ಸುಂಟಿಕೊಪ್ಪ, ಮಾ. ೨೨: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಬೇಟ್ಟಗೇರಿ ರಿವರ್‌ಸೈಡ್‌ಗೆ ತೆರಳುವ ರಸ್ತೆ ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯನ್ನು ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಂಟಿಕೊಪ್ಪ ಪಟ್ಟಣದಿಂದ ಮಾದಾಪುರಕ್ಕೆ ತೆರಳುವಾಗ ೧ ಕಿ.ಮಿ. ಕ್ರಮಿಸಿದಾಗ ಬೆಟ್ಟಗೇರಿ, ಬಿಜಿಲಿಮಂಟಿಯಿAದ ರಿವರ್‌ಸೈಡ್‌ಗೆ ತೆರಳುವ ರಸ್ತೆ ತೀರಾ ಹಾಳಾಗಿದೆ. ಆಟೋ ರಿಕ್ಷಾವಾಗಲಿ ಇತರೇ ಬಾಡಿಗೆ ವಾಹನಗಳು ಈ ರಸ್ತೆಗಾಗಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸುಂಟಿಕೊಪ್ಪ ಉಲುಗುಲಿ ವಾರ್ಡ್ ಹಾಗೂ ಹರದೂರು ಪಂಚಾಯಿತಿಗೆ ಬೆಟ್ಟಗೇರಿ ಹಾಗೂ ರಿವರ್‌ಸೈಡ್ ವಿಭಾಗ ಸೇರುತ್ತದೆ. ಇದುವರೆಗೆ ಇಲ್ಲಿಂದ ಚುನಾಯಿv Àರಾದ ಮಂದಿ ಈ ರಸ್ತೆ ಸರಿಪಡಿಸಲು ಮುಂದಾಗಲಿಲ್ಲ ೬.ಕಿ.ಮಿ ದೂರದ ಈ ರಸ್ತೆಯಲ್ಲಿ ಕೆಲವೆಡೆ ೧೦೦ ಮೀಟರ್ ಸಿಮೆಂಟ್ ರಸ್ತೆ ಬಿಟ್ಟರೆ ಮಾದಾಪುರ ರಸ್ತೆಯಿಂದ ಬೆಟ್ಟಗೇರಿ ವರೆಗಿನ ಡಾಂಬರು ರಸ್ಯೆಯೂ ಕಿತ್ತು ಬಾರಿ ಹೊಂಡಗಳಿAದ ಕೂಡಿದೆ. ರಿವರ್ ಸೈಡ್‌ನಿಂದ ಹಟ್ಟಿಹೊಳೆಗೆ ಕೇವಲ ೨ ಕಿ.ಮಿ. ದೂರವಿದ್ದು ಇಲ್ಲಿನ ಹೊಳೆಗೆ ಸೇತುವೆ ನಿರ್ಮಿಸಿ ರಸ್ತೆಯೂ ನಿರ್ಮಿಸಿದರೆ ಹಟ್ಟಿಹೊಳೆಗೆ ತೆರಳಿ ಮಡಿಕೇರಿ ಮಾದಾಪುರಕ್ಕೆ ಕೆಲಸ ಕಾರ್ಯಗಳಿಗೆ ಹೋಗಲು ಇಲ್ಲಿನ ನಿವಾಸಿಗಳಿಗೆ ಅನುಕೂಲಕರ ವಾಗುತ್ತದೆ.

ದುಬಾರಿ ಹಣವನ್ನು ನೀಡಿದರೂ ಈ ಭಾಗಕ್ಕೆ ಆಟೋರಿಕ್ಷಾ ಆಗಮಿಸಲು ನಿರಾಕರಿಸುತ್ತಾರೆ. ಈ ಭಾಗದಲ್ಲಿ ನಿತ್ಯ ಸಂಚರಿಸುತ್ತೇವೆ ಈ ರಸ್ತೆಯಲ್ಲಿ ಸಂಚರಿಸುವುದರಿAದ ವಾಹನಗಳು ಬೇಗನೆ ದುರಸ್ತಿ ಗೀಡಾಗುತ್ತಿದ್ದು ದುಡಿದ ಹಣವೆಲ್ಲಾ ವಾಹನಗಳ ದುರಸ್ತಿಗೆ ಮೀಸಲಿಡಬೇಕಾಗುತ್ತದೆ ಎಂದು ಆಟೋ ಚಾಲಕ ಜನಾರ್ಧನ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಕಾಫಿ ಬೆಳೆಗಾರ ರಾದ ಮಾಳೆಯಂಡ ಪೊನ್ನಮ್ಮ, ಮುತ್ತಪ್ಪ ಅವರು ಮಾತನಾಡಿ ಕೃಷಿಯನ್ನು ಆಧರಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ಈ ಭಾಗದ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರು, ವಾಹನಗಳ ಸಂಚಾರಕ್ಕೆ ಯೋಗ್ಯವಾದ ರಸ್ತೆ ಹಾಗೂ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ತೋಟದ ಲೈನ್‌ಮನೆಗಳಲ್ಲಿ ನೆಲೆಸಲು ಬರುವುದಿಲ್ಲ ಎಂದು ನೋವು ಹಂಚಿಕೊAಡಿದ್ದಾರೆ.

ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪ್ರತಿಕ್ರಿಯಿಸಿ ಮಾತನಾಡಿ ತಾವು ಈ ಗ್ರಾಮದಿಂದ ಪಂಚಾಯಿತಿಗೆ ಆಯ್ಕೆಗೊಂಡಿದ್ದು ನಾನು ನನ್ನ ಅಧಿಕಾರ ಅವಧಿಯಲ್ಲಿ ಸರಕಾರ ಹಾಗೂ ಶಾಸಕರು, ಜಿ.ಪಂ., ತಾ.ಪಂ. ಸಹಕಾರ ಹಾಗೂ ಅನುದಾನ ಪಡೆದು ರಸ್ತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುವ ದಾಗಿ ಆಶಾಭಾವನೆ ವ್ಯಕ್ತಪಡಿಸಿ ದರು.