ಮಡಿಕೇರಿ, ಮಾ.೨೨: ಮಡಿಕೇರಿ ನಗರಸಭೆ ಚುನಾವಣೆಗೆ ಸಂಬAಧಿಸಿದAತೆ ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು, ಸಾಮಾನ್ಯ -೬, ಸಾಮಾನ್ಯ ಮಹಿಳೆ -೬, ಹಿಂದುಳಿದ ವರ್ಗ (ಎ) ಮಹಿಳೆ - ೩, ಹಿಂದುಳಿದ ವರ್ಗ (ಎ) -೩, ಪರಿಶಿಷ್ಟ ಜಾತಿ ಮಹಿಳೆ -೧, ಪರಿಶಿಷ್ಟ ಪಂಗಡ -೧, ಪರಿಶಿಷ್ಟ ಜಾತಿ -೧, ಹಿಂದುಳಿದ ವರ್ಗ (ಬಿ)-೧, ಹಿಂದುಳಿದ ವರ್ಗ (ಬಿ) ಮಹಿಳೆ- ೧ ಸ್ಥಾನಗಳನ್ನು ಮೀಸಲಿಡಲಾಗಿದೆ.ಒಟ್ಟು ೨೩ ವಾರ್ಡ್ಗಳಿಗೆ ೨೦೧೧ರ ಜನಗಣತಿಯಂತೆ ಮೀಸಲಾತಿ ಪ್ರಕಟಿಸಲಾಗಿದ್ದು, ವಾರ್ಡ್ವಾರು ಸಾಕಷ್ಟು ಬದಲಾವಣೆಗಳಾಗಿವೆ. ಒಂದು ವಾರ್ಡ್ನ ಮತದಾರರಲ್ಲಿ ಹಲವು ಮತದಾರರನ್ನು ಮತ್ತೊಂದು ವಾರ್ಡ್ಗೆ ; ಮತ್ತೊಂದು ವಾರ್ಡ್ನಲ್ಲಿನ ಹಲವು ಮತದಾರರನ್ನು ಮಗದೊಂದು ವಾರ್ಡ್ಗೆ ಸೇರಿಸಲಾಗಿದ್ದು, ವಾರ್ಡ್ಗಳ ಚಿತ್ರಣವೇ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಲ್ಲಿ ಒಂದು ರೀತಿಯ ಗೊಂದಲ, ಆತಂಕ ಉಂಟಾಗಿರುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆಗೆ ಹೊಸದಾಗಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಈ ಬದಲಾವಣೆ ಅಷ್ಟೇನೂ ದೊಡ್ಡ ವಿಷಯವಲ್ಲದಿದ್ದರೂ, ಈ ಹಿಂದೆ ೨-೩ ಬಾರಿ ಒಂದೇ ವಾರ್ಡ್ನಿಂದ ಸ್ಪರ್ಧಿಸಿ, ಗೆದ್ದು ಬರುತ್ತಿದ್ದವರಿಗೆ ಈ ಬದಲಾವಣೆ ನುಂಗಲಾರದ ತುತ್ತಾಗಿರುವುದಂತೂ ದಿಟ. ಈ ಬೆಳವಣಿಗೆಗಳ ನಡುವೆಯೂ ರಾಜಕೀಯ ಪಕ್ಷಗಳು ನಗರಸಭೆ ಚುನಾವಣೆ ಸಂಬAಧ ತಯಾರಿಯಲ್ಲಿದ್ದು, ಚುನಾವಣಾ ದಿನಾಂಕವನ್ನು ಎದುರು ನೋಡುತ್ತಿವೆ.

ಚುನಾವಣೆ ಎದುರಿಸಲು ಸಿದ್ಧ- ರಾಬಿನ್

ನಗರಸಭೆ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾದರೂ,

(ಮೊದಲ ಪುಟದಿಂದ) ಚುನಾವಣೆಯನ್ನು ಎದುರಿಸಲು ಪಕ್ಷ ಸಿದ್ಧವಿದೆ. ಅರ್ಹರನ್ನು, ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.

ಸದ್ಯದಲ್ಲೇ ತೀರ್ಮಾನ- ಮಂಜುನಾಥ್ ಕುಮಾರ್

ನಗರಸಭಾ ಚುನಾವಣೆ ಸಂಬAಧ ಪ್ರಕಟಗೊಂಡಿರುವ ಮೀಸಲಾತಿ ಅನ್ವಯ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ಕಾರ್ಯಕರ್ತರ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಹೇಳಿದ್ದಾರೆ.

