ಗೋಣಿಕೊಪ್ಪಲು, ಮಾ.೨೨: ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿಯಿಂದಾಗಿ ಜನರು ತತ್ತರಿಸಿದ್ದಾರೆ. ಇದರಿಂದಾಗಿ ಗ್ರಾಮದ ಜನರು ಭಯಭೀತಗೊಂಡಿದ್ದಾರೆ, ಕಾರ್ಮಿಕರು ತೋಟದಲ್ಲಿ ಕೆಲಸ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಹುಲಿ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದುಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಬೆಂಗಳೂರಿನ ಅರಣ್ಯ ಭವನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.ಅಪಾಯಕಾರಿ ಹುಲಿಯನ್ನು ಸೆರೆಹಿಡಿಯಲು ೨೭ ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ಮತ್ತೆ ಕೆಲವು ಭಾಗಗಳಲ್ಲಿ ಹುಲಿಯ ಸಂಚಾರವಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಉಳಿದ ಹುಲಿಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.ಹುಲಿ ಕಾರ್ಯಾಚರಣೆ ಸಂದರ್ಭ ಕಾಫಿ ತೋಟದಲ್ಲಿ ನಷ್ಟ ಸಂಭವಿಸಿದೆ ಇದಕ್ಕೆ ಗರಿಷ್ಠ ಪ್ರಮಾಣದಲ್ಲಿ ಆಯಾಯ ರೈತನಿಗೆ ಪರಿಹಾರ ಹಣವನ್ನು ಆದಷ್ಟು ಬೇಗನೆ ನೀಡುವಂತೆ ಗಮನ ಸೆಳೆದರು.ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪಿಸಿಸಿಎಫ್ ವಿಜಯ್ ಗೋಗಿ ಅರಣ್ಯ ಭವನದ ಗೇಟ್ ಬಳಿ ಆಗಮಿಸಿ ರೈತ ಮುಖಂಡರೊAದಿಗೆ ಮಾತುಕತೆ ನಡೆಸಿದರು. ಈಗಾಗಲೇ ಅಪಾಯಕಾರಿ ಹುಲಿ ಮೃತಪಟ್ಟಿದೆ. ಒಂದು ಹೆಣ್ಣು ಹುಲಿಯನ್ನು ಸೆರೆಹಿಡಿಯಲಾಗಿದೆ. ಮುಂದೆ ತೊಂದರೆ ಎದುರಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪಿಸಿಸಿಎಫ್ ನೀಡಿದ ಉತ್ತರಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಈಗಾಗಲೇ ಹಲವು ಹುಲಿಯ ಚಲನವಲನಗಳನ್ನು ನಾಗರಿಕರು ಕಂಡಿದ್ದಾರೆ. ನಾಗರಿಕರು ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿ ದ್ದಾರೆ. ನೆಮ್ಮದಿ ಇಲ್ಲದಂತಾಗಿದೆ ನಮ್ಮ ಕಷ್ಟ ಕೇಳುವವರು ಯಾರು? ಎಂದು ಪ್ರಶ್ನಿಸಿದರು.

ಇವರ ಮಾತಿಗೆ ಉತ್ತರಿಸಿದ ಪಿಸಿಸಿಎಫ್

ಆಗಮಿಸಿ ರೈತ ಮುಖಂಡರೊAದಿಗೆ ಮಾತುಕತೆ ನಡೆಸಿದರು.

ಈಗಾಗಲೇ ಅಪಾಯಕಾರಿ ಹುಲಿ ಮೃತಪಟ್ಟಿದೆ. ಒಂದು ಹೆಣ್ಣು ಹುಲಿಯನ್ನು ಸೆರೆಹಿಡಿಯಲಾಗಿದೆ. ಮುಂದೆ ತೊಂದರೆ ಎದುರಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪಿಸಿಸಿಎಫ್ ನೀಡಿದ ಉತ್ತರಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಈಗಾಗಲೇ ಹಲವು ಹುಲಿಯ ಚಲನವಲನಗಳನ್ನು ನಾಗರಿಕರು ಕಂಡಿದ್ದಾರೆ. ನಾಗರಿಕರು ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿ ದ್ದಾರೆ. ನೆಮ್ಮದಿ ಇಲ್ಲದಂತಾಗಿದೆ ನಮ್ಮ ಕಷ್ಟ ಕೇಳುವವರು ಯಾರು? ಎಂದು ಪ್ರಶ್ನಿಸಿದರು.

ಇವರ ಮಾತಿಗೆ ಉತ್ತರಿಸಿದ ಪಿಸಿಸಿಎಫ್

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಿಂದ ರೈತ ಸಂಘದ ಸದಸ್ಯರು ನೂರಾರು ಸಂಖ್ಯೆಯಲ್ಲಿ ತೆರಳಿದ್ದರು.

ಈ ವೇಳೆ ಜಿಲ್ಲಾ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಚಿ ಇಟ್ಟಿರ ಸಭಿತ, ರಾಜ್ಯ ಸಮಿತಿಯ ಮುಖಂಡರಾದ ಹೊಸಕೋಟೆ ಬಸವರಾಜ್ ಮುಖಂಡರಾದ ಆಲೆಮಾಡ ಮಂಜುನಾಥ್, ಚಂಗುಲAಡ ಸೂರಜ್, ಚಟ್ಟಂಗಡ ಕಂಬ ಕಾರ್ಯಪ್ಪ, ಮಂಡೇಪAಡ ಪ್ರವೀಣ್, ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಕವಿತರಾಮ್, ಮೇಚಂಡ ಕಿಶ ಮಾಚಯ್ಯ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

- ಹೆಚ್.ಕೆ.ಜಗದೀಶ್