ಕಣಿವೆ, ಮಾ. ೨೧: ಹಾರಂಗಿ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿನಿ ಸೌಮ್ಯ ಆಯ್ಕೆಯಾಗಿದ್ದಾರೆ.

೧೫ ಮತಗಳನ್ನು ಪ್ರತಿಸ್ಪರ್ಧಿ ಸ್ವಾಮಿ ಪಡೆದರೆ ೧೬ ಮತಗಳನ್ನು ಸೌಮ್ಯ ಪಡೆದು ಒಂದು ಮತದ ಅಂತರದಿAದ ಸೌಮ್ಯ ಗೆಲುವು ಸಾಧಿಸಿದ್ದಾರೆ. ಕಾರ್ಯದರ್ಶಿಯಾಗಿ ರೋಷನ್, ಮಹಿಳಾ ಕಾರ್ಯದರ್ಶಿಯಾಗಿ ಸೌಮ್ಯ, ಸಹಕಾರ್ಯದರ್ಶಿಯಾಗಿ ಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ರವಿ ಎಂ.ಎಸ್. ಮತ್ತು ರಶ್ಮಿತ ಆಯ್ಕೆಯಾದರು. ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಂಗಮೂರ್ತಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಪ್ರಾಧ್ಯಾಪಕರುಗಳಾದ ವಸಂತಕುಮಾರಿ, ಡಾ.ಹರ್ಷ, ಪುಟ್ಟರಾಜು, ಚಂದ್ರಶೇಖರ್, ನಂಜುAಡಸ್ವಾಮಿ, ತ್ಯಾಗರಾಜು ಮೊದಲಾದವರಿದ್ದರು.