ಚೆಟ್ಟಳ್ಳಿ, ಮಾ. ೨೫: ಚೆಟ್ಟಳ್ಳಿಯ ಈರಳೆ ಗ್ರಾಮದ ಪೊವ್ವೊದಿ (ಭಗವತಿ) ಉತ್ಸವವು ತಾ. ೨೭ ಹಾಗೂ ೨೮ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪೊರಿಮಂಡ ದಿನಮಣಿ ಪೂವಯ್ಯ ತಿಳಿಸಿದ್ದಾರೆ.
೩೦೦ ವರ್ಷದ ಇತಿಹಾಸ ಹೊಂದಿರುವ ಈರಳೆ ಪೊವ್ವೊದಿ ಭಗವತಿ ದೇವಾಲಯದ ಉತ್ಸವಕ್ಕೆ ಸಂಪ್ರದಾಯದAತೆ ಈ ವರ್ಷವು ತಾ. ೨೩ ರಂದು ಊರಿನ ದೇವತಕ್ಕ, ಊರುತಕ್ಕ ಹಾಗೂ ಊರಿನವರೆಲ್ಲ ಸೇರಿ ದುಡಿಕೊಟ್ ಹಾಡಿನೊಂದಿಗೆ ದೇವರ ಜ್ಯೋತಿ ಬೆಳಗಿಸಿ ಹಬ್ಬದ ಕಟ್ಟು ನಿಗಧಿಪಡಿಸಲಾಯಿತು.
ತಾ. ೨೭ ರಂದು ಮಧ್ಯಾಹ್ನ ೩ ಗಂಟೆಗೆ ದೇವರ ಭಂಡಾರ ತರವುದು, ಪೊವ್ವೊದಿ ಎತ್ತು ಪೋರಾಟ ನಂತರ ಪೊವ್ವೊದಿಯ ವಿಶೇಷ ಉತ್ಸವ ಕೈಂಕರ್ಯಗಳು ನಡೆಯಲಿವೆೆ. ತಾ. ೨೮ ರಂದು ಪೂರ್ವಾಹ್ನ ೧೦ ಗಂಟೆಗೆ ಪರದೇವರ ದೇವಕೋಲವಿದ್ದು, ದೇವನೆಲೆಗೆ ಬಂದು ಊರಿನವರಿಗೆ ಹಾಗೂ ಭಕ್ತಾದಿಗಳಿಗೆ ಆಶೀರ್ವದಿಸಿ ಪ್ರಸಾದ ವಿನಿಯೋಗವಿರುವುದು ಎಂದು ತಿಳಿಸಿದ್ದಾರೆ.