ಹೆಬ್ಬಾಲೆ, ಮಾ. ೨೨: ಚೈಲ್ಡ್ ಲೈನ್ ಸಂಸ್ಥೆ ವತಿಯಿಂದ ತೊರೆನೂರು ಸರ್ಕಾರಿ ಪ್ರೌಢಶಾಲೆ ಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಪೋಷಣೆ ಮತ್ತು ರಕ್ಷಣೆ ಅಗತ್ಯತೆ ಕುರಿತ ವಿಶೇಷ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ಎಚ್.ಟಿ. ಗೀತಾ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ ಕುರಿತು ಮಾಹಿತಿ ನೀಡಿದ ಗೀತಾ ಅವರು ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ವಿಶೇಷ ಗಮನ ಹರಿಸಬೇಕಾಗಿದೆ.

ಮಕ್ಕಳ ಸಹಾಯವಾಣಿ ಕಾರ್ಯಕರ್ತೆ ಬಿ. ಕೆ. ಕುಮಾರಿ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಪೋಷಣೆ ಉದ್ದೇಶದಿಂದ ೧೯೯೬ರಲ್ಲಿ ಚೈಲ್ಡ್ ಲೈನ್ ಫೌಂಡೇಶನ್ ಸ್ಥಾಪಿಸ ಲಾಗಿದೆ. ಚೈಲ್ಡ್ಲೈನ್ ಫೌಂಡೇಷನ್ ನಿಂದ ಪ್ರತಿ ವರ್ಷ ಮಕ್ಕಳ ಮೈತ್ರಿ ಸಪ್ತಾಹ ನಡೆಸುವ ಮೂಲಕ ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ತೊರೆನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೀಣಾ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ್ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕುರಿತು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ವಿ. ವಿಶ್ವನಾಥ್, ಸದಸ್ಯರಾದ ತಿಮ್ಮಪ್ಪ, ಜಗದೀಶ್, ಮಕ್ಕಳ ಸಹಾಯವಾಣಿ ಕಾರ್ಯಕರ್ತ ಯೋಗೇಶ್, ಶಿಕ್ಷಕರಾದ ಬಿ.ಪಿ. ಸವಿತಾ, ಟಿ.ವಿ. ಮಂಜುನಾಥ್, ಎಸ್. ಕೆ. ಪ್ರಸನ್ನ, ಎಂ.ಎಸ್. ಜಯಲಕ್ಷಿö್ಮ, ಹರ್ಷ, ರಾಜೇಶ್ವರಿ, ಪ್ರೇರಣಾ ಸಂಸ್ಥೆಯ ಶಿವರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.