ಮಡಿಕೇರಿ, ಮಾ. ೨೫: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿನ ಒಟ್ಟು ಕ್ಷೇತ್ರಗಳ ಪಟ್ಟಿ ಇದೀಗ ಅಂತಿಮಗೊAಡಿದೆ. ಜಿಲ್ಲೆಯಲ್ಲಿ ಹೊಸದಾಗಿ ಎರಡು ತಾಲೂಕುಗಳನ್ನು ರಚಿಸಲಾಗಿರುವ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳಾಗಲಿವೆ. ಈ ಕುರಿತಾಗಿ ಚುನಾವಣಾ ಆಯೋಗ ಇತ್ತೀಚೆಗೆ ಕ್ಷೇತ್ರಗಳ ನಿಗದಿಗೆ ಪ್ರಕಟಣೆ ನೀಡಿದ್ದು ಇದೀಗ ಇದನ್ನು ಅಂತಿಮಗೊಳಿಸಲಾಗಿದ್ದು, ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಒಟ್ಟು ೨೯ ಸ್ಥಾನಗಳು ಹಿಂದಿನAತೆ ಇರಲಿದ್ದು, ತಾ.ಪಂ. ಗೆ ಸಂಬAಧಿಸಿದAತೆ ಒಂದೆರೆಡು ಕ್ಷೇತ್ರ ಹೆಚ್ಚಾಗಿವೆ. ಮಡಿಕೇರಿ ತಾಲೂಕಿಗೆ ೭ ಜಿ.ಪಂ. ಕ್ಷೇತ್ರ ಹಾಗೂ ೧೦ ತಾ.ಪಂ. ಕ್ಷೇತ್ರ, ಸೋಮವಾರಪೇಟೆ ೬ ಜಿ.ಪಂ. ಹಾಗೂ ೧೧ ತಾ.ಪಂ., ವೀರಾಜಪೇಟೆ ೫ ಜಿ.ಪಂ. ಹಾಗೂ ೧೧ ತಾ.ಪಂ. ಸ್ಥಾನ ಬರಲಿವೆ.

ನೂತನ ತಾಲೂಕಾದ ಕುಶಾಲನಗರಕ್ಕೆ ೫ ಜಿ.ಪಂ. ಹಾಗೂ ೧೧ ತಾ.ಪಂ. ಸ್ಥಾನ ಸಿಗುತ್ತಿದ್ದು, ಪೊನ್ನಂಪೇಟೆ ತಾಲೂಕಿಗೆ ೬ ಜಿ.ಪಂ. ಹಾಗೂ ೯ ತಾ.ಪಂ. ಕ್ಷೇತ್ರಗಳು ನಿಗದಿಯಾಗಿವೆ. ಈ ಕುರಿತಾಗಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾ ಪ್ರಕಟಣೆ ಹೊರಡಿಸಿದ್ದಾರೆ.