ಶನಿವಾರಸಂತೆ, ಮಾ. ೨೨: ಶನಿವಾರಸಂತೆ ಪೊಲೀಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಬೀಟ್ ಸಭೆ ಶನಿವಾರಸಂತೆ ಪಟ್ಟಣದಲ್ಲಿ ನಡೆಸಲಾಯಿತು. ಶನಿವಾರಸಂತೆ ಬೀಟ್ ಪೊಲೀಸ್ ಸಿಬ್ಬಂದಿ ಎಂ.ಎA. ಶೋನಿ ಪಟ್ಟಣ ವಾಸಿ ಗಳನ್ನು ಉದ್ದೇಶಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ತೆರಳುವಾಗ ಪೊಲೀಸ್ ಠಾಣೆಗೆ ತಿಳಿಸುವಂತೆ ಹಾಗೂ ಅಪರಿಚಿತರ ಬಗ್ಗೆ ಜಾಗ್ರತೆ ವಹಿಸುವಂತೆ ತಿಳಿಸಿ ಟ್ರಾಫಿಕ್ ರೂಲ್ಸ್ ಹಾಗೂ ಆರ್.ಎಸ್. ಎಸ್.-೧೧೨ರ ಬಗ್ಗೆ ಮಾಹಿತಿ ನೀಡಿ ದರು. ಪೊಲೀಸರೊಂದಿಗೆ ಸಹಕರಿ ಸಲು ಕೋರಿದರು. ಸಭೆಯಲ್ಲಿ ಬೀಟ್ ಸದಸ್ಯರು ಹಾಗೂ ಇತರರು ಇದ್ದರು.