ಮಡಿಕೇರಿ, ಮಾ. ೨೩: ಭಾರತದ ‘ಐ ಕ್ಯಾನ್ ಫೌಂಡೇಶನ್’ ಆಯೋ ಜಿಸಿದ್ದ ರಾಷ್ಟಿçÃಯ ಮಟ್ಟದ ಸಮ್ಮೇಳನದಲ್ಲಿ ಪ್ರಖ್ಯಾತ ಶಿಕ್ಷಣ ತಜ್ಞೆ ಅಪ್ಪಾರಂಡ ಸೀತಾ ಪೂವಯ್ಯ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಜೈಪುರದಲ್ಲಿ ಪ್ರದಾನ ಮಾಡಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸೇವೆ ಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಪ್ಪಾರಂಡ ಸಿ. ಪೂವಯ್ಯ ಪತ್ನಿಯಾಗಿರುವ ಸೀತಾ ಪೂವಯ್ಯ ಅವರು ಸ್ವಾತಂತ್ರö್ಯ ಹೋರಾಟ ಗಾರರಾಗಿದ್ದ ಸಣ್ಣುವಂಡÀ ಪಿ.ನಂಜಪ್ಪ ಅವರ ಪುತ್ರಿಯಾಗಿದ್ದಾರೆ. ಮಾಯಮುಡಿಯಲ್ಲಿ ಜನಿಸಿದ ಇವರು ಶಿಕ್ಷಕಿ ಮತ್ತು ಉಪ ಪ್ರಾಂಶುಪಾಲರಾಗಿ ಒಟ್ಟು ೩೨ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.