ಮಡಿಕೇರಿ, ಮಾ. ೨೫: ರಾಜ್ಯದ ಪ್ರವಾಸೋದ್ಯಮ; ಪರಿಸರ ಮತ್ತು ಜೀವಿಶಾಸ್ತç ಇಲಾಖಾ ಸಚಿವರಾಗಿರುವ ‘ಸೈನಿಕ’ ಚಿತ್ರದ ಹೀರೋ ಆಗಿದ್ದ ಸಿ.ಪಿ. ಯೋಗೇಶ್ವರ್ ಅವರು ತಾ. ೨೭ ಹಾಗೂ ೨೮ ರಂದು ಅಧಿಕೃತ ಪ್ರವಾಸ ಕಾರ್ಯಕ್ರಮವೊಂದನ್ನು ಹಾಕಿಕೊಂಡಿದ್ದಾರೆ. ಈ ಪಟ್ಟಿಯ ವಿವರ ನೋಡಿದರೆ ಜನರು ಸಹಜವಾಗಿಯೇ ಹುಬ್ಬೇರಿಸಬೇಕು ಎಂಬAತಿದೆ.
ತಾ. ೨೭ರ ಬೆಳಿಗ್ಗೆ ೭ಕ್ಕೆ ಬೆಂಗಳೂರಿನಿAದ ರಸ್ತೆ ಮೂಲಕ ಕೊಡಗು ಜಿಲ್ಲೆಗೆ ಪ್ರಯಾಣ. ಬೆಳಿಗ್ಗೆ ೧೧.೩೦ಕ್ಕೆ ಚನ್ನಪಟ್ಟಣದ ಕಾರ್ಯಕರ್ತರೊಂದಿಗೆ ಕೊಡಗಿನ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಹಾಗೂ ಇದೇ ಕಾರ್ಯಕರ್ತರೊಂದಿಗೆ ಅಪರಾಹ್ನ ೧.೩೦ ಹಾಗೂ ೩ ಗಂಟೆಗೆ ಹಾರಂಗಿ ಜಲಾಶಯ ಅತಿಥಿ ಗೃಹದಲ್ಲಿ ಮತ್ತೊಂದು ಸಭೆ ಹಾಗೂ ರಾತ್ರಿ ಮಡಿಕೇರಿಯ ಕ್ಲಬ್ ಮಹೀಂದ್ರಾದಲ್ಲಿ ವಾಸ್ತವ್ಯವಂತೆ...! ಮರುದಿನ ತಾ. ೨೮ ರಂದು ಬೆಳಿಗ್ಗೆ ೧೧.೩೦ಕ್ಕೆ ಕ್ಲಬ್ ಮಹೀಂದ್ರಾದಿAದ ರಸ್ತೆ ಮೂಲಕ ಮೈಸೂರಿಗೆ ಪ್ರಯಾಣ, ಅಪರಾಹ್ನ ೨ ರಿಂದ ೩ರವರೆಗೆ ಮೈಸೂರು ಲಲಿತ ಮಹಲ್ ಪ್ಯಾಲೇಸ್ ಕಾಯ್ದಿರಿಸಿದೆ.
೩ ಗಂಟೆಗೆ ಅಲ್ಲಿ ಪ್ರವಾಸೋದ್ಯಮ ಕುರಿತು ತಜ್ಞರೊಂದಿಗೆ ಸಭೆ ಸೇರಿದಂತೆ ಮೈಸೂರಿನಲ್ಲಿ ಬೇರೆ ಹಲವು ಕಾರ್ಯಕ್ರಮಗಳಿವೆ. ಆದರೆ ಇಲ್ಲಿ ಕಾಡುತ್ತಿರುವ ಪ್ರಶ್ನೆ ಎಂದರೆ ಚನ್ನಪಟ್ಟಣದ ಮೂಲಕವೇ ಬರುವ ಸಚಿವರು ಅಲ್ಲಿನ ಕಾರ್ಯಕರ್ತರೊಂದಿಗೆ ಕುಶಾಲನಗರದ ಕಾವೇರಿ ನಿಸರ್ಗಧಾಮ ಹಾಗೂ ಹಾರಂಗಿ ಅತಿಥಿ ಗೃಹದಲ್ಲಿ ಏರ್ಪಡಿಸಿರುವ ಸಭೆ ಹಾಗೂ ಕ್ಲಬ್ ಮಹೀಂದ್ರಾ ಮಡಿಕೇರಿಯಲ್ಲಿ ವಾಸ್ತವ್ಯವೇಕೆ...? ಸಚಿವರ ಇಲಾಖೆಗೆ ಸಂಬAಧಿಸಿದAತೆ ಪ್ರವಾಸೀ ಜಿಲ್ಲೆಯಾಗಿರುವ ಕೊಡಗಿನಲ್ಲಿ ಯಾವುದೇ ಸಭೆ ಕರೆದಿಲ್ಲ ಎಂಬದಾಗಿದೆ.