ದಿನಾಂಕ ಘೋಷಣೆ ಬಳಿಕ ನಿರ್ಧಾರ - ಗಣೇಶ್

ಜೆಡಿಎಸ್‌ನಿಂದ ಎಲ್ಲಾ ವಾರ್ಡ್ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮೀಸಲಾತಿ ಅನ್ವಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆ ಎದುರಿಸಲಾಗುವುದು. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಈ ಸಂಬAಧ ಕಾರ್ಯೋನ್ಮುಖವಾಗುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣ - ಮನ್ಸೂರ್

ನಗರಸಭೆ ಚುನಾವಣೆ ಸಂಬAಧ ಎಸ್‌ಡಿಪಿಐನಿಂದ ಸುಮಾರು ೧೫ ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಬಹುತೇಕ ಪೂರ್ಣಗೊಂಡಿದೆ ಎಂದು ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಮನ್ಸೂರ್ ಮಾಹಿತಿ ನೀಡಿದ್ದಾರೆ.

ಮೀಸಲಾತಿ : ಪರ - ವಿರೋಧ

ಪ್ರಸ್ತುತ ಪ್ರಕಟಗೊಂಡಿರುವ ಮೀಸಲಾತಿಯನ್ನು ಬಿಜೆಪಿ ಸರಕಾರ ತನ್ನ ಪಕ್ಷದ ಅನುಕೂಲಕ್ಕೆ ತಕ್ಕಂತೆ ನಿಗದಿಪಡಿಸಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಅದೇ ವರ್ಗಕ್ಕೆ ಸೀಮಿತವಾದ ಮೀಸಲಾತಿಯನ್ನು ನಿಗದಿಪಡಿಸಬೇಕೆಂಬುದು ನಿಯಮ. ಆದರೆ, ಈ ನಿಯಮ ಪಾಲನೆಯಾಗಿಲ್ಲ. ಆದ್ದರಿಂದ ಈ ರೀತಿ ಮೀಸಲಾತಿ ಪ್ರಕಟಣೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತಾನು ಚುನಾವಣೆ ನಂತರ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ನಂದಕುಮಾರ್ ತಿಳಿಸಿದ್ದಾರೆ.

ನಗರಸಭಾ ಮಾಜಿ ಅಧ್ಯಕ್ಷ ಬಿಜೆಪಿಯ ಪಿ.ಡಿ. ಪೊನ್ನಪ್ಪ ಅವರು ಮೀಸಲಾತಿ ಸಂಬAಧ ಪ್ರತಿಕ್ರಿಯಿಸಿದ್ದು, ಈ ಹಿಂದೆ ಇದ್ದ ಬಿಜೆಪಿಯ ಕೆಲ ಸದಸ್ಯರ ವಾರ್ಡ್ಗಳು ಕೂಡ ಈ ಬಾರಿಯ ಮೀಸಲಾತಿಯಲ್ಲಿ ಬದಲಾವಣೆ ಆಗಿವೆ. ಒಂದು ವೇಳೆ ಮೀಸಲಾತಿಯನ್ನು ಬಿಜೆಪಿ ಪರವಾಗಿ ನಿಗದಿಮಾಡಲಾಗಿದೆ ಎನ್ನುವುದಾದರೆ ನಮ್ಮ ಪಕ್ಷದ ಕೆಲ ಸದಸ್ಯರು ಈ ಬಾರಿ ಅವಕಾಶದಿಂದ ವಂಚಿತರಾಗುತ್ತಿರಲಿಲ್ಲ. ಹೀಗಿದ್ದಾಗ್ಯೂ ಮೀಸಲಾತಿ ಸಂಬAಧ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಪ್ರಕಟಗೊಂಡಿರುವ ಮೀಸಲಾತಿ ಉತ್ತಮವಾಗಿದ್ದು, ಎಲ್ಲಾ ವರ್ಗಕ್ಕೂ ಅವಕಾಶ ನೀಡಲಾಗಿದೆ ಎಂದು ಎಸ್‌ಡಿಪಿಐನ ಮನ್ಸೂರ್ ತಿಳಿಸಿದ್ದಾರೆ. -ಉಜ್ವಲ್ ರಂಜಿತ್