ಮುಳ್ಳೂರು, ಮಾ.೨೫: ಕೊಡ್ಲಿಪೇಟೆ ರೋಟರಿ ಹೇಮಾವತಿ ಮೈಸೂರಿನ ಸುಯೋಗ್ ಆಸ್ಪತ್ರೆ, ಕೊಡ್ಲಿಪೇಟೆ ವಿದ್ಯಾಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ತಾ.೨೭ ರಂದು ಕೊಡ್ಲಿಪೇಟೆ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕೊಡ್ಲಿಪೇಟೆ ರೋಟರಿ ಹೇಮಾವತಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಡಾ.ಸಿ.ಆರ್. ಉದಯ್‌ಕುಮಾರ್ ಹೇಳಿದರು. ಶನಿವಾರಸಂತೆ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು-ತಾ. ೨೭ ರಂದು ಕೊಡ್ಲಿಪೇಟೆ ಗೌರಮ್ಮ ಶಾತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ ೯ ರಿಂದ ಸಂಜೆ ೪ ಗಂಟೆ ವರೆಗೆ ಉಚಿತ ಆರೋಗ್ಯ ಶಿಬಿರನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಿಬಿರದಲ್ಲಿ ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತ ಒತ್ತಡ ಪರೀಕ್ಷೆ, ಕಿವಿ, ಮೂಗು ಮತ್ತು ಗಂಟಲು ಪರೀಕ್ಷೆ, ಹೃದಯ ಸಂಬAದಿ ಕಾಯಿಲೆ ಪರೀಕ್ಷೆ, ಸ್ತಿçà ರೋಗ ಪರೀಕ್ಷೆ ಮುಂತಾದ ಖಾಯಿಲೆಗಳ ಪರೀಕ್ಷೆ ನಡೆಸಲಾಗುತ್ತದೆ ಎಂದರು. ಶಿಬಿರದಲ್ಲಿ ಹೃದಯ ರೋಗ ತಜ್ಞರು, ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರು, ನವಜಾತ ಶಿಶು ಹಾಗೂ ಮಕ್ಕಳ ತಜ್ಞರು, ಉದರ ರೋಗಗಳ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು ತಪಾಸಣೆ ಮಾಡಲಿದ್ದಾರೆ ಎಂದರು.

ಕೊಡ್ಲಿಪೇಟೆ ರೋಟರಿ ಹೇಮಾವತಿ ಅಧ್ಯಕ್ಷ ಎಚ್.ಎಂ, ದಿವಾಕರ್ ಮಾತನಾಡಿ ಉಚಿತ ಆರೋಗ್ಯ ಶಿಬಿರದಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ನುರಿತ ವೈದ್ಯರು ಶಿಬಿರದಲ್ಲಿ ಆರೋಗ್ಯ ಪರೀಕ್ಷೆ ನಡೆಸುತ್ತಾರೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಗೋಷ್ಠಿಯಲ್ಲಿ ರೋಟರಿ ಹೇಮಾವತಿ ಸಂಸ್ಥೆ ಮುಂದಿನ ಅಧ್ಯಕ್ಷ ಡಿ.ವಿ.ದಿನೇಶ್ ಹಾಜರಿದ್ದರು.