್ ಹಫೀಸ್ ಖಾನ್ ಅವರಿಗೆ ಸೇರಿದ ತೋಟದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಭಯದ ವಾತಾವರಣದಲ್ಲೇ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ೪,೫ ಕಿಮೀ ವ್ಯಾಪ್ತಿಯ ತೋಟದಲ್ಲಿ ಪ್ರತೀ ದಿನ ಕಾಫಿ ಇತ್ಯಾದಿ ಬೆಳೆಗಳನ್ನು ನಾಶಪಡಿಸುತ್ತಿವೆ. ಇತ್ತೀಚೆಗಷ್ಟೆ ಬೆಳೆಗಾರ ನಿಸ್ಸಾರ್ ಅಹಮದ್ ಅವರ ತೋಟಕ್ಕೂ ಲಗ್ಗೆ ಇಟ್ಟ ಆನೆಗಳು ತೆಂಗು, ಕಾಫಿ ಗಿಡಗಳನ್ನು ನೆಲಕ್ಕುರುಳಿಸಿವೆ. ವರ್ಷಾನುಗಟ್ಟಲೆ ಗಿಡಗಳನ್ನು ಬೆಳೆಸಲು ಪಡೆದ ಶ್ರಮದ ಪ್ರತಿಫಲ ದೊರೆಯುವ ಮುನ್ನವೇ ಕೇವಲ ನಿಮಿಷಗಳಲ್ಲಿ ಬೆಳೆ ನಾಶವಾಗುತ್ತಿವೆ. ಹಲವು ಬಾರಿ ಅರಣ್ಯ ಇಲಾಖೆಗೆ ಈ ಕುರಿತು ತಿಳಿಸಿದರೂ, ಯಾವುದೇ ಕ್ರಮಕೈಗೊಳ್ಳಲು ಮುಂದಾಗದೆ ಇರುವುದು ವಿಷಾಧನೀಯ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಕ್ರಮಕೈಗೊಳ್ಳದಿದ್ದಲ್ಲಿ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದೊಂದೇ ದಾರಿ ಎಂದು ಗ್ರಾಮಸ್ಥರು ಪತ್ರಿಕೆಯ ಮೂಲಕ ತಿಳಿಸಿದ್ದಾರೆ.