ಚೆಟ್ಟಳ್ಳಿ, ಮಾ. ೨೩: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು-ಚೆಟ್ಟಳ್ಳಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಕಿದ್ದ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ ಪ್ರಕರಣ ಚೆಟ್ಟಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಕೂಡ್ಲೂರು-ಚೆಟ್ಟಳ್ಳಿ ಕಡೆಯಿಂದ ವಾಲ್ನೂರು ಲಿಂಕ್ ರಸ್ತೆಯ ಕಾಂಕ್ರಿಟೀಕರಣಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ಹಣ ಬಿಡುಗಡೆಗೊಂಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದÀನಾಪೂರ್ವಕವಾಗಿ ಪಂಚಾಯಿತಿ ಅನುಮತಿಯೊಂದಿಗೆ ಬ್ಯಾನರನ್ನು ಹಾಕಿದ್ದರು. ತಾ. ೨೨ರ ಬೆಳಿಗ್ಗೆ ಬ್ಯಾನರನ್ನು ಹರಿದು ಬಿಸಾಡಲಾಗಿತ್ತು. ತಾ. ೨೩ ರಂದು ಬಿಜೆಪಿಯ ಶಕ್ತಿ ಕೇಂದ್ರದ ಸಹಪ್ರಮುಖ್ ರವಿ ಎನ್.ಎಸ್. ಚೆಟ್ಟಳ್ಳಿ ಠಾಣೆಯ ಮೇಲಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ಬ್ಯಾನರನ್ನು ಹರಿದು ಅಶಾಂತಿಯನ್ನು ಮೂಡಿಸಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.
-ಕರುಣ್ ಕಾಳಯ್ಯ