ಗೋಣಿಕೊಪ್ಪಲು, ಮಾ. ೨೩: ಕಳೆದ ೫ ತಿಂಗಳಿAದ ನಡೆಯುತ್ತಿರುವ ತಿಂಗಕೋರ್ ಮೊಟ್ಟ್ ತಲಕಾವೇರಿ ಕಾರ್ಯಕ್ರಮದ ಐದನೇ ತಿಂಗಳ ಕಾರ್ಯಕ್ರಮ ಭಾನುವಾರ ನಡೆಯಿತು. ತಿಂಗಳಿಗೊಮ್ಮೆ ನಡೆ ತಲಕಾವೇರಿಗೆ ಎಂಬ ಘೋಷ ವಾಕ್ಯದೊಂದಿಗೆ ಕೊಡಗಿನ ನಾನಾ ಕಡೆಯಿಂದ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪಿನೊಂದಿಗೆ ಸಾಮೂಹಿಕವಾಗಿ ಬಾಗಮಂಡಲ ಮತ್ತು ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ,ಕ್ಷೇತ್ರದಲ್ಲಿ ಧಾರ್ಮಿಕ ಮೌಲ್ಯ ಎತ್ತಿ ಹಿಡಿಯಲು ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಪ್ರವಾಸಿ ಕ್ಷೇತ್ರ ಎಂಬ ಭಾವನೆ ಹೋಗಲಾಡಿಸಿ ಭಕ್ತಿ ಭಾವ ಮೂಡಿಸಿ ಕ್ಷೇತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೊದಲಿಗೆ ಬಾಗಮಂಡಲ ಕ್ಷೇತ್ರದಲ್ಲಿ ಭಗಂಡೇಶ್ವರ, ಮಹಾವಿಷ್ಣು, ಸುಬ್ರಮಣ್ಯ, ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಲಾಯಿತು. ನಂತರ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ಮಾತೆ, ಅಗಸ್ತ್ಯೇಶ್ವರ ದೇವರಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಕ್ಷೇತ್ರಕ್ಕೆ ತುಂಡುಡಿಗೆಯೊAದಿಗೆ ಆಗಮಿಸಿದ ಪ್ರವಾಸಿಗರಿಗೆ ಕ್ಷೇತ್ರದ ಮಹತ್ವ ಅರಿವಿಕೆ ನೀಡಿ, ಒಳಗೆ ತೆರಳದಂತೆ ಮನವರಿಕೆ ಮಾಡಲಾಯಿತು. ನಂತರ ಇದರೊಂದಿಗೆ ಇತಿಹಾಸದಲ್ಲಿ ಸಹಸ್ರಾರು ಕೊಡವ ಪೂರ್ವಿಕರ ಹತ್ಯಾಕಾಂಡ ನಡೆದ ಸ್ಥಳ ದೇವಾಟ್ ಪರಂಬುವಿಗೆ ಸಾಮೂಹಿಕವಾಗಿ ಭೇಟಿ ನೀಡಿ ಜನಾಂಗದ ಯುವಕ-ಯುವತಿಯರು ಇತಿಹಾಸದ ಕರಾಳತೆ ಬಗ್ಗೆ ಮರುಗಿದರು.

ಈ ಸಂದರ್ಭ ಮಲ್ಲಪನೆರ ವಿನು ಚಿಣ್ಣಪ್ಪ, ಅಪ್ಪಚ್ಚಿರ ಕಮಲ ನೀಲಮ್ಮ, ಕ್ಷೇತ್ರದ ಮೂಲ ತಕ್ಕ ಕುಟುಂಬ ಪ್ರಾರ್ಥಿಸಿ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಕ್ಷೇತ್ರಕ್ಕೆ ತುಂಡುಡಿಗೆಯೊAದಿಗೆ ಆಗಮಿಸಿದ ಪ್ರವಾಸಿಗರಿಗೆ ಕ್ಷೇತ್ರದ ಮಹತ್ವ ಅರಿವಿಕೆ ನೀಡಿ, ಒಳಗೆ ತೆರಳದಂತೆ ಮನವರಿಕೆ ಮಾಡಲಾಯಿತು. ನಂತರ ಇದರೊಂದಿಗೆ ಇತಿಹಾಸದಲ್ಲಿ ಸಹಸ್ರಾರು ಕೊಡವ ಪೂರ್ವಿಕರ ಹತ್ಯಾಕಾಂಡ ನಡೆದ ಸ್ಥಳ ದೇವಾಟ್ ಪರಂಬುವಿಗೆ ಸಾಮೂಹಿಕವಾಗಿ ಭೇಟಿ ನೀಡಿ ಜನಾಂಗದ ಯುವಕ-ಯುವತಿಯರು ಇತಿಹಾಸದ ಕರಾಳತೆ ಬಗ್ಗೆ ಮರುಗಿದರು.

ಈ ಸಂದರ್ಭ ಮಲ್ಲಪನೆರ ವಿನು ಚಿಣ್ಣಪ್ಪ, ಅಪ್ಪಚ್ಚಿರ ಕಮಲ ನೀಲಮ್ಮ, ಕ್ಷೇತ್ರದ ಮೂಲ ತಕ್ಕ ಕುಟುಂಬ ಪಟ್ಟಚೆರುವಂಡ ಸಂತೋಷ್, ಮುಕ್ಕಾಟೀರ ಪ್ರಮೋದ್, ಮಲ್ಲಪನೆರ ರಾಕಿ ಸೇರಿದಂತೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ -ಚಮ್ಮಟೀರ ಪ್ರವೀಣ್ ಉತ್ತಪ್ಪ. ಉಪಾಧ್ಯಕ್ಷ-ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ-ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ-ಸಣ್ಣುವಂಡ ದರ್ಶನ್ ಕಾವೇರಪ್ಪ,

ಆಡಳಿತ ಮಂಡಳಿ ಸಮಿತಿ ಸದಸ್ಯರಾದ ಮುರುವಂಡ ಸುಮ ಕುಟ್ಟಪ್ಪ ಮತ್ತು ಕೊಂಡೀರ ದೇಶಿಕ ದೇಚಮ್ಮ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸದಸ್ಯರುಗಳು ಪಾಲ್ಗೊಂಡಿದ್ದರು.