ಮಡಿಕೇರಿ, ಮಾ. ೨೨: ಅರೆವೈದ್ಯಕೀಯ ತರಬೇತಿ ಪಡೆದವರಿಗೆ ಕೆಲ ತಿಂಗಳುಗಳ ತರಬೇತಿ ನೀಡಿ ಗ್ರಾಮೀಣ ಪ್ರದೇಶಗಳ ವೈದ್ಯರಾಗಿ ನಿಯೋಜಿಸುವ ಕ್ರಮ ಸರಿಯಲ್ಲ ಇದರೊಂದಿಗೆ ಮಿಶ್ರವೈದ್ಯಕೀಯ (ಮಿಕ್ಸೋಪತಿ) ಪದ್ಧತಿ ಜಾರಿಯನ್ನು ಸಂಘಟನೆ ಖಂಡಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಆಕ್ಷೇಪ ವ್ಯಕ್ತಪಡಿಸಿದೆ.ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ವೆಂಕಟಚಲಪತಿ, ರಾಷ್ಟಿçÃವೈದ್ಯಕೀಯ ಆಯೋಗದ ಮಸೂದೆಯ ನಿಯಮ, ನಿಬಂಧನೆಗಳಲ್ಲಿ ಸೂಕ್ತ ಬದಲಾವಣೆ ಮಾಡಿ ಸ್ವಾಯತ್ತತೆ ಕಾಪಾಡಿಕೊಳ್ಳಬೇಕು. ಅಧುನಿಕ ವೈದ್ಯ ಕ್ಷೇತ್ರಕ್ಕೆ ಮಾರಕವಾಗಲಿರುವ ಸೆಕ್ಷನ್ ೩೨, ೫೦ ಮತ್ತು ೫೧ ಅಡಿಯಲ್ಲಿ ಅರೆವೈದ್ಯಕೀಯ ಸಿಬ್ಬಂದಿಗಳನ್ನು ವೈದ್ಯರನ್ನಾಗಿಯ (ಮೊದಲ ಪುಟದಿಂದ) ಮಾಡುವ ಕ್ರಮ ಸರಿಯಲ್ಲ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ. ವೈದ್ಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯ ಸಿಗಬೇಕು. ಗ್ರಾಹಕ ರಕ್ಷಣಾ ಕಾನೂನಿನಡಿ ವೈದ್ಯರು ನೀಡಬೇಕಾದ ಅವೈಜ್ಞಾನಿಕ ಪರಿಹಾರ ಧನಕ್ಕೆ ಮಿತಿಹೇರಬೇಕು. ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಆಗುವ ತೊಂದರೆಗಳನ್ನು ಐ.ಎಂ.ಎ ಖಂಡಿಸುತ್ತದೆ. ಟ್ರೇಡ್ ಲೈಸನ್ ್ಸ, ಅಗ್ನಿ ಶಾಮಕ ನಿರಾಪೇಕ್ಷಣಾ ಪತ್ರ ಪಡೆಯುವುದು ಅತ್ಯಂತ ಕಠಿಣವಾಗಿದ್ದು ಅದನ್ನು ಸರಳೀಕರಿಸಬೇಕು. ಈ ನಿಟ್ಟಿನಲ್ಲಿ ಸರಕಾರವು ಆಸ್ಪತ್ರೆಗಳನ್ನು ಏಕಗವಾಕ್ಷಿ ಮೂಲಕ ನೋಂದಾ ಯಿಸುವ ಪ್ರಕ್ರಿಯೆ ಆರಂಭಿಸುವAತೆ ಮನವಿ ಮಾಡಿದರು.

ವೈದ್ಯರ ಹಂತಕ್ಕೆ ಬಾರದೆ ಆದ ಸಣ್ಣಪುಟ್ಟ ತಪ್ಪುಗಳಿಗೆ ಪಿ.ಸಿ.ಪಿ.ಎನ್. ಡಿ.ಟಿ ಕಾನೂನಿನಡಿ ವೈದ್ಯರಿಗೆ ಗಂಭೀರ ಶಿಕ್ಷೆ ನೀಡುವುದನ್ನು ತಡೆಯಬೇಕು. ಸರಕಾರ ಪ್ರಾಚೀನ ವೈದ್ಯಕೀಯ ಸಂಪತ್ತಿನ ಶುದ್ಧಸ್ವರೂಪದ ರಕ್ಷಣೆಗೆ ಕ್ರಮವಹಿಸಬೇಕು. ಎಲ್ಲಾ ವಿವಿಧ ವೈದ್ಯಪದ್ಧತಿಯ ಶುದ್ಧೀಕರಣ ಐ.ಎಂ.ಎ ಗುರಿಯಾಗಿದೆ. ಪ್ರತಿಯೊಂದು ಔಷಧ ಪದ್ಧತಿಯ ವೈದ್ಯರನ್ನು ಬೇರೆ ಬೇರೆಯಾಗಿ ಗುರುತಿಸಲ್ಪಡಬೇಕು ಎಂದು ಕೋರಿದರು.

ಐ.ಎಂ.ಎ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ವೈದ್ಯರ ಕೊರತೆ ನೀಗಿಸಬೇಕಾದರೆ. ವೈದ್ಯಕೀಯ ಶಿಕ್ಷಣ ಮುಗಿದ ನಂತರ ಕಡ್ಡಾಯ ೧ ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಕಾನೂನು ಜಾರಿಯಾಗ ಬೇಕೆಂದರು.

ಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ, ಕಾರ್ಯದರ್ಶಿ ಡಾ.ಪ್ರಶಾಂತ್, ರಾಜ್ಯ ಉಪಾಧ್ಯಕ್ಷ ಡಾ.ಜಿ.ಕೆ. ಭಟ್ ಇದ್ದರು.