ಚೆಟ್ಟಳ್ಳಿ, ಮಾ. ೨೫: ವಿಶೇಷ ಸ್ಥಾನಮಾನ ಹೊಂದಿರುವ ಕೊಡವ ಜನಾಂಗಕ್ಕೆ ಕೊಡವ ಬುಡಕಟ್ಟು ಸ್ಥಾನಮಾನ ಹೊಂದಬೇಕೆAದು ಹಲವು ವರ್ಷಗಳ ಸತತ ಹೋರಾಟ ನಡೆಯುತ್ತಾ ಬರುತ್ತಿದೆ. ಹಲವರು ಸಹಕಾರ ನೀಡುತಿದ್ದರೆ, ಕೆಲವು ವಿರೋಧಿಗಳು ಇಲ್ಲಸಲ್ಲದ ವಿಚಾರವನ್ನು ಜನಾಂಗದವರ ಮಧ್ಯೆ ಮೂಡಿಸುವ ಮೂಲಕ ಒಡೆಯುವ ಕೆಲಸವನ್ನು ಮಾಡುತ್ತಿರುವುದು ವಿಷಾದÀ ನೀಯವೆಂದು ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ನಂದಿನೆರವAಡ ನಾಚಪ್ಪ ಹೇಳಿದರು. ಅವರು ಈರಳೆ ಗ್ರಾಮದಲ್ಲಿ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು. ಕೊಡವರಿಗೆ ಎಸ್ಟಿ ಟ್ಯಾಗ್ ದೊರೆತರೆ ಇತರೆ ಜನಾಂಗದವರಿಗೆ ತೊಂದರೆಯಾಗು ತ್ತದೆಂಬುದನ್ನು ಕೆಲವು ಕೊಡವ ವಿರೋಧಿಗಳು ವದಂತಿ ಹಬ್ಬಿಸಿ ಇತರೆ ಜನಾಂಗವನ್ನು ಎತ್ತಿಕಟ್ಟುತ್ತಿದ್ದಾರೆ. ಸಂವಿದಾನದಲ್ಲಿ ಕೊಡವರ ಹಕ್ಕನ್ನು ಪಡೆಯಲು ಹೋರಾಟ ನಡೆಯು ತ್ತದೆಯೇ ವಿನಃ ಯಾರ ಹಕ್ಕಿಗೆ ತೊಂದರೆ ನೀಡುವುದು ಕೊಡವ ನ್ಯಾಷನಲ್ ಕೌನ್ಸಿಲ್ನ ಉದೇಶವಲ್ಲ. ಅಳಿವಿನಂಚಿ ನಲ್ಲಿರುವ ಕೊಡವ ಜನಾಂಗದ ಹಕ್ಕು ಪಡೆಯಲು ಎಲ್ಲ ಜನಾಂಗದ ಸಹಕಾರ ಬೇಕೆಂದರು. ಈರಳೆ ಶ್ರೀ ಪೊವ್ವೊದಿ (ಭಗವತಿ) ದೇವಾಲಯ ಸಮಿತಿಯ ಅಧ್ಯಕ್ಷ ದಿನಮಣಿ ಪೂವಯ್ಯ ಕೊಡವ ಜನಾಂಗದ ಹಕ್ಕಿಗಾಗಿ ಹಲವು ವರ್ಷ ಗಳಿಂದ ಹೋರಾಟ ಮಾಡುತ್ತಿರುವ ನಂದಿನೆರವAಡ ನಾಚಪ್ಪ ಅವರಿಗೆ ಸಹಕರಿಸಬೇಕೆಂದರು.
ಕೊಡವ ಜನಾಂಗದ ಹಕ್ಕೊತ್ತಾಯ ವನ್ನು ಕೊಡಗಿನಿಂದ ದೆಹಲಿಯವರೆಗೆ ತಲುಪಿಸಿರುವುದು ಕೊಡವ ನ್ಯಾಷನಲ್ ತ್ತದೆಯೇ ವಿನಃ ಯಾರ ಹಕ್ಕಿಗೆ ತೊಂದರೆ ನೀಡುವುದು ಕೊಡವ ನ್ಯಾಷನಲ್ ಕೌನ್ಸಿಲ್ನ ಉದೇಶವಲ್ಲ. ಅಳಿವಿನಂಚಿ ನಲ್ಲಿರುವ ಕೊಡವ ಜನಾಂಗದ ಹಕ್ಕು ಪಡೆಯಲು ಎಲ್ಲ ಜನಾಂಗದ ಸಹಕಾರ ಬೇಕೆಂದರು. ಈರಳೆ ಶ್ರೀ ಪೊವ್ವೊದಿ (ಭಗವತಿ) ದೇವಾಲಯ ಸಮಿತಿಯ ಅಧ್ಯಕ್ಷ ದಿನಮಣಿ ಪೂವಯ್ಯ ಕೊಡವ ಜನಾಂಗದ ಹಕ್ಕಿಗಾಗಿ ಹಲವು ವರ್ಷ ಗಳಿಂದ ಹೋರಾಟ ಮಾಡುತ್ತಿರುವ ನಂದಿನೆರವAಡ ನಾಚಪ್ಪ ಅವರಿಗೆ ಸಹಕರಿಸಬೇಕೆಂದರು.
ಕೊಡವ ಜನಾಂಗದ ಹಕ್ಕೊತ್ತಾಯ ವನ್ನು ಕೊಡಗಿನಿಂದ ದೆಹಲಿಯವರೆಗೆ ತಲುಪಿಸಿರುವುದು ಕೊಡವ ನ್ಯಾಷನಲ್ ಮಾಜಿ ಪಂಚಾಯಿತಿ ಸದಸ್ಯ ತೀರ್ಥಕುಮಾರ್ ಮಾತನಾಡಿ, ನಾಚಪ್ಪ ಅವರ ಹೋರಾಟ ಸಂವಿಧಾನದ ಹಕ್ಕಿಗಾಗಿ ಯಾವುದೇ ಜನಾಂಗದ ವಿರುದ್ಧ ಅಲ್ಲ. ಅದಕ್ಕೆ ನಮ್ಮ ಬೆಂಬಲವಿದೆ ಎಂದರು.
ವೇದಿಕೆಯಲ್ಲಿ ಊರುತಕ್ಕರಾದ ಪೊರಿಮಂಡ ನಾಣಯ್ಯ, ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಶ್ರೀಮಂಗಲ ಭಗವತಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ, ಪಂಚಾಯಿತಿ ಉಪಾಧ್ಯಕ್ಷೆ ವಿಮಲಾಕ್ಷಿ ಬಿ.ಆರ್., ಪತ್ರಕರ್ತ ಪುತ್ತರಿರ ಪಪ್ಪು ತಿಮ್ಮಯ್ಯ ಭಾಗವಹಿಸಿದ್ದರು.
ಪಂಚಾಯಿತಿ ಸದಸ್ಯರಾದ ಮುಳ್ಳಂಡ ಅಂಜನ್ ಮುತ್ತಪ್ಪ, ಮಾಜಿ ಸದಸ್ಯ ತೀರ್ಥಕುಮಾರ್, ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಲ್ಲಾರಂಡ ಪ್ರಭು ಚಿಣ್ಣಪ್ಪ, ದೇವಾಲಯ ಸಮಿತಿ ಸದಸ್ಯರು ಹಾಗೂ ಊರಿನವರು ಭಾಗವಹಿಸಿದ್ದರು.
- ಕರುಣ್ ಕಾಳಯ್ಯ