ನಾಪೋಕ್ಲು, ಮಾ. ೨೩: ನಾಪೋಕ್ಲು ಶ್ರೀ ಭಗವತಿ ದೇವರ ವಾರ್ಷಿಕ ಹಬ್ಬವು ತಾ. ೧೭ ರಿಂದ ಪ್ರಾರಂಭವಾಗಿ ೨೧ ರಂದು ಮುಕ್ತಾಯವಾಯಿತು. ೧೭ ರಂದು ರಾತ್ರಿ ಅಂದಿ ಬೊಳಕ್ ಮತ್ತು ಶ್ರೀ ಭದ್ರಕಾಳಿ ದೇವರ ಕೋಲದೊಂದಿಗೆ ಹಬ್ಬವು ಪ್ರಾರಂಭವಾಯಿತು, ತಾ, ೧೮ ರಂದು ದೇವರ ಮೂರ್ತಿಯನ್ನು ಹೊತ್ತು ಊರ ಪ್ರದಕ್ಷಿಣೆ ಬರಲಾಯಿತು. ತಾ, ೧೯ ರಂದು ಪವಿತ್ರ ಪಟ್ಟಣಿ ಹಬ್ಬ ಎತ್ತುಪೋರಾಟ, ಬೊಳ್ಕಾಟ್, ಮತ್ತು ಅನ್ನದಾನ ನಡೆಯಿತು. ತಾ. ೨೦ ರಂದು ದೇವರ ಪವಿತ್ರ ಜಳಕ ಕಾರ್ಯವು ಕಾವೇರಿ ನದಿಯಲ್ಲಿ ನಡೆದು ನಗರದಲ್ಲಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಬಂದು ದೇವರ ಮೂರ್ತಿ ಹೊತ್ತು ನÊತ್ಯ ಬಲಿ ನಡೆಯಿತು. ರಾತ್ರಿ ವಿವಿಧ ದೇವರ ಕೋಲ ನುಚ್ಚುಟೆ, ನರಿಪೂದÀ, ಅಂಜಿ ಕೂಟ್ ಮೂರ್ತಿ ದೇವರ ಕೋಲ ನಡೆದು ತಾ, ೨೧ ರಂದು ಕಲಿಯಾಟ ಅಜ್ಜಪ್ಪ ದೇವರ ಕೋಲ ಮತ್ತು ವಿಷ್ಣುಮೂರ್ತಿ ದೇವರ ಕೋಲ ನಡೆದು ಹಬ್ಬವು ಸಂಪನ್ನ ಗೊಂಡಿತು